ಸುಭಾಷಿತ :

Friday, April 3 , 2020 7:00 AM

ನಾನು ಮತ್ತು ಗುಂಡ ಚಿತ್ರಕ್ಕೆಕಥೆಯೇ ಜೀವಾಳ!!..


Tuesday, January 21st, 2020 5:56 am

ಸಿನಿಮಾಡೆಸ್ಕ್‌: ಲವ್, ಮಾಸ್, ಸಸ್ಪೆನ್ಸ್ ಚಿತ್ರಗಳ ಜಮಾನ ಹೆಚ್ಚಿರುವಾಗಲೇ ಸ್ಯಾಂಡಲ್​​ ವುಡ್​ಗೆ ಬರ್ತಿರುವ ಕೆಲ ಪ್ರತಿಭಾವಂತ ನಿರ್ದೇಶಕರು ಭಿನ್ನ ವಿಭಿನ್ನ ಸಬ್ಜೆಕ್ಟ್ ಮುಖಾಂತರ ಗಮನ ಸೆಳೆಯುತ್ತಿದ್ದಾರೆ. ರೆಗ್ಯೂಲರ್ ಬೇಸ್ ಸಿನಿಮಾಗಳ ಹೊರತಾಗಿ ಬೇರೆಯದ್ದೇ ಹೊಸ ಪ್ರಯತ್ನಗಳನ್ನು ಚಂದನವನದಲ್ಲಿ ನವ ನಿರ್ದೇಶಕರು ಮಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ನಾನು ಮತ್ತು ಗುಂಡ ಚಿತ್ರ.

ಟೀಸರ್, ಹಾಡುಗಳ ಮೂಲಕ ಸ್ಯಾಂಡಲ್​ವುಡ್ ನಲ್ಲಿ ಮನಸೆಳೆದಿರುವ ಚಿತ್ರ ನಾನು ಮತ್ತು ಗುಂಡ ಸಾಕು ಪ್ರಾಣಿ ಮತ್ತು ವ್ಯಕ್ತಿ ನಡುವಿನ ಸುಂದರ ಬಾಂದವ್ಯವನ್ನು ಹೇಳ ಹೊರಟಿರುವ ಕಥೆ. ಕಥೆಯೇ ಚಿತ್ರದ ಜೀವಾಳವಾಗಿದೆ. ನಾಯಿ ಒಬ್ಬ ವ್ಯಕ್ತಿ ಬದುಕಲ್ಲಿ ಬಂದಾಗ ಅವರಿಬ್ಬರ ನಡುವಿನ ಬಾಂದವ್ಯ, ಆದ್ರಿಂದ ಕುಟುಂಬಕ್ಕಾಗುವ ಸಮಸ್ಯೆ ಇವುಗಳನ್ನು ಕಮರ್ಶಿಯಲ್ ಎಳೆ ಇಟ್ಟುಕೊಂಡು ಹೇಳ ಹೊರಟಿದ್ದಾರೆ ಚಿತ್ರದ ನಿರ್ದೇಶಕ ಶ್ರೀನಿವಾಸ್ ತಿಮ್ಮಯ್ಯ. ಸದ್ಯ ಚಿತ್ರದ ತುಣುಕುಗಳು ಪ್ರಾಣಿ ಪ್ರಿಯರ ಮನಸ್ಸಿಗೂ ಹತ್ತಿರವಾಗಿದ್ದು ಚಿತ್ರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

ಶಿವರಾಜ್ ಕೆ ಆರ್ ಪೇಟೇ, ಸಂಯುಕ್ತ ಹೊರನಾಡು ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಗುಂಡ ಎನ್ನುವ ನಾಯಿ ಈ ಚಿತ್ರದ ಮುಖ್ಯ ಆಕರ್ಷಣೆ. ಶಿವರಾಜ್ ಕೆ ಆರ್ ಪೇಟೆ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದು ಕಾಮಿಡಿ ಮಾಡಿ ನಗಿಸುತ್ತಿದ್ದ ಶಿವರಾಜ್ ಈ ಸಿನಿಮಾದಲ್ಲಿ ಅಷ್ಟೇ ಎಮೋಷನಲ್ ಆಗಿ ನಟಿಸಿದ್ದಾರೆ. ರಘು ಹಾಸನ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕಾರ್ತಿಕ್ ಶರ್ಮ ಸಂಗೀತ ಚಿತ್ರಕ್ಕಿದೆ. ಜಸಿನಿ ಪ್ರೇಕ್ಷಕನಿಗೆ ಈ ಸಿನಿಮಾ ಭಿನ್ನ ಅನುಭವ ನೀಡೋದಂತೂ ಗ್ಯಾರಂಟಿ.

ನಾನು ಮತ್ತು ಗುಂಡ ಚಿತ್ರ ಈಗ ರಿಲೀಸ್ ಹಂತಕ್ಕೆ ಬಂದು ನಿಂತಿದೆ ಜನವರಿ 24ಕ್ಕೆ ಚಿತ್ರಮಂದಿರಕ್ಕೆ ಈ ಚಿತ್ರ ಲಗ್ಗೆ ಇಡ್ತಿದೆ. ಈ ಮೂಲಕ ಶ್ರೀನಿವಾಸ್ ತಿಮ್ಮಯ್ಯ ಮೊದಲ ಕನಸಿನ ಕೂಸು ಬೆಳ್ಳಿ ತೆರೆ ಮೇಲೆ ನನಸಾಗಲಿದೆ. ಇಂದೊಂದು ಎಮೋಷನಲ್ ಕಂಟೆಂಟ್ ಸಬ್ಜೆಕ್ಟ್ ಸಿನಿಮಾವಾಗಿದ್ದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಶ್ರೀನಿವಾಸ್ ತಿಮ್ಮಯ್ಯ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions