ʼನೀಟ್‌ʼ ಪರೀಕ್ಷೆಯಲ್ಲಿ ʼಆಕಾಂಕ್ಷಾ ಸಿಂಗ್ʼ 720ಕ್ಕೆ 720 ಅಂಕ ಪಡೆದ್ರು 2ನೇ ಸ್ಥಾನ ನೀಡಿದ್ದೇಕೆ ಗೊತ್ತಾ..? – Kannada News Now


India

ʼನೀಟ್‌ʼ ಪರೀಕ್ಷೆಯಲ್ಲಿ ʼಆಕಾಂಕ್ಷಾ ಸಿಂಗ್ʼ 720ಕ್ಕೆ 720 ಅಂಕ ಪಡೆದ್ರು 2ನೇ ಸ್ಥಾನ ನೀಡಿದ್ದೇಕೆ ಗೊತ್ತಾ..?

ನವದೆಹಲಿ: ಅಕ್ಟೋಬರ್‌ 16.. ನೀಟ್‌ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಇದೊಂದು ಐತಿಹಾಸಿಕ ದಿನವಾಗಿತ್ತು. ಈ ಸ್ಪರ್ಧಾತ್ಮಕ ಪರೀಕ್ಷೆಯ ಮೇಲೆ ಆನೇಕ ವಿದ್ಯಾರ್ಥಿಗಳ ಭವಿಷ್ಯ ನಿಂತಿತ್ತು. ಇನ್ನು ಸಂಜೆಯಾಗುತ್ತಿದ್ದಂತೆ ನೀಟ್‌ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಅಂಕ ಗಳಿಸಿದ ವಿದ್ಯಾರ್ಥಿ ಒಡಿಶಾ ಮೂಲದ ಶೊಯೆಬ್ ಅಫ್ತಾಬ್ ಎನ್ನುವ ಮಾಹಿತಿಯೂ ಹೊರಬಿತ್ತು. 2020ನೇ ಸಾಲಿನ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ 720/720 ಅಂಕಗಳನ್ನ ಗಳಿಸಿದ ಶೊಯೆಬ್ ಇತಿಹಾಸ ಸೃಷ್ಟಿಸಿದರು.

ಈ ಸಾಧನೆ ಗಾಗಿ ಬಾಲಕ ಸಾಕಷ್ಟು ಶ್ರಮ ವಹಿಸಿದ್ದು, ಆತನ ಸಾಧನೆಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದರು. ಆದರೆ, ದೆಹಲಿ ಮೂಲದ ಮತ್ತೊಬ್ಬ ಬಾಲಕಿ ಆಕಾಂಕ್ಷಾ ಸಿಂಗ್ ಎನ್ನುವ ವಿದ್ಯಾರ್ಥಿನಿಯೂ ಈ ನೀಟ್‌ ಪರೀಕ್ಷೆಯಲ್ಲಿ 720/720 ಅಂಕಗಳನ್ನ ಗಳಿಸಿದ್ದಾರೆ. ಆದ್ರೆ, ಈಕೆಗೆ 2ನೇ ರ್ಯಾಂಕ್‌ ನೀಡಲಾಗಿದೆ. ನೂರಕ್ಕೆ ನೂರರಷ್ಟು ಅಂಕ ಗಳಿಸಿ ಸಾಧನೆ ಮಾಡಿದ ಈ ವಿದ್ಯಾರ್ಥಿನಿಗೆ ಎನ್‌ ಟಿಎ ಮೊದಲ ಸ್ಥಾನ ನೀಡಿಲ್ಲ ಯಾಕೆ.? ಈಕೆಗೆ 2ನೇ ಸ್ಥಾನ ನೀಡಲು ಕಾರಣವೇನು.?

ಇಬ್ಬರು ಅಭ್ಯರ್ಥಿಗಳು ಎಲ್ಲಾ ವಿಷಯಗಳಲ್ಲಿ ಸಮಾನ ಅಂಕಗಳನ್ನ ಪಡೆದಿದ್ದರೆ. ಇಂತಹ ಪಕ್ಷಪಾತ ನಡವಳಿಕೆಯ ಬಗ್ಗೆ ನೆಟ್ಟಿಗರು NTAಗೆ ಪ್ರಶ್ನೆಗಳನ್ನ ಎತ್ತಿದ್ದಾರೆ. ಏರ್ 1 ಆಗಿ ಶೋಯೆಬ್ ಅಫ್ತಾಬ್ ಮತ್ತು ಆಕಾಂಕ್ಷಾ ಸಿಂಗ್ ಅವರನ್ನು AIR 2 ಎಂದು ನೀಡಿ ಎಂದು ಜನರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೌದು, ಕುತೂಹಲದ ಸಂಗತಿಯೆಂದ್ರೆ, ಈ ಇಬ್ಬರೂ ಅಭ್ಯರ್ಥಿಗಳು ಮೀಸಲು ರಹಿತ ವರ್ಗದಿಂದ ಬಂದಿದ್ದಾರೆ. ಹಾಗೂ ಎಲ್ಲಾ ನಾಲ್ಕು ವಿಷಯಗಳಲ್ಲಿ ಒಂದೇ ರೀತಿಯ ಸಮಾನ ಅಂಕಗಳನ್ನ ಗಳಿಸಿದ್ದಾರೆ.

ಇಂತಹ ಸನ್ನಿವೇಶಗಳಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು ಟೈ-ಬ್ರೇಕರ್ ನೀತಿಯನ್ನ ಅಭಿವೃದ್ಧಿಪಡಿಸಿದೆ. ಈ ನೀತಿಯನ್ನ ಅಭ್ಯರ್ಥಿಗಳ ಕಾರ್ಯಕ್ಷಮತೆ ಮತ್ತು ಮೂಲ ಅರ್ಹತೆಯ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮತ್ತು ಶ್ರೇಯಾಂಕ ನೀಡಲು ವಿನ್ಯಾಸಗೊಳಿಸಲಾಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಎನ್ ಟಿಎಯ ಹಿರಿಯ ಅಧಿಕಾರಿಯೊಬ್ಬರು, ಎನ್ ಟಿಎಯ ಟೈ-ಬ್ರೇಕಿಂಗ್ ನಿಯಮಗಳ ಪ್ರಕಾರ ಇಬ್ಬರು ಅಭ್ಯರ್ಥಿಗಳು ಒಂದೇ ಅಂಕಗಳನ್ನು ಪಡೆದಾಗ, ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅವರ ಶ್ರೇಯಾಂಕಗಳನ್ನ ನಿರ್ಧರಿಸಲಾಗುತ್ತದೆ.

ಪರೀಕ್ಷೆಯಲ್ಲಿ ಪಡೆದ ಸಾಪೇಕ್ಷ ಅಂಕಗಳನ್ನ ಬಳಸಿಕೊಂಡು ಅಭ್ಯರ್ಥಿಗಳಿಗೆ ಶ್ರೇಯಾಂಕಗಳನ್ನ ನಿಗದಿಪಡಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ, ಅಭ್ಯರ್ಥಿಗಳು ತಪ್ಪು ಉತ್ತರಗಳ ಸಂಖ್ಯೆಯನ್ನ ಗಣನೆಗೆ ತೆಗೆದುಕೊಂಡು ಮತ್ತಷ್ಟು ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.

ಅಫ್ತಾಬ್ ಮತ್ತು ಆಕಾಂಕ್ಷಾ ನೀಟ್ ಪರೀಕ್ಷೆಯಲ್ಲಿ ಪರಿಪೂರ್ಣ ಅಂಕ ಪಡೆದಿರುವುದರಿಂದ ಅವರ ಅಂಕಗಳ ಹೋಲಿಕೆ ಪ್ರಶ್ನೆ ಉದ್ಭವಿಸುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಅಭ್ಯರ್ಥಿಗಳಿಗೆ ಶ್ರೇಯಾಂಕಗಳನ್ನ ನಿಯೋಜಿಸಲು ಅಭ್ಯರ್ಥಿಗಳ ವಯಸ್ಸಿನ ವ್ಯತ್ಯಾಸದ ಮಾನದಂಡವನ್ನ NTA ಆಯ್ಕೆ ಮಾಡುತ್ತದೆ. ಅದ್ರಂತೆ, ವಯೋಮಿತಿಯಲ್ಲಿ ಹಿರಿಯರಾಗಿರುವ ಅಭ್ಯರ್ಥಿಗಳಿಗೆ ಕಿರಿಯರಗಿಂತ ಹೆಚ್ಚಿನ ಆದ್ಯತೆ ನೀಡಲಾಗುವುದು.

ಹಾಗಾಗಿ ಅಫ್ತಾಬ್ ಗಿಂತ ವಯಸ್ಸಿನಲ್ಲಿ ಚಿಕ್ಕವಳಾಗಿರುವ ಆಕಾಂಕ್ಷಾಗೆ 2ನೇ ಸ್ಥಾನ ನೀಡಲಾಗಿದೆ ಎಂದು ಎನ್ಟಿಎ ವಿವರಸಿದೆ. ಆದ್ರೆ, ಈ ಸಂಸ್ಥೆಯ ಈ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗ್ತಿದ್ದು, ಅಭ್ಯರ್ಥಿಯು ಕಿರಿಯಳು ಎನ್ನುವ ಕಾರಣಕ್ಕೆ ಆಕೆಯ ಕಠಿಣ ಪರಿಶ್ರಮವನ್ನ ಕೆಳದರ್ಜೆಗೆ ತಳ್ಳುವುದು ಸರಿಯಲ್ಲ ಎನ್ನುತ್ತಿದ್ದಾರೆ.

ಹಾಗಾಗಿ ಎನ್ ಟಿಎಯ ನಿಯಮಗಳನ್ನ ಸರಿಪಡಿಸುವ ಸಮಯ ಬಂದಿದ್ಯಾ? ಈ ಇಬ್ಬರು ಅಭ್ಯರ್ಥಿಗಳಿಗೂ AIR 1 ಅನ್ನು ನೀಡಲು ಸಾಧ್ಯವಿಲ್ಲವೇ? ಒಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಅಳೆಯಲು ವಯಸ್ಸು ಹೇಗೆ ಒಂದು ಮಾನದಂಡವಾಗಬೇಕು?

ಹೌದು, ಈ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನ ಹುಟ್ಟು ಹಾಕುತ್ತಿವೆ. ಆದ್ರೆ, ಎನ್ ಟಿಎ ತನ್ನ ನಿರ್ಧಾರವನ್ನ ರದ್ದು ಮಾಡಿ, ನಿಯಮಗಳನ್ನ ಪುನರುಜ್ಜೀವಿಸಿ, ಅದೇ AIR 1 ಸ್ಥಾನವನ್ನ ಆಕಾಂಕ್ಷಾ ಸಿಂಗ್ ನೀಡುತ್ತಾ ಎನ್ನುವ ಕುತೂಹಲದ ಪ್ರಶ್ನೆ ಮೂಡಿದೆ.
error: Content is protected !!