
ʼNEET PGʼ ಅರ್ಜಿ ಪ್ರಕ್ರಿಯೆ ಆರಂಭ: ನೇರ ಲಿಂಕ್, ಅರ್ಹತೆ ಮಾನದಂಡಗಳ ಸಂಪೂರ್ಣ ವಿವರ ಇಲ್ಲಿದೆ
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ ಬಿಇ) ಸ್ನಾತಕೋತ್ತರ ಪದವಿ (ನೀಟ್ ಪಿಜಿ 2021) ಪ್ರವೇಶ ಪರೀಕ್ಷೆಗಾಗಿ ನೋಂದಣಿ ಆರಂಭಿಸಿದೆ. ಅರ್ಹ ವೈದ್ಯಕೀಯ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್, nbe.edu.in ನಲ್ಲಿ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನೀಟ್ ಪಿಜಿ ಅರ್ಜಿ ಭರ್ತಿ ಮಾಡುವಾಗ ಪದವಿ ಪ್ರಮಾಣಪತ್ರ ಸೇರಿದಂತೆ ಇತರ ದಾಖಲೆಗಳೊಂದಿಗೆ ತಮ್ಮ ಎಂಬಿಬಿಎಸ್ ವಿವರಗಳನ್ನು ಸಲ್ಲಿಸಬೇಕು. ಸ್ನಾತಕೋತ್ತರ ವೈದ್ಯಕೀಯ ಪ್ರವೇಶ ಪರೀಕ್ಷೆ ಏಪ್ರಿಲ್ 18ರಂದು ಮಾಸ್ಟರ್ ಆಫ್ ಸರ್ಜರಿ (ಎಂಎಸ್), ಡಾಕ್ಟರ್ ಆಫ್ ಮೆಡಿಸಿನ್ (ಎಂಡಿ) ಮತ್ತು ಸ್ನಾತಕೋತ್ತರ ಡಿಪ್ಲೊಮಾ ವೈದ್ಯಕೀಯ ಕೋರ್ಸ್ʼಗಳಿಗೆ ಪ್ರವೇಶಕ್ಕಾಗಿ ನಡೆಯಲಿದೆ. ನೀಟ್ ಪಿಜಿ ಅರ್ಜಿ ಶುಲ್ಕ 5,015 ರೂ. ಆಗಿದ್ದು, ನೀಟ್ ಪಿಜಿ ಮೂರು ಗಂಟೆ 30 ನಿಮಿಷಗಳ ಸುದೀರ್ಘ ಆನ್ ಲೈನ್ ಪೇಪರ್ ಆಗಲಿದೆ. ಇನ್ನು ಎನ್ ಬಿಇ ಈಗಾಗಲೇ ನೀಟ್ ಪಿಜಿ 2021 ಇನ್ಫರ್ಮೇಷನ್ ಬುಲೆಟಿನ್ʼನ್ನ nbe.edu.in ಬಿಡುಗಡೆ ಮಾಡಿದೆ.
ಬೆಂಗಳೂರಿಗರೇ ಗಮನಿಸಿ: ಫೆ.22 ರಿಂದ 26ರವರೆಗೆ 8 ಗಂಟೆ ವಿದ್ಯುತ್ ಕಡಿತ: ಈ ಏರಿಯಾಗಳಲ್ಲಿ ಕರೆಂಟ್ ಇರಲ್ಲ..!
ನೀಟ್ ಸ್ನಾತಕೋತ್ತರ 2021 ಅರ್ಹತಾ ಮಾನದಂಡ..!
ನೀಟ್ ಸ್ನಾತಕೋತ್ತರ ಆಕಾಂಕ್ಷಿಗಳು ಮಾನ್ಯ ಎಂಬಿಬಿಎಸ್ ಪದವಿ ಮತ್ತು ವೈದ್ಯಕೀಯ ಸಲಹಾ ಸಮಿತಿಯಿಂದ ಮಾನ್ಯತೆ ಪಡೆದ ತಾತ್ಕಾಲಿಕ ಪ್ರಮಾಣಪತ್ರವನ್ನ ಹೊಂದಿರಬೇಕು. ಅವರು ಜೂನ್ 30, 2021ರ ಒಳಗೆ ತಮ್ಮ ರೊಟಾಟೋರಿ ಇಂಟರ್ನ್ ಶಿಪ್ ಅನ್ನ ಪೂರ್ಣಗೊಳಿಸಿರಬೇಕು. ಅವರು ಪರೀಕ್ಷೆಯ ದಿನ ಮತ್ತು ಪ್ರವೇಶದ ಸಮಯದಲ್ಲಿ ಎಂಸಿಐ ಅಥವಾ ರಾಜ್ಯ ವೈದ್ಯಕೀಯ ಮಂಡಳಿಯಿಂದ ನೀಡಲಾಗುವ ತಾತ್ಕಾಲಿಕ ಅಥವಾ ಶಾಶ್ವತ ವೈದ್ಯಕೀಯ ನೋಂದಣಿ ಪ್ರಮಾಣಪತ್ರವನ್ನ ತೆಗೆದುಕೊಂಡು ಹೋಗಬೇಕಾಗುತ್ತೆ.
NEET PG 2021 ಗೆ ಅರ್ಜಿ ಸಲ್ಲಿಸಲು ಈ ಹಂತಗಳನ್ನ ಅನುಸರಿಸಿ..!
ಹಂತ 1: NBE- nbe.edu.in ಅಧಿಕೃತ ವೆಬ್ ಸೈಟ್ʼಗೆ ಭೇಟಿ ನೀಡಿ.
ಹಂತ 2: ಯೂಸರ್ ಐಡಿ ಮತ್ತು ಪಾಸ್ ವರ್ಡ್ ಪಡೆಯಲು ನೋಂದಣಿ ನಮೂನೆಯನ್ನು ಭರ್ತಿ ಮಾಡಿ
ಹಂತ 3: ನಂತರ ಎಸ್ ಎಂಎಸ್ ಮತ್ತು ಇಮೇಲ್ ಮೂಲಕ ಯೂಸರ್ ಐಡಿ ಮತ್ತು ಪಾಸ್ ವರ್ಡ್ ಕಳುಹಿಸಲಾಗುತ್ತದೆ.
ಹಂತ 4: ಅರ್ಜಿ ನಮೂನೆ ಭರ್ತಿ ಮಾಡಿ – ವೈಯಕ್ತಿಕ ವಿವರಗಳು, ವಿದ್ಯಾರ್ಹತೆ ವಿವರಗಳು (ಎಂಬಿಬಿಎಸ್ / ಪ್ರಾಥಮಿಕ ವೈದ್ಯಕೀಯ ವಿದ್ಯಾರ್ಹತೆ ವಿವರಗಳು, ಇಂಟರ್ನ್ ಶಿಪ್ ವಿವರಗಳು, SMC/MCI ನೋಂದಣಿ ವಿವರಗಳು), ಪರೀಕ್ಷಾ ಕೇಂದ್ರದ ವಿವರಗಳು
ಹಂತ 5: ಇತ್ತೀಚಿನ ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಸಹಿಯನ್ನ ನಿಗದಿತ ನಮೂನೆಯಲ್ಲಿ ಅಪ್ಲೋಡ್ ಮಾಡಿ.
ಹಂತ 6: ಪರೀಕ್ಷಾ ನಗರವನ್ನ ಆಯ್ಕೆಮಾಡಿ
ಹಂತ 7: ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಮೋಡ್ʼನಲ್ಲಿ ಶುಲ್ಕ ಪಾವತಿ ಮಾಡಿ.
ಹಂತ 8: ಅರ್ಜಿ ನಮೂನೆಯನ್ನ ಸಲ್ಲಿಸಿ. ಭರ್ತಿ ಮಾಡಿದ ನೀಟ್ ಪಿಜಿ ಅರ್ಜಿ ನಮೂನೆಯನ್ನ ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಟ್ರಾನ್ಸಾಕ್ಷನ್ ಐಡಿ ಪ್ರಿಂಟ್ ಮಾಡಿ ಪ್ರಿಂಟೌಟ್ ತೆಗೆಯಿರಿ.
ಮುಖ್ಯಮಂತ್ರಿ ಬಳಸುವ ಹೆಲಿಕಾಪ್ಟರ್ ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ ದಂಪತಿಗಳು
ನೀಟ್ ಪಿಜಿ 2021: ಅಗತ್ಯ ದಾಖಲೆಗಳು
ಎಂಬಿಬಿಎಸ್ / ಬಿಡಿಎಸ್ ಪದವಿ ಪ್ರಮಾಣ ಪತ್ರ, ಇಂಟರ್ನ್ ಶಿಪ್ ಸರ್ಟಿಫಿಕೇಟ್ ಸೇರಿದಂತೆ ದಾಖಲಾತಿಗಳ ಪಟ್ಟಿಯನ್ನ ಎನ್ ಇಇಟಿ ಪಿಜಿ ಅಭ್ಯರ್ಥಿಗಳು ಮಾರ್ಚ್ 31ರೊಳಗೆ ಪೂರ್ಣಗೊಳಿಸಿರಬೇಕು.
ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳಲ್ಲಿ ಬದಲಾವಣೆ ಮಾಡಲು ಅವಕಾಶ ನೀಡಲು ಎಂಸಿಸಿಯು ನೀಟ್ ಪಿಜಿ ತಿದ್ದುಪಡಿ ವಿಂಡೋ ತೆರೆಯಲಿದೆ. ಆದರೆ ಅಭ್ಯರ್ಥಿಗಳು ನಿಗದಿಪಡಿಸಿದ ಪರೀಕ್ಷಾ ನಗರದಲ್ಲಿ ಬದಲಾವಣೆಗಳನ್ನ ಮಾಡಲು ಸಾಧ್ಯವಿಲ್ಲ.
ಯಾವುದೇ ಅನುಮಾನಗಳು ಬಂದರೆ, ಅಭ್ಯರ್ಥಿಗಳು ಸಹಾಯವಾಣಿಯನ್ನು neetpg@nbe.edu.in ಸಂಪರ್ಕಿಸಬಹುದು ಅಥವಾ NBE ಅಭ್ಯರ್ಥಿ ಕೇರ್ ಸಹಾಯವಾಣಿ ಸಂಖ್ಯೆ – 1800 267 4003 ಗೆ ಕರೆ ಮಾಡಬಹುದು. ಅಭ್ಯರ್ಥಿಯ ಅಪ್ಲಿಕೇಶನ್ ಐಡಿ, ಕರೆಸ್ಪಾಂಡೆನ್ಸ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಇಮೇಲ್ʼನಲ್ಲಿ ನಮೂದಿಸಬೇಕು.
ಬ್ರೇಕಿಂಗ್: ಗುಜರಾತ್ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿಗೆ ʼಬಿಗ್ ಲೀಡ್ʼ