ನವದೆಹಲಿ: ಯುಜೀನ್ನಲ್ಲಿ ಶನಿವಾರ ನಡೆದ ಡೈಮಂಡ್ ಲೀಗ್ ಫೈನಲ್ನಲ್ಲಿ ನೀರಜ್ ಚೋಪ್ರಾ 83.80 ಮೀಟರ್ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ಚ್ 84.24 ಮೀಟರ್ ಎಸೆದು ಡೈಮಂಡ್ ಲೀಗ್ ಚಾಂಪಿಯನ್ ಆದರು. ಚೋಪ್ರಾ 2022 ರಲ್ಲಿ 88.44 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ ಕಿರೀಟವನ್ನು ಗೆದ್ದಿದ್ದರು. ಚೋಪ್ರಾ ಈಗ ಸೆಪ್ಟೆಂಬರ್ 23ರಿಂದ ಹ್ಯಾಂಗ್ ಝೌನಲ್ಲಿ ಪ್ರಾರಂಭವಾಗುವ ಏಷ್ಯನ್ ಕ್ರೀಡಾಕೂಟದಲ್ಲಿ ಆಡಲಿದ್ದಾರೆ.