ಕೆಎನ್ ಎನ್ ನ್ಯೂಸ್ ಡೆಸ್ಕ್ : ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Neeraj Chopra) ಅವರು ಗುರುವಾರ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್(Diamond League)ನಲ್ಲಿ 89.94 ಮೀ. ಓಪನಿಂಗ್ ಥ್ರೋ ಮೂಲಕ ಹೊಸ ರಾಷ್ಟ್ರೀಯ ದಾಖಲೆ ಸೃಷ್ಟಿಸಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ಜೂನ್ ತಿಂಗಳ ಆರಂಭದಲ್ಲಿ ತುರ್ಕುದಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ ನೀರಜ್ 89.30 ಮೀ. ಜಾವೆಲಿನ್ ಎಸೆದು ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದರು.
ನಿನ್ನೆ ನಡೆದ ಡೈಮಂಡ್ ಲೀಗ್‌ನಲ್ಲಿ ಗ್ರೆನಡಾದ ಹಾಲಿ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ ತಮ್ಮ ಮೂರನೇ ಪ್ರಯತ್ನದಲ್ಲಿ 90.31 ಮೀ ಜಾವೆಲಿನ್ ಎಸೆಯುವ ಮೂಲಕ ದಾಖಲೆ ಸೃಷ್ಟಿಸಿದ್ದಾರೆ. ಅಂತಿಮವಾಗಿ, ಚೋಪ್ರಾ ತನ್ನ ಮೊದಲ ಪ್ರಯತ್ನವನ್ನು ಉತ್ತಮಗೊಳಿಸಲು ವಿಫಲರಾಗಿದ್ದು, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
It felt amazing to be back on the Diamond League circuit and even better to get a new PB!
All the throwers put up a great show tonight for the crowd in Stockholm!Next stop ➡️ Representing 🇮🇳 at the World Championships in Eugene pic.twitter.com/OpiXyrp4wv
— Neeraj Chopra (@Neeraj_chopra1) June 30, 2022
Big news: ʻಗರ್ಭದಲ್ಲಿರುವಾಗಲೇ ಮಗುವನ್ನು ದತ್ತು ತೆಗೆದುಕೊಳ್ಳುವಂತಿಲ್ಲʼ: ಹೈಕೋರ್ಟ್ ಮಹತ್ವದ ತೀರ್ಪು
BREAKING NEWS : ಕೊಡಗು- ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ತಡರಾತ್ರಿ ಮತ್ತೆ ಭೂಕಂಪನ