‘ತಿರುಪತಿ ಲಡ್ಡು ಪ್ರಸಾದ’ಕ್ಕೆ ‘ನಂದಿನಿ ತುಪ್ಪ’ ಪೂರೈಕೆ: ಟ್ಯಾಂಕರ್ ಮೂಲಕ ಸಾಗಾಣೆಗೆ ‘ಸಿಎಂ ಸಿದ್ಧರಾಮಯ್ಯ’ ಚಾಲನೆ

ಬೆಂಗಳೂರು: 2013-14ನೇ ಸಾಲಿನಿಂದ 2021-22ರವರೆಗೆ 5 ಸಾವಿರ ಟನ್‌ ತುಪ್ಪವನ್ನು ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಆರಂಭಿಕವಾಗಿ 350 ಟನ್‌ ತುಪ್ಪವನ್ನು ಸರಬರಾಜು ಮಾಡಲು ಟೆಂಡರ್‌ ಮೂಲಕ ಬೇಡಿಕೆ ಬಂದಿದೆ. ಬೇಡಿಕೆಗೆ ಅನುಗುಣವಾಗಿ ಹಸುವಿನ ತುಪ್ಪವನ್ನು ಟ್ಯಾಂಕರ್‌ ಮೂಲಕ ಸರಬರಾಜು ಮಾಡಲಾಗುತ್ತದೆ ಎಂದು ಕೆಎಂಎಫ್‌ ತಿಳಿಸಿದೆ. ತಿರುಪತಿ ತಿರುಮಲ ದೇವಸ್ಥಾನದ ಪ್ರಸಾದಕ್ಕೆ ನಮ್ಮ ನಂದಿನಿ ತುಪ್ಪವನ್ನು ಸರಬರಾಜು ಮಾಡಲಾಗುತ್ತಿದ್ದು, ತುಪ್ಪದ ಟ್ಯಾಂಕರ್ ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಚಾಲನೆ ನೀಡಿದರು. … Continue reading ‘ತಿರುಪತಿ ಲಡ್ಡು ಪ್ರಸಾದ’ಕ್ಕೆ ‘ನಂದಿನಿ ತುಪ್ಪ’ ಪೂರೈಕೆ: ಟ್ಯಾಂಕರ್ ಮೂಲಕ ಸಾಗಾಣೆಗೆ ‘ಸಿಎಂ ಸಿದ್ಧರಾಮಯ್ಯ’ ಚಾಲನೆ