ಸುಭಾಷಿತ :

Monday, April 6 , 2020 4:12 AM

‘ನವರತ್ನ’ ಚಿತ್ರದ ಮತ್ತೊಂದು ಸಾಂಗ್ ಯೂಟ್ಯೂಬ್ ನಲ್ಲಿ ರಿಲೀಸ್ : ‘ಮುದ್ದು ಮುದ್ದು’ ಮಾತಿನ ಹಾಡು ಸಿಕ್ಕಾಪಟ್ಟೆ ವೈರಲ್


Sunday, February 16th, 2020 7:14 pm

ಸಿನಿಮಾ ಡೆಸ್ಕ್ : ಕಳೆದ ಶುಕ್ರವಾರ ಸ್ಯಾಂಡಲ್ ವುಡ್ ಬೆಳ್ಳಿ ತೆರೆಗೆ 8ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆ ಕಂಡ್ವು. ಅಂತಹ ಚಿತ್ರಗಳಲ್ಲಿ ಬೆಸ್ಟ್ ಅಂಡ್ ಬೆಟರ್ ಎಂಬಂತೆ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದು ಮಾತ್ರ, ಒಂದೇ ಒಂದು ಚಿತ್ರ. ಅದೇ ಪ್ರತಾಪ್ ರಾಜ್ ಮೊದಲ ಬಾರಿಗೆ ನಟಿಸಿ, ನಿರ್ದೇಶಿಸಿರುವಂತ ನವರತ್ನ ಚಿತ್ರ. ಫೆಬ್ರವರಿ 14ರಂದು ಬಿಡುಗಡೆಯಾಗಿ ರನ್ನಿಂಗ್ ಸಕ್ಸಸ್ ಪುಲ್ ಆಗಿರುವ ಚಿತ್ರದ ಮತ್ತೊಂದು ಸಾಂಗ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಮುದ್ದು ಮುದ್ದು ಮಾತನು ಕೇಳಿ ಎನ್ನುವಂತ ಹಾಡು, ಇದೀಗ ಯೂಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ.

ಕನ್ನಡ ಸಿನಿತೆರೆಗೆ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಯುವ ಪಡೆಗಳ ಚಿತ್ರ ನವರತ್ನ ಸಿನಿಮಾ ಬಿಡುಗಡೆಯಾಗಿತ್ತು. ಚಿತ್ರ, ಚಿತ್ರಕತೆ, ಮನಮೋಹಕ ದೃಶ್ಯಾವಳಿ ಮೂಲಕ, ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿ ಕೂಡ ಆಗಿದೆ. ಇಂತಹ ಚಿತ್ರದ ಮತ್ತೊಂದು ಸಾಂಗ್ ಡಿ ಬೀಟ್ಸ್ ಮ್ಯೂಸಿಕ್ ನ ಅಫೀಷಿಯಲ್ ಯೂಟ್ಯೂಬ್ ಪೇಟ್ ನಲ್ಲಿ ಬಿಡುಗಡೆಯಾಗಿದೆ. ಬಿಡುಗಡೆಯಾದ ಕೆಲವೇ ಸಮಯದಲ್ಲಿ ಸಿನಿ ರಸಿಕರ ಮನಸ್ಸನ್ನು ಸೆರೆ ಹಿಡಿಯುವಲ್ಲಿ ಯಶಸ್ವಿ ಕೂಡ ಆಗಿದೆ.

ಅಂದಹಾಗೇ ನವರತ್ನ ಚಿತ್ರದ ಮುದ್ದು ಮುದ್ದು ಮಾತನು ಕೇಳಿ ಹಾಡು, ಯೂಟ್ಯೂಬ್ ನಲ್ಲಿ ವೈರಲ್ ಆಗಿದೆ. ಈ ಚಿತ್ರ ಪ್ರತಾಪ್ ರಾಜ್ ನಟಿಸಿ, ನಿರ್ದೇಶಿಸಿದ್ರೇ, ಚಿತ್ರದಲ್ಲಿ ನಾಯಕಿಯಾಗಿ ಮೋಕ್ಷ ಕುಶಾಲ್ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಲೋಹಿತಾಶ್ವ ಚಿತ್ರದ ತಾರಾಗಣದಲ್ಲಿದ್ದಾರೆ. ಅಮಿತ್ ಅವರ ನಗೆ ಹಾಸ್ಯ ಚಿತ್ರ ಪ್ರೇಕ್ಷಕರನ್ನು ಎಲ್ಲಿಯೂ ಚಿತ್ರದಲ್ಲಿ ಬೋರ್ ಹೊಡೆಸದಂತೆ ಸೆರೆ ಹಿಡಿಯುವಂತಿದೆ.

ಈ ಚಿತ್ರಕ್ಕೆ ವೆಂಗಿ ಅವರ ಸಂಗೀತವಿದ್ದರೇ, ಸುಂದರವಾದ ದೃಶ್ಯಗಳ ಮೂಲಕ ಚಿತ್ರ ರಸಿಕರನ್ನು ಸೆಳೆಯೋದು ರಿಜೋ ಪಿ ಜಾನ್ ಹಾಗೂ ಲಕ್ಷ್ಮೀ ರಾಜ್ ಛಾಯಾಗ್ರಹಣದ ಮೂಲಕವಾಗಿದೆ. ಪ್ರವೀಣ್ ಪೌಲ್ ಹಿನ್ನಲೆ ಸಂಗೀತ ಕಿವಿಗೆ ಇಂಪು ನೀಡುತ್ತೆ. ಭರತ್ ಜೆ ಕಡೂರ್ ಅವರ ಗೀತ ಸಾಹಿತ್ಯ ಪ್ರತಿಯೊಂದು ಹಾಡುಗಳಲ್ಲೂ ಮನ ಸೆಳೆಯುತ್ತೆ. ಇಂತಹ ಚಿತ್ರವನ್ನು ಸಿನಿ ಪ್ರೇಕ್ಷಕರಿಗೆ ಅಚ್ಚುಕಟ್ಟಾಗಿ ಕಟ್ಟಿಕೊಡುವಂತೆ ಸಂಕಲನ ಕಾರ್ಯ ನಿರ್ವಹಿಸಿರೋದು ವಿಷ್ಣ ಎಸ್ ಅವರಾಗಿದ್ದಾರೆ. ಈ ಚಿತ್ರಕ್ಕೆ ಚಂದ್ರಶೇಖರ್ ಸಿ ಪಿ ಮಂಡ್ಯ ಅವರು ನಿರ್ಮಾಪಕರಾಗಿ ತೆರೆಗೆ ತಂದಿರುವ ಚಿತ್ರವಾಗಿದೆ.

ವರದಿ : ವಸಂತ ಬಿ ಈಶ್ವರಗೆರೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions