ಬೆಂಗಳೂರು: ರಾಜಧಾನಿಯಲ್ಲಿ ಕೊರೋನಾ ಸೋಂಕಿನ ( Coronavirus ) ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೇ ಕಾರಣದಿಂದಾಗಿ ಸರ್ಕಾರ ನಗರದಲ್ಲಿ ಶಾಲೆಗಳಿಗೆ ರಜೆಯನ್ನು, ವೀಕೆಂಡ್ ಕರ್ಪ್ಯೂ ( Weekend Curfew ), ನೈಟ್ ಕರ್ಪ್ಯೂ ಜಾರಿಗೊಳಿಸಿದೆ. ಇದರ ನಡುವೆ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ನಮ್ಮ ಮೆಟ್ರೋ ( Namma Metro ) ರೈಲುಗಳಲ್ಲಿ ನಿಂತು ಪ್ರಯಾಣಿಸೋದಕ್ಕೆ ಬ್ರೇಕ್ ಹಾಕಲಾಗಿದೆ. ಅಲ್ಲದೇ ಸೀಟು ಭರ್ತಿಯಾದ್ರೆ ನಿಲ್ದಾಣದ ಒಳಗೂ ಪ್ರವೇಶವನ್ನು ನಿಷೇಧಿಸಲಾಗಿದೆ.
ಕೋವಿಡ್ ಹರಡುವ ಕಾರಣಕ್ಕಾಗೇ ‘ಕಾಂಗ್ರೆಸ್’ನಿಂದ ಪಾದಯಾತ್ರೆ – ನಳಿನ್‍ಕುಮಾರ್ ಕಟೀಲ್
ಈ ಕುರಿತಂತೆ ಬಿ ಎಂ ಆರ್ ಸಿ ಎಲ್ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಕೊರೋನಾ ನಿಯಂತ್ರಣ ಕ್ರಮವಾಗಿ ರಾಜ್ಯ ಸರ್ಕಾರ ನೂತನ ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿಯಂತೆ ಕೋವಿಡ್ ನಿಯಂತ್ರಣ ಕಾರ್ಯ ಮಾಡೋದು ನಮ್ಮ ನಿಮ್ಮೆಲ್ಲರ ಕೆಲಸವಾಗಿದೆ. ಕೋವಿಡ್ ನಿಯಂತ್ರಣ ಕ್ರಮವಾಗಿ ಇನ್ಮುಂದೆ ಸೀಟುಗಳ ಭರ್ತಿಗೆ ಮಾತ್ರವೇ ನಮ್ಮ ಮೆಟ್ರೋ ರೈಲಿನಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.
BIGG BREAKING NEWS: ಸಚಿವ ಎಸ್.ಟಿ.ಸೋಮಶೇಖರ್ ಬ್ಲ್ಯಾಕ್ ಮೇಲ್ ಪ್ರಕರಣದ ಆರೋಪಿ ರಾಹುಲ್ ಭಟ್ ಗೂ ಕೊರೋನಾ ಪಾಸಿಟಿವ್
ಕೇವಲ ಮೆಟ್ರೋ ರೈಲಿನಲ್ಲಿ ಸೀಟುಗಳಿರುವಷ್ಟು ಪ್ರಯಾಣಿಕರು ಪ್ರಯಾಣಿಸಲು ಅವಕಾಶ ನೀಡಲಾಗಿದೆ. ಸೀಟು ಭರ್ತಿಯಾದ ನಂತ್ರ ನಿಂತು ಪ್ರಯಾಣಿಸಲು ಅವಕಾಶ ಇಲ್ಲ. ಅಲ್ಲದೇ ಸೀಟು ಭರ್ತಿಯಾದ ನಂತ್ರ ನಿಲ್ದಾಣದ ಒಳಗೂ ಪ್ರಯಾಣಿಕರು ಬರೋದಕ್ಕೆ ಅವಕಾಶ ಇಲ್ಲ. ವೀಕೆಂಡ್ ಸಂದರ್ಭದಲ್ಲಿ 20 ನಿಮಿಷಕ್ಕೊಂದು ಈಗ ಸಂಚರಿಸೋ ರೈಲು, 30 ನಿಮಿಷಕ್ಕೊಂದು ಸಂಚರಿಸಲಿದೆ ಎಂದು ತಿಳಿಸಿದೆ.
ಶೀಘ್ರವೇ ‘ಅತಿಥಿ ಉಪನ್ಯಾಸಕ’ರ ಬೇಡಿಕೆ ಕುರಿತಂತೆ ಸರ್ಕಾರದಿಂದ ನಿರ್ಧಾರ ಪ್ರಕಟ – ಸಚಿವ ಡಾ.ಸಿಎನ್.ಅಶ್ವತ್ಥನಾರಾಯಣ