ಈ ನ್ಯಾಚುರಲ್ ವಸ್ತುಗಳಿಂದಲೂ ಸೌಂದರ್ಯದ ಮೇಲೆ ಪರಿಣಾಮ ಬೀಳೋ ಸಾಧ್ಯತೆ ಇದೆ…
Tuesday, December 3rd, 2019 12:49 pm
ಸ್ಪೆಷಲ್ ಡೆಸ್ಕ್ : ಸಾಮಾನ್ಯವಾಗಿ ಸೌಂದರ್ಯ ಹೆಚ್ಚುಸುವಲ್ಲಿ ನ್ಯಾಚುರಲ್ ವಸ್ತುಗಳನ್ನು ಬಳಕೆ ಮಾಡುತ್ತೇವೆ. ಆದರೆ ಕೆಲವೊಂದು ನ್ಯಾಚುರಲ್ ವಸ್ತುಗಳಿಂದ ಸೌಂದರ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಅನ್ನೋದು ನಿಮಗೆ ಗೊತ್ತೇ? ಇಲ್ಲಾ ಅಂದ್ರೆ ತಿಳ್ಕೊಳಿ…
ಕೊಬ್ಬರಿ ಎಣ್ಣೆ : ನಿಮ್ಮ ಸ್ಕಿನ್ ಆಯ್ಲಿ ಆಗಿದ್ದರೆ ಕೊಬ್ಬರಿ ಎಣ್ಣೆ ಬಳಕೆ ಮಾಡಬೇಡಿ. ಇದರಿಂದ ತ್ವಚೆಯಲ್ಲಿ ಎಣ್ಣೆಯ ಅಂಶ ಇನ್ನೂ ಹೆಚ್ಚಾಗಿ ಪಿಂಪಲ್ ಉಂಟಾಗುವ ಸಾಧ್ಯತೆ ಇದೆ.
ದಾಲ್ಚಿನ್ನಿ : ದಾಲ್ಚಿನ್ನಿ ಮತ್ತು ಇತರ ಮಸಾಲೆ ಪದಾರ್ಥಗಳು ಕೆಲವು ಸ್ಕಿನ್ ಎಲರ್ಜಿ ಉಂಟು ಮಾಡುತ್ತವೆ. ಆದುದರಿಂದ ಇದನ್ನು ಬಳಕೆ ಮಾಡುವ ಮುನ್ನ ಪರಿಶೀಲನೆ ನಡೆಸೋದು ಉತ್ತಮ.
ಹಾಲಿನ ಕೆನೆ : ನಿಮ್ಮದು ಆಯ್ಲಿ ಸ್ಕಿನ್ ಆಗಿದ್ದರೆ ಹಾಲಿನ ಕೆನೆ ಬಳಕೆ ಮಾಡುವುದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ. ಇದರಿಂದ ವೈಟ್ಹೆಡ್ಸ್ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.
ವಿನೆಗರ್ : ಆಸಿಡಿಟ್ ಉತ್ಪನ್ನಗಳಾದ ವಿನೆಗರ್ನ್ನು ಸೆನ್ಸಿಟಿವ್ ಸ್ಕಿನ್ ಮೇಲೆ ವಿನೆಗರ್ ವಿಪರೀತ ಪರಿಣಾಮ ಬೀರುತ್ತದೆ. ಇದರಿಂದ ರಾಶಸ್ ಉಂಟಾಗುವ ಸಾಧ್ಯತೆ ಹೆಚ್ಚು.
ನಿಂಬೆ ಜ್ಯೂಸ್ : ನಿಂಬೆ ಹಣ್ಣಿನಲ್ಲಿ ಅಲ್ಪ ಪ್ರಮಾಣದಲ್ಲಿ ಆಸಿಡಿಕ್ ಅಂಶವಿದೆ. ಇದನ್ನು ನೀವು ತ್ವಚೆಯ ರಕ್ಷಣೆಗೆ ಬಳಸಿದರೆ ಆ ಜಾಗದಲ್ಲಿ ಗುಳ್ಳೆಗಳಾಗುವ ಸಾಧ್ಯತೆ ಇದೆ.