ಈ ಎಣ್ಣೆಯ ಸುಗಂಧವೇ ಸಾಕು… ಹಲವು ಸಮಸ್ಯೆಗಳು ದೂರಾಗಲು – Kannada News Now


Beauty Tips Lifestyle

ಈ ಎಣ್ಣೆಯ ಸುಗಂಧವೇ ಸಾಕು… ಹಲವು ಸಮಸ್ಯೆಗಳು ದೂರಾಗಲು

ಸ್ಪೆಷಲ್ ಡೆಸ್ಕ್ : ನೀಲಗಿರಿ ಎಣ್ಣೆ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಎಲ್ಲರಿಗೂ ಚೆನ್ನಾಗಿಯೇ ತಿಳಿದಿದೆ. ಆದರೆ ನಿಮಗೆ ಅದರಿಂದ ಸೌಂದರ್ಯ ಮತ್ತು ಆರೋಗ್ಯದ ಮೇಲೆ ಎಷ್ಟೊಂದು ಪ್ರಯೋಜನಗಳಿವೆ ಅನ್ನೋದು ಗೊತ್ತಾ? ನೀಲಗಿರಿ ಎಣ್ಣೆಯ ಸುಗಂಧವೇ ಸಾಕು ಸಾಕಷ್ಟು ಸಮಸ್ಯೆಗಳು ದೂರವಾಗುತ್ತವೆ…

ನೀಲಗಿರಿ ಎಣ್ಣೆಯಿಂದ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ಹೇಳುತ್ತೇವೆ ನೋಡಿ…

ತ್ವಚೆಯ ರಕ್ಷಣೆ : ಒಣ ಹವೆಯಿಂದ ತ್ವಚೆಗೆ ಹಾನಿಯಾಗುತ್ತದೆ. ಶುಷ್ಕ ಗಾಳಿಯ ಕಾರಣದಿಂದ ನಮ್ಮ ತ್ವಚೆಯಲ್ಲಿ ಸೂಕ್ಷ್ಮ ಜೀವಾಣುಗಳು ಸೇರಿಕೊಂಡು ಹಲವಾರು ಸಮಸ್ಯೆಗಳನ್ನುಂಟು ಮಾಡುತ್ತದೆ. ಈ ಸಮಯದಲ್ಲಿ ನೀಲಗಿರಿ ಬಳಕೆ ಉತ್ತಮ. ನೀಲಗಿರಿ ಎಣ್ಣೆಯಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್‌ ಗುಣ ಇದೆ. ಇದು ತ್ವಚೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಮಾಂಸಖಂಡಗಳ ನೋವು ನಿವಾರಣೆ : ಇದು ಮಾಂಸಖಂಡಗಳ ನೋವು ನಿವಾರಣೆ ಮಾಡುವುದರ ಜೊತೆಗೆ ಸೂರ್ಯನ ಹಾನಿಕಾರಕ ಪಾರಾಬ್ಯಾಂಗನಿ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ.

ಅರೋಮಾಥೆರಪಿಗಾಗಿ : ಮೂಡ್‌ನ್ನು ಚೆನ್ನಾಗಿರಲು ಹಾಗೂ ಹೃದಯ ಮತ್ತು ಮನಸ್ಸಿಗೆ ಆರಾಮ ನೀಡಲು ನೀಲಗಿರಿ ಎಣ್ಣೆ ಲಾಭದಾಯಕವಾಗಿದೆ. ನೀಲಗಿರಿ ಎಸೆನ್ಶಿಯಲ್‌ ಆಯಿಲ್‌ ತುಂಬಾ ಪರಿಮಳವನ್ನು ಹೊಂದಿದೆ ಇದರಿಂದ ಫ್ರೆಶ್‌ನೆಸ್‌ ಹಾಗೂ ಆರಾಮ ಸಿಗುತ್ತದೆ.

ಕೂದಲಿಗಾಗಿ : ನೀಲಗಿರಿ ಎಣ್ಣೆಯಲ್ಲಿ ಆ್ಯಂಟಿಫಂಗಲ್‌ ಗುಣ ಇರುತ್ತದೆ. ಇದು ರೋಗ ಹರಡುವಿಕೆಯನ್ನು ತಡೆಯುತ್ತದೆ. ಇದು ತಲೆಯ ರೋಮ ಚಿದ್ರಗಳನ್ನು ತೆರೆಯುತ್ತದೆ. ಅಲ್ಲದೆ ಕೂದಲಿಗೆ ಬುಡದಿಂದಲೆ ಪೋಷಣೆ ನೀಡುತ್ತದೆ. ಈ ಎಣ್ಣೆ ಬಳಕೆ ಮಾಡುವುದರಿಂದ ಕೂದಲು ದಪ್ಪವಾಗುತ್ತದೆ ಹಾಗೂ ತುರಿಕೆಯಿಂದ ಆರಾಮ ಸಿಗುತ್ತದೆ.