ಮುಂಬೈ: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭೀವೃದ್ಧಿ ಬ್ಯಾಂಕ್ ( National Bank for Agriculture and Rural Development – NABARD ) ನಲ್ಲಿ ಖಾಲಿ ಇರುವಂತ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಸಂಬಂಧ ಅಧಿಸೂಚನೆ ಹೊರಡಿಸಿರುವಂತ ನಬಾರ್ಡ್, ಮುಖ್ಯ ತಾಂತ್ರಿಕ ಅಧಿಕಾರಿ, ರಿಸ್ಕ್ ಮ್ಯಾನೇಜರ್, ಡಾಟಾ ಡಿಸೈನರ್, ಲೀಡ್ ಬಿಐ ಡಿಸೈನರ್, ಇಟಿಎಲ್ ಡಿಸೈನರ್ ಹಾಗೂ ಲೀಗಲ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿರೋದಾಗಿ ತಿಳಿಸಿದೆ.
ಒಟ್ಟು 6 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆನ್ ಲೈನ್ ಮೂಲಕ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ನಬಾರ್ಡ್ ಅಧಿಕೃತ ಜಾಲತಾಣ www.nabard.org ಗೆ ಭೇಟಿ ನೀಡಿ, ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ದಿನಾಂಕ 02-12-2021ರಿಂದ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19-12-2021 ಆಗಿರುತ್ತದೆ. ವಿದ್ಯಾರ್ಹತೆ, ವಯೋಮಿತಿ ಸೇರಿದಂತೆ ವಿವಿಧ ಮಾಹಿತಿಗಾಗಿ ನಬಾರ್ಡ್ www.nabard.org ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ.