ಬೆಂಗಳೂರು : ರೇಸ್ ಕೋರ್ಸ್ ರಸ್ತೆಗೆ ‘ಅಂಬರೀಷ್’ ಹೆಸರು ನಾಮಕರಣ ಮಾಡಲಾಗುತ್ತದೆ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.
ಸಿಲಿಕಾನ್ ಸಿಟಿಯ ರಿಂಗ್ ರಸ್ತೆಗೆ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡುವ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಭಾಗಿಯಾಗಿ ನಂತರ ಮಾತನಾಡಿದರು.
ಬೆಂಗಳೂರು ಮಹಾನಗರ ಹಲವರಿಗೆ ಆಶ್ರಯ ನೀಡಿದೆ. ಬೆಂಗಳೂರು ನಗರದ ಪದ್ಮನಾಭನಗರದಲ್ಲಿ ವಾರ್ಡ್, ಆಸ್ಪತ್ರೆ , ಉದ್ಯಾನವನ ಎಲ್ಲವೂ ಬಹಳ ಚೆನ್ನಾಗಿದೆ. ಬೆಂಗಳೂರು ದೊಡ್ಡ ಪ್ರಮಾಣದಲ್ಲಿ ಅತಿ ವೇಗವಾಗಿ ಬೆಳೆಯುತ್ತಿದೆ. ಕಳೆದ ವರ್ಷ ಬೆಂಗಳೂರು ಅಭಿವೃದ್ದಿಗೆ 6 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಪದ್ಮನಾಭ ನಗರಕ್ಕೆ 3 ಸಾವಿರ ಕೋಟಿ ಅನುದಾನ ನೀಡಲಾಗಿದೆ ಎಂದರು. ಸಾವಿನ ನಂತರವೂ ಬದುಕಿದ ವ್ಯಕ್ತಿ ಎಂದರೆ ಅದು ಪುನೀತ್ ರಾಜ್ ಕುಮಾರ್. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟಿದ್ದು ನನ್ನ ಭಾಗ್ಯ ಎಂದರು. ರೇಸ್ ಕೋರ್ಸ್ ರಸ್ತೆಗೆ ‘ಅಂಬರೀಷ್’ ಹೆಸರು ನಾಮಕರಣ ಮಾಡಲಾಗುತ್ತದೆ ಸಿಎಂ ಬೊಮ್ಮಾಯಿ ಘೋಷಣೆ ಮಾಡಿದರು.
ಬಿಎಂಎಸ್ ಟ್ರಸ್ಟ್ ಹಗರಣದಲ್ಲಿ ಸಚಿವ ಅಶ್ವತ್ಥನಾರಾಯಣ ನೇರ ಶಾಮೀಲು- ಮಾಜಿ ಸಿಎಂ ಕುಮಾರಸ್ವಾಮಿ ಆರೋಪ
BREAKING NEWS : ಮಹಿಳೆಗೆ ಹೃದಯಾಘಾತ ; ಜೋಧ್ಪುರದಲ್ಲಿ ‘ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ’, ನಂತ್ರ ಮಹಿಳೆ ಸಾವು