ಕರ್ನಾಟಕದಲ್ಲಿ ಶುರುವಾಯ್ತು ‘ನಿಸರ್ಗ’ ಚಂಡಮಾರುತದ ಟೆನ್ಷನ್ : ಹಲವೆಡೆ ‘ಆರೆಂಜ್‌ ಅಲರ್ಟ್’‌ ಘೋಷಣೆ – Kannada News Now


State

ಕರ್ನಾಟಕದಲ್ಲಿ ಶುರುವಾಯ್ತು ‘ನಿಸರ್ಗ’ ಚಂಡಮಾರುತದ ಟೆನ್ಷನ್ : ಹಲವೆಡೆ ‘ಆರೆಂಜ್‌ ಅಲರ್ಟ್’‌ ಘೋಷಣೆ

ಬೆಂಗಳೂರು: ಅಂಫಾನ್ ಚಂಡಮಾರುತ ದೇಶದ ಪೂರ್ವ ಕರಾವಳಿಯಲ್ಲಿ ತನ್ನ ಪ್ರತಾಪವನ್ನು ತೋರಿಸುತ್ತಿದೆ. ಈ ನಡುವೆ ನಿಸರ್ಗ ಚಂಡಮಾರುತವು ದೇಶದ ಪಶ್ಚಿಮ ಕರಾವಳಿಯತ್ತ ದಾಪುಗಾಲು ಇಟ್ಟಿದ್ದು, ನಾಳೆ ಮಹಾರಾಷ್ಟ್ರ ಹಾಗೂ ಗುಜರಾತ್ ತೀರ ಪ್ರದೇಶಗಳಿಗೆ ಅಪ್ಪಳಿಸುವ ಭೀತಿ ಕಾಡುತ್ತಿದೆ. ಗಂಟೆಗೆ 100 ಕೀ.ಮೀ. ವೇಗದಲ್ಲಿ ಗಾಳಿ ಬೀಸುವಸಾಧ್ಯತೆ ಇದ್ದು, ಇದರ ಪರಿಣಾಮ ಕರ್ನಾಟಕದ ಉತ್ತರ ಭಾಗದಲ್ಲಿ ಅಂದ್ರೆ ಬಾಗಲಕೋಟೆ ಯಾದಗಿರಿ. ಕಲಬುರಗಿ ಸೇರಿದಂತೆ ನಾನಾ ಭಾಗಗಳಲ್ಲಿ ಮಳೆ ಪ್ರಮಾಣದಲ್ಲಿ ಕೂಡ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.

ಈ ನಡುವೆ ದ.ಕನ್ನಡದಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಜಿಲ್ಲೆಯ ಕಡಬ, ಸುಳ್ಯ, ಬೆಳ್ತಂಗಡಿಯಲ್ಲಿ ನಿನ್ನೆಯಿಂದ ಭಾರಿ ಮಳೆಯಾಗುತ್ತಿದ್ದು, ಜಿಲ್ಲಾಡಳಿತ ಈ ಬಗ್ಗೆ ಎಚ್ಚರಿಕೆ ಹೆಜ್ಜೆ ಇಟ್ಟಿದೆ.