ಬಹುಭಾಷಾ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಹೊಸ ಜೀವನಕ್ಕೆ ಅಡಿ ಇಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ತೆಲುಗಿನ ಖ್ಯಾತ ನಟ ಆದಿ ಪಿನಿಸೆಟ್ಟಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ನಿಕ್ಕಿ ಗಲ್ರಾನಿ ತನ್ನ ಪ್ರೀತಿಯನ್ನು ಪ್ರಪಂಚದೆದುರು ಅನಾವರಣ ಮಾಡಿದ್ದರು. ಇದೀಗ ಆದಿ ನಿಕ್ಕಿ ಹೊಸ ಬಾಳಿಗೆ ಹೆಜ್ಜೆ ಇಡ್ತಿದ್ದಾರೆ. ಇವತ್ತಿನಿಂದ ಚೆನ್ನೈನಲ್ಲಿ ಮದುವೆ ಶಾಸ್ತ್ರಗಳು ಶುರುವಾಗಿವೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆಯುತ್ತಿರುವ ಹಳದಿ ಶಾಸ್ತ್ರಕ್ಕೆ ನ್ಯಾಚುರಲ್ ಸ್ಟಾರ್ ನಾನಿ ಆಗಮಿಸಿ ನವ ಜೋಡಿಗೆ ಶುಭ ಹಾರೈಸುವುದರ ಜೊತೆಗೆ ಭರ್ಜರಿ ಸ್ಟೆಪ್ಸ್ ಹಾಕಿದ್ದು, ಈ ವಿಡಿಯೋ ಸೋಷಿಯಲ್ ಜಗತ್ತಿನಲ್ಲಿ ವೈರಲ್ ಆಗ್ತಿದೆ.
ಅಂದಹಾಗೇ 2015ರಲ್ಲಿ ತೆರೆಕಂಡ ‘ಯಾಗವರಾಯಿನುಮ್ ನಾ ಕಾಕ್ಕಾ’ ಸಿನಿಮಾದಲ್ಲಿ ಆದಿ ಮತ್ತು ನಿಕ್ಕಿ ನಟಿಸಿದ್ದರು. ಆ ನಂತ್ರ ‘ಮರಗಧ ನಾನಯಮ್’ ಸಿನಿಮಾದಲ್ಲಿ ಮತ್ತೊಮ್ಮೆ ಕಾಣಿಸಿಕೊಂಡಿದ್ದ ಈ ಜೋಡಿ ನಡುವೆ ಇಲ್ಲಿಂದ ಒಡನಾಟ ಜಾಸ್ತಿ ಆಗಿತ್ತು. ಒಟನಾಟ ಪ್ರೀತಿಗೆ ತಿರುಗಿತ್ತಂತೆ. ಇಲ್ಲಿಂದ ಪ್ರೇಮಿಗಳಾಗಿದ್ದ ನಿಕ್ಕಿ-ಆದಿ ಈಗ ಸತಿಪತಿಗಳಾಗಿದ್ದಾರೆ. ಅಂದಹಾಗೇ ತೆಲುಗು ಚಿತ್ರರಂಗದಲ್ಲಿ ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರವಿ ರಾಜ ಪಿನಿಸೆಟ್ಟಿ ಪುತ್ರ ಆದಿ. ವಿಲನ್, ಹೀರೋ ಖದರ್ ನಲ್ಲಿ ಹಲವಾರು ಸಿನಿಮಾಗಳಲ್ಲೊ ಮಿಂಚಿರುವ ಆದಿ ಸದ್ಯ ದಿ ವಾರಿಯರ್ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಕನ್ನಡದ `ಅಜಿತ್’, `ಜಂಬುಸವಾರಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಿಕ್ಕಿ ಗಲ್ರಾನಿ, ಇದೀಗ ಸೌತ್ ಸಿನಿಮಾಗಳಲ್ಲಿ ಸ್ಟಾರ್ ನಟಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.