ಮುಂಬೈ: ನಾಗ ಚೈತನ್ಯ ಮತ್ತು ಸಮಂತಾ ಅವರು ವಿಚ್ಛೇಧನ ಪಡೆದಿದ್ದಾರೆ. ಆದ್ರೂ ಕೂಡ ನಾಗಚೈತ್ಯರು ಅವರು ಸಮಂತಾ ಬಗ್ಗೆ ಅಲ್ಲಲ್ಲಿ ಸಂದರ್ಶನದಲ್ಲಿ ಗುನಗಾನ ಮಾಡುತ್ತಾರೆ. ಬಾಲಿವುಡ್‌ ನಲ್ಲಿ ಸಮಂತಾ ಸ್ಟಾರ್‌ ಆಗಿದ್ದಾರೆ. ಆದರೆ ಇತ್ತೀಚೆಗೆ ಇಂದು ಸಂದರ್ಶನದಲ್ಲಿ ಮಾಜಿ ಪತ್ನಿ ಸಮಂತಾ ಬಗ್ಗೆ ಮಾತನಾಡಿದ್ದಾರೆ.  

BIGG NEWS: ಚೀನಾದಲ್ಲಿ ಹೊಸ ಲ್ಯಾಂಗ್ಯಾ ವೈರಸ್ ಪತ್ತೆ; ಇದು ಎಂದರೇನು? ಇದರ ಲಕ್ಷಣಗಳೇನು? ಇಲ್ಲಿದೆ ವಿವರ

 

ಅವರೊಂದಿಗೆ ಓಡಿಹೋದರೆ ಏನು ಮಾಡುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು. ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಪ್ರಮೋಷನ್​ ಸಲುವಾಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಗ ಚೈತನ್ಯ ಅವರು ಸಮಂತಾ ಬಗ್ಗೆ ಮಾತನಾಡಿದ್ದಾರೆ.
ನಿಮಗೆ ಈಗ ಸಮಂತಾ ಎದುರು ಸಿಕ್ಕರೆ ಏನು ಮಾಡ್ತೀರಿ’ ಎಂದು ಕೇಳಿದ ಪ್ರಶ್ನೆಗೆ ನಾಗ ಚೈತನ್ಯ ನೇರವಾಗಿ ಉತ್ತರಿಸಿದ್ದಾರೆ. ‘ಮೊದಲು ಹಾಯ್​ ಹೇಳುತ್ತೇನೆ. ನಂತರ ತಬ್ಬಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮಾಜಿ ಪತ್ನಿಯ ನೆನಪಿಗಾಗಿ ಉಳಿದುಕೊಂಡಿರುವ ಟ್ಯಾಟೂ ಬಗ್ಗೆಯೂ ಹೇಳಿದ್ದಾರೆ.

BIGG NEWS: ಚೀನಾದಲ್ಲಿ ಹೊಸ ಲ್ಯಾಂಗ್ಯಾ ವೈರಸ್ ಪತ್ತೆ; ಇದು ಎಂದರೇನು? ಇದರ ಲಕ್ಷಣಗಳೇನು? ಇಲ್ಲಿದೆ ವಿವರ

 

ನಾಗ ಚೈತನ್ಯ ಅವರ ಮೊಣಕೈ ಮೇಲೆ ಒಂದು ಟ್ಯಾಟೂ ಇದೆ. ಅದರ ಅರ್ಥ ಏನು ಎಂಬುದು ಗೊತ್ತಿಲ್ಲದಿದ್ದರೂ ಕೂಡ ಅದನ್ನು ಕಾಪಿ ಮಾಡಿ ಅನೇಕ ಅಭಿಮಾನಿಗಳು ಅದೇ ರೀತಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದು ತಮ್ಮ ಮದುವೆ ದಿನಾಂಕವನ್ನು ಸೂಚಿಸುತ್ತದೆ ಎಂದು ನಾಗ ಚೈತನ್ಯ ಹೇಳಿದ್ದಾರೆ. ಆ ಟ್ಯೂಟೂ ತೆಗೆಸುವ ಬಗ್ಗೆ ಸದ್ಯ ಏನೂ ಯೋಚಿಸಿಲ್ಲ ಎಂದು ಅವರು ಹೇಳಿದ್ದಾರೆ. ಅಭಿಮಾನಿಗಳು ಇದನ್ನು ಕಾಪಿ ಮಾಡುವುದು ಕೂಡ ತಮಗೆ ಇಷ್ಟ ಇಲ್ಲ ಎಂದು ಅವರು ತಿಳಿಸಿದ್ದಾರೆ.

 

Share.
Exit mobile version