ಬೆಂಗಳೂರು: ರಾಜ್ಯದ ಪ್ರಾದೇಶಿಕ ಪಕ್ಷವಾಗಿರುವಂತ ಜೆಡಿಎಸ್ ನಲ್ಲಿ ( JDS Party ) ಮಹತ್ವದ ಮೇಜರ್ ಸರ್ಜರಿ ನಡೆದಿದೆ. ಜೆಡಿಎಸ್ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗಾಗಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಅವರ ಅಧ್ಯಕ್ಷತೆಯಲ್ಲಿ ನೂತನ ಕೋರ್ ಕಮಿಟಿ ( New Core Committee ) ರಚನೆ ಮಾಡಲಾಗಿದೆ. ಅಲ್ಲದೇ ಜೆಡಿಎಸ್ ಪಕ್ಷದ ನೂತನ ಕಾರ್ಯಾಧ್ಯಕ್ಷರನ್ನಾಗಿ ಎನ್ ಬಿ ನಬಿ ( NB Nabi ) ಅವರನ್ನು ನೇಮಕ ಮಾಡಲಾಗಿದೆ.
ಇಂದು ಜೆಡಿಎಸ್ ಕಚೇರಿಯಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಸುದ್ದಿಗೋಷ್ಠಿ ನಡೆಸಿ ಜೆಡಿಎಸ್ ವರಿಷ್ಠ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪಟ್ಟಿಯನ್ನು ಬಿಡುಗಡೆ ಮಾಡಿದರು.
ಬುದ್ಧಿ ಸರಿಯಿರೋರು ಯಾರೂ ಕಾಂಗ್ರೆಸ್ ಗೆ ಹೋಗೋದಿಲ್ಲ – ಗೃಹ ಸಚಿವ ಅರಗ ಜ್ಞಾನೇಂದ್ರ
ಹೀಗಿದೆ.. ಜೆಡಿಎಸ್ ಕೋರ್ ಕಮಿಟಿಯ 20 ಸದಸ್ಯರ ಪಟ್ಟಿ
1.ಬಂಡೆಪ್ಪ ಕಾಶೆಂಪೂರ್- ಅಧ್ಯಕ್ಷರು
2.ವೆಂಕಟರಾವ್ ನಾಡಗೌಡ-ಸದಸ್ಯರು
3.ಸಿ.ಎಸ್.ಪುಟ್ಟರಾಜು—ಸದಸ್ಯರು
4.ಪ್ರಜ್ವಲ್ ರೇವಣ್ಣ—ಸದಸ್ಯರು
5.ಕುಪೇಂದ್ರ ರೆಡ್ಡಿ—ಸದಸ್ಯರು
6.ಮೊಹಮ್ಮದ್ ಝಫ್ರುಲ್ಲಾಖಾನ್-ಸದಸ್ಯರು
7.ಎಂ.ಕೃಷ್ಣಾರೆಡ್ಡಿ-ಸದಸ್ಯರು
8.ರಾಜಾ ವೆಂಕಟಪ್ಪನಾಯಕ-ಸದಸ್ಯರು
9.ಬಿ.ಎಂ.ಫಾರೂಕ್-ಸದಸ್ಯರು
10.ಕೆ.ಎ.ತಿಪ್ಪೇಸ್ವಾಮಿ-ಸದಸ್ಯರು & ಸಂಚಾಲಕರು
11.ವೈಎಸ್ʼವಿ ದತ್ತ—ಸದಸ್ಯರು
12.ಕೆ.ಎಂ.ತಿಮ್ಮರಾಯಪ್ಪ-ಸದಸ್ಯರು
13.ಟಿ.ಎ.ಶರವಣ-ಸದಸ್ಯರು
14.ಶಾರದಾ ಪೂರ್ಯನಾಯಕ್-ಸದಸ್ಯರು
15.ನಾಸೀರ್ ಭಗವಾನ್-ಸದಸ್ಯರು
16.ಹನುಮಂತಪ್ಪ ಬಸಪ್ಪ ಮಾವಿನಮರದ-ಸದಸ್ಯರು
17.ರೂತ್ ಮನೋರಮಾ-ಸದಸ್ಯರು
18.ಸುಧಾಕರ್ ಎಸ್. ಶೆಟ್ಟಿ-ಸದಸ್ಯರು
19.ವಿ.ನಾರಾಯಣಸ್ವಾಮಿ-ಸದಸ್ಯರು
20.ಸಮೃದ್ಧಿ ಮಂಜುನಾಥ್-ಸದಸ್ಯರು
ವಿಶೇಷ ಆಹ್ವಾನಿತರು
ಹೆಚ್.ಡಿ.ದೇವೇಗೌಡರು, ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು
ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಿಉ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರು
ಹೆಚ್.ಕೆ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷರು
ಎನ್.ಎಂ.ನಬಿ ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರಾಗಿ ನೇಮಕ
ಮಾಜಿ ಸಚಿವ ಎನ್.ಎಂ.ನಬಿ ಅವರನ್ನು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಹಾಗೆಯೇ ಶಾಸಕ ರಾಜಾ ವೆಂಕಟಪ್ಪ ನಾಯಕ ದೊರೆ ಅವರನ್ನು ಜೆಡಿಎಸ್ ಪರಿಶಿಷ್ಠ ಪಂಗಡ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು ನೇಮಕ ಮಾಡಿದ್ದಾರೆ.
ಬುದ್ಧಿ ಸರಿಯಿರೋರು ಯಾರೂ ಕಾಂಗ್ರೆಸ್ ಗೆ ಹೋಗೋದಿಲ್ಲ – ಗೃಹ ಸಚಿವ ಅರಗ ಜ್ಞಾನೇಂದ್ರ