ನವದೆಹಲಿ : ಆಸ್ಟ್ರೇಲಿಯಾ ಎರಡು ಟೆಸ್ಟ್ ಪಂದ್ಯಗಳ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನ 10 ವಿಕೆಟ್ʼಗಳಿಂದ ಸೋಲಿಸಿತು. ಗಾಲೆ ಟೆಸ್ಟ್‌ನ ಮೂರನೇ ದಿನ ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಕೇವಲ 4 ರನ್‌ಗಳ ಗುರಿಯನ್ನ ನಿಗದಿಪಡಿಸಿತು. ಅದ್ರಂತೆ, ಆಸ್ಟ್ರೇಲಿಯಾ ಕೇವಲ 4 ಎಸೆತಗಳಲ್ಲಿ ಈ ಗುರಿಯನ್ನ ಸಾಧಿಸಿತು. ಈ ಮೂಲಕ ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾ ತಂಡವು ಎರಡೂ ಇನ್ನಿಂಗ್ಸ್‌ಗಳಲ್ಲಿ ಆಸ್ಟ್ರೇಲಿಯಾದ ಬೌಲರ್‌ಗಳಿಗೆ ತಲೆಬಾಗಿತು.
ಶ್ರೀಲಂಕಾ ಮೊದಲ ಇನ್ನಿಂಗ್‌ನಲ್ಲಿ 212 ರನ್‌ಗಳಿಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್‌ನಲ್ಲಿ ಕೇವಲ 110 ರನ್‌ಗಳಿಗೆ ಆಲೌಟ್ ಆಗಿತ್ತು. ಶ್ರೀಲಂಕಾದ ಬ್ಯಾಟ್ಸ್ ಮನ್ʼಗಳು ಲಿಯಾನ್ ಎದುರು ಸಂಪೂರ್ಣ ಅಸಹಾಯಕರಾಗಿದ್ದು, ಲಿಯಾನ್ ಮೊದಲ ಇನ್ನಿಂಗ್ಸ್‌ನಲ್ಲಿ ಐದು ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ಆಟಗಾರರನ್ನ ಬೇಟೆಯಾಡಿದರು. ಇದರೊಂದಿಗೆ ಲಯನ್ ಭಾರತದ ಶ್ರೇಷ್ಠ ಆಲ್ರೌಂಡರ್ ಕಪಿಲ್ ದೇವ್ ದಾಖಲೆಯನ್ನ ಮುರಿದರು.