ಬೆಂಗಳೂರು: ರಾಜ್ಯದ ರೈತರ ಆದಾಯ ದ್ವಿಗುಣಗೊಳಿಸೋ ಮಂತ್ರವನ್ನು ಜಪಿಸ್ತಾ ಇರೋ ಸರ್ಕಾರ, ಮತ್ತೊಂದೆಡೆ ಸದ್ದಿಲ್ಲದಂತೆ ಕೃಷಿ ಭೂಮಿಯ ಪೋಡಿ ಶುಲ್ಕವನ್ನು ದುಪ್ಪಟ್ಟು ಹೆಚ್ಚಿಸಿದೆ. ಈ ತಿಂಗಳಿನಿಂದಲೇ ಜಾರಿಗೆ ಬರುವಂತೆ ಒಂದು ಎಕರೆಗೆ ಪೋಡಿ ಶುಲ್ಕವನ್ನು ರೂ.1,200 ರಿಂದ ರೂ.2,000ಗೆ ಹೆಚ್ಚಳ ಮಾಡಿ, ಬಿಗ್ ಶಾಕ್ ನೀಡಿದೆ.
ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಕ್ಕೆ ಶೀಘ್ರ ಪರಿಹಾರ ನೀಡಿ : ಡಿ.ಕೆ. ಶಿವಕುಮಾರ್ ಆಗ್ರಹ
ಹೌದು.. ಜನವರಿಯಿಂದಲೇ ಜಾರಿಗೆ ಬರುವಂತೆ ರಾಜ್ಯಾದ್ಯಂತ ಕೃಷಿ ಭೂಮಿಗಳ ಪೋಡಿ ಶುಲ್ಕ ಎಕರೆಗೆ 1,200 ರಿಂದ 2,000ರೂ ಗೆ ಹೆಚ್ಚಿಸಲಾಗಿದೆ. 2 ಎಕರೆ ಮೇಲ್ಪಟ್ಟರೆ ಪ್ರತಿ ಎಕರೆಗೆ ಹೆಚ್ಚುವರಿಯಾಗಿ ರೂ.400 ಪಾವತಿಸೋದು ಅನಿವಾರ್ಯವಾಗಿದೆ.
PM Kisan Yojana : ‘ಪಿಎಂ ಕಿಸಾನ್ ಯೋಜನೆ’ ಹಣ ಪಡೆಯಲು, ಫಲಾನುಭವಿಗಳಿಗೆ ‘ಇ-ಕೆವೈಸಿ’ ಕಡ್ಡಾಯ
ರೈತರು ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ಸಾಲ, ಭೂಮಿ ಮಾಲಿಕತ್ವ ಖಾತ್ರಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಏಕ ಮಾಲೀಕತ್ವದಲ್ಲಿ ಪಡೆಯೋದಕ್ಕೆ ಪೋಡಿ ಮಾಡಿಸೋದು ಅತ್ಯಗತ್ಯವಾಗಿದೆ. ಈ ಪೋಡಿಯನ್ನು ಮಾಡಿಸೋದಕ್ಕೆ ರಾಜ್ಯ ಸರ್ಕಾರ ಈಗ ರೂ.800 ಶುಲ್ಕವನ್ನು ಹೆಚ್ಚಳ ಮಾಡಿರೋದ್ರಿಂದ ಬಿಗ್ ಶಾಕ್ ನೀಡಿದಂತೆ ಆಗಿದೆ.
ಅಂದಹಾಗೇ ಜಮೀನು ಪೋಡಿ ಮಾಡಿಸೋದಕ್ಕೆ ರಾಜ್ಯದ ರೈತರು ಸಾಲ ಸೋಲ ಮಾಡಿ ಶುಲ್ಕ ಪಾವತಿ ಮಾಡಿದ್ರೇ.. ಅರ್ಜಿ ಸಲ್ಲಿಸಿದಂತ ಕನಿಷ್ಠ 6 ತಿಂಗಳು, ವರ್ಷ ಕಳೆದ್ರೂ, ಕೆಲವೊಮ್ಮೆ ಒಂದೂವರೆ ವರ್ಷ ಕಳೆದ್ರೂ ಜಮೀನು ಪೋಡಿ ಆಗೋದಿಲ್ಲ. ಹೀಗಾಗಿ ರೈತರು ನಾಡಕಚೇರಿ, ಸರ್ವೆ ಇಲಾಖೆಗೆ ಅಲೆದಾಡಿ ದಾಡಿ ಸಾಕಾಗುವಂತೆಯೂ ಆಗಿದೆ.
BIG NEWS : ಗಣರಾಜ್ಯೋತ್ಸವ ಅಂಗವಾಗಿ ದೇಶದ ಜನತೆಗೆ ಶುಭಕೋರಿದ “Google Doodle”