ಬೆಂಗಳೂರು: ಕರ್ನಾಟಕದಲ್ಲಿ ಪ್ರತಿ ಹೆಜ್ಜೆಗೆ ರೈತರಿಗೆ ಪ್ರೋತ್ಸಾಹ ಕೊಡುವ ಕಾರ್ಯವನ್ನು ಬಿಜೆಪಿ ಸರಕಾರ ಮಾಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ರೈತ ಮೋರ್ಚಾ ಪ್ರಭಾರಿ ಎನ್. ರವಿಕುಮಾರ್ ( MLC N Ravikumar ) ಅವರು ವಿಶ್ಲೇಷಿಸಿದರು.

ಬಿಜೆಪಿ ರೈತ ಮೋರ್ಚಾ ವತಿಯಿಂದ “ಕರ್ನಾಟಕ ಗೋ ಉತ್ಪನ್ನಗಳ ಹಾಗೂ ಗೋ ತ್ಯಾಜ್ಯಗಳ ಮೌಲ್ಯವರ್ಧನೆ” ಕುರಿತ ಕಾರ್ಯಾಗಾರವನ್ನು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಗೋವಿನ ಉತ್ಪನ್ನಗಳ ರಫ್ತಿನಲ್ಲೂ ಕರ್ನಾಟಕವು ಮುಂಚೂಣಿಯಲ್ಲಿದೆ. ಹಾಲು ಉತ್ಪಾದಕರಿಗೆ ಬೆಂಬಲ ಬೆಲೆ ಕೊಟ್ಟ, ರೈತ ಬಜೆಟ್ ನೀಡಿದ ಯಡಿಯೂರಪ್ಪ ಅವರನ್ನು ನಾವು ಅಭಿನಂದಿಸಬೇಕು. ರೈತರಿಗೆ ಕಸುವು ತುಂಬಿಸುವ, ಪ್ರೋತ್ಸಾಹಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು.

BIGG NEWS: ಡಿ.17ರಂದು ರಾಜ್ಯಾದ್ಯಂತ ವಿಶ್ವವಿದ್ಯಾಲಯಗಳ ಬಂದ್‌ಗೆ ಕರೆ : ಹಲವು ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪ್ರತಿಭಟನೆ

ಫಸಲ್ ಬಿಮಾ ಯೋಜನೆಯಡಿ ಕಟ್ಟಿದ್ದ ವಿಮೆಗೆ ಬದಲಾಗಿ 20 ಪಟ್ಟುಗಳಷ್ಟು ಹೆಚ್ಚು ಹಣ ರೈತರಿಗೆ ಸಿಗುತ್ತಿದೆ. 2023 ಅನ್ನು ಸಿರಿಧಾನ್ಯ ವರ್ಷವಾಗಿ ಕೇಂದ್ರ ಸರಕಾರ ಪ್ರಕಟಿಸಿದೆ. ಸಿರಿಧಾನ್ಯ ಬೆಳೆದು ಆದಾಯ ದ್ವಿಗುಣಗೊಳಿಸಬೇಕು ಎಂಬುದೇ ಇದರ ಉದ್ದೇಶ ವಿವರಿಸಿದರು. ರೈತರಿಗೆ ಅತಿ ಹೆಚ್ಚು ಸಾಲವನ್ನು ಬೊಮ್ಮಾಯಿಯವರ ಸರಕಾರ ಕೊಟ್ಟಿದೆ ಎಂದರು.

ಕಡಿಮೆ ಭೂಮಿ ಹೊಂದಿದ್ದ ಮತ್ತು ಸಂಕಷ್ಟದಲ್ಲಿದ್ದ ರೈತರಿಗೆ ವರ್ಷಕ್ಕೆ ಆರು ಸಾವಿರ ರೂಪಾಯಿಯನ್ನು ದೇಶಾದ್ಯಂತ ನೀಡಿದ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಅದಕ್ಕೆ ಧ್ವನಿಗೂಡಿಸಿ 4 ಸಾವಿರ ರೂಪಾಯಿ ನೀಡಿದ ಯಡಿಯೂರಪ್ಪನವರು ನೀಡಿದ್ದಾರೆ. ಈ ಮೂಲಕ 5 ವರ್ಷಗಳಿಗೆ 50 ಸಾವಿರ ರೂಪಾಯಿ ಲಭಿಸುವಂತಾಗಿದೆ. ಇದು ಬಿಜೆಪಿ ರೈತಪರ ಎಂಬುದನ್ನು ಸಾಬೀತು ಮಾಡಿದೆ ಎಂದು ತಿಳಿಸಿದರು.

ಆಡಳಿತದಲ್ಲಿದ್ದ ಬೇರೆ ಯಾವ ಸರಕಾರಗಳಾದರೂ ಇಂಥ ಯೋಜನೆ ಜಾರಿಗೆ ತಂದಿವೆಯೇ ಎಂದು ಪ್ರಶ್ನಿಸಿದರು. ಈ ವಿಷಯವನ್ನು ಪಕ್ಷವು ಜನರು ಮನೆಮನೆಗೆ ತಲುಪಿಸಲು ಕೋರಿದರು.

‘ಪ್ರೀ ಮೆಟ್ರಿಕ್’ ವಿದ್ಯಾರ್ಥಿಗಳಿಗೆ ‘ಸ್ಕಾಲರ್ ಶಿಪ್’ ನೀಡುವಂತೆ ಸಿದ್ದರಾಮಯ್ಯ ಆಗ್ರಹ

ಗೋರಕ್ಷಣೆ ಕಾಯ್ದೆಯನ್ನು ಬಿಜೆಪಿ ಅನುಷ್ಠಾನಕ್ಕೆ ತಂದರೆ ಕಾಂಗ್ರೆಸ್‍ನವರು ಅದನ್ನು ವಿರೋಧಿಸಿದರು. ನಮಗೆ ಹಾಲು, ಮೊಸರು, ಹಸುವಿನ ತುಪ್ಪ, ಸಗಣಿ ಬೇಕು. ಆದರೆ ವಯಸ್ಸಾದ ಗೋವುಗಳು ಬೇಡ ಎಂಬ ಕಾಂಗ್ರೆಸ್ ಧೋರಣೆ ಅತ್ಯಂತ ದೇಶವಿರೋಧಿಯಲ್ಲವೇ ಎಂದು ಕೇಳಿದರು. ಇಂಥ ವಿಚಾರಗಳನ್ನು ನಾವು ಮನೆಮನೆಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

ಕಳಸಾ ಬಂಡೂರಿ ಯೋಜನೆಗೆ ಕಾಂಗ್ರೆಸ್ ವಿರೋಧವಿದೆ. ಸೋನಿಯಾ ಗಾಂಧಿ ಅವರು ಈ ಬಗ್ಗೆ ತಿಳಿಸಿದ್ದರು. ನಾವು ಅದನ್ನು ಮಾತ್ರವಲ್ಲದೆ ಮೇಕೆದಾಟು ಯೋಜನೆ ಜಾರಿಗೊಳಿಸಲಿದ್ದೇವೆ. ಚಿತ್ರದುರ್ಗದ ಅಪ್ಪರ್ ಭದ್ರಾ ಯೋಜನೆಯನ್ನೂ ರಾಷ್ಟ್ರೀಯ ಯೋಜನೆಯಾಗಿ ಕೇಂದ್ರವು ಜಾರಿಗೊಳಿಸಲಿದ್ದು, 16 ಸಾವಿರ ಕೋಟಿ ಅನುದಾನ ಸಿಗಲಿದೆ. ನರೇಂದ್ರ ಮೋದಿಯವರು ಇದಕ್ಕಾಗಿ ಅಭಿನಂದನಾರ್ಹರು ಎಂದು ತಿಳಿಸಿದರು.

ಅಪ್ಪರ್ ಭದ್ರಾಕ್ಕೆ ಕಾಂಗ್ರೆಸ್ ಗುಲಗುಂಜಿಯಷ್ಟೂ ಕೊಡುಗೆ ಕೊಟ್ಟಿಲ್ಲ. ಅಪ್ಪರ್ ಭದ್ರಾ ಎಂದರೆ ಬಿಜೆಪಿ. ಬಿಜೆಪಿ ಎಂದರೆ ಅಪ್ಪರ್ ಭದ್ರಾ ಎಂದು ನುಡಿದರು. ಗೋವುಗಳ ಕುರಿತು ಮಾತನಾಡಲು ನೈತಿಕ ಧ್ವನಿ ಇರುವುದು ಬಿಜೆಪಿಗೆ ಮಾತ್ರ ಎಂದು ತಿಳಿಸಿದರು. ಸಿದ್ದರಾಮಯ್ಯ “ಗೋಮಾಂಸ ತಿಂತೀನಿ ಏನ್ಮಾಡ್ತೀರಿ” ಎಂದು ಕೇಳಿದ್ದರಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಅವರಿಗೆ ಬುದ್ಧಿ ಕಲಿಸಬೇಕಲ್ಲವೇ ಎಂದು ಕೇಳಿದರು.

ಕುತೂಹಲ ಮೂಡಿಸಿದ ಬಿಜೆಪಿ MLC ವಿಶ್ವನಾಥ್- ಸಿದ್ದರಾಮಯ್ಯ ಭೇಟಿ

ಗೋವಿನ ತ್ಯಾಜ್ಯವು ಭೂಮಿಯನ್ನು ಸತ್ವಯುತವನ್ನಾಗಿ ಮಾಡುತ್ತದೆ. ಗೋವುಗಳಿಂದಾಗಿ ಭಾರತ ಬದುಕಿದೆ. ನಾನು ಎಲ್ಲ ಅಲ್ಪಸಂಖ್ಯಾತರಮ್ಮೂ ವಿರೋಧಿಸುವುದಿಲ್ಲ. ಅಲ್ಪಸಂಖ್ಯಾತರಲ್ಲೂ ಗೋವುಗಳನ್ನು ಗೌರವಿಸುವವರಿದ್ದಾರೆ ಎಂದು ಅವರು ತಿಳಿಸಿದರು. ಕಾಂಗ್ರೆಸ್‍ನಲ್ಲೂ ಗೋವನ್ನು ಗೌರವಿಸುವವರಿದ್ದಾರೆ ಎಂದು ನುಡಿದರು.

ಬೆಳೆನಾಶ ಆದಾಗ ರೈತರ ಖಾತೆಗೆ ವೇಗವಾಗಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಇಂಥ ಅನೇಕ ಸಂಗತಿಗಳನ್ನು ಜನರಿಗೆ ತಿಳಿಸಿ. ಗೋತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಬಳಸಬೇಕಿದೆ. ರೈತರ ಆದಾಯ ದ್ವಿಗುಣಗೊಳಿಸಲು ಗೋತ್ಯಾಜ್ಯಗಳ ಮೌಲ್ಯವರ್ಧನೆಯು ಕೊಡುಗೆ ನೀಡಬಲ್ಲದು; ಇದು ಉದ್ಯೋಗಾವಕಾಶವನ್ನೂ ಕೊಡಬಲ್ಲದು ಎಂದು ತಿಳಿಸಿದರು.

ಭಾರತೀಯ ಗೋತಳಿಗಳನ್ನು ಉಳಿಸಬೇಕಿದೆ. ಶಾಸಕ ಮಸಾಲೆ ಜಯರಾಂ ಅವರು 25 ಲಕ್ಷ ಮೌಲ್ಯದ ಹೋರಿಯನ್ನು ಸಾಕಿದ್ದಾರೆ ಎಂದರು. ಗೋಶಾಲೆ ಹೆಚ್ಚಳಕ್ಕಾಗಿ ಸರಕಾರಿ ನೌಕರರು ನಿಗದಿತ ದೇಣಿಗೆ ಕೊಡಬೇಕೆಂಬ ತೀರ್ಮಾನ ಮಾಡಿದ ಬೊಮ್ಮಾಯಿಯವರನ್ನು ಅಭಿನಂದಿಸಿದರು. ಇದಕ್ಕಾಗಿ ಸರಕಾರಿ ನೌಕರರನ್ನೂ ಅಭಿನಂದಿಸುವುದಾಗಿ ತಿಳಿಸಿದರು.

‘ಪ್ರೀ ಮೆಟ್ರಿಕ್’ ವಿದ್ಯಾರ್ಥಿಗಳಿಗೆ ‘ಸ್ಕಾಲರ್ ಶಿಪ್’ ನೀಡುವಂತೆ ಸಿದ್ದರಾಮಯ್ಯ ಆಗ್ರಹ

ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ದುಂಡಪ್ಪ ಬಂಡೆವಾಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್ ನಿಯಂತ್ರಣಕ್ಕೆ ತಕ್ಷಣ ಕ್ರಮ ಕೈಗೊಂಡ ಬಿಜೆಪಿ ಸರಕಾರಗಳು ಜಾನುವಾರುಗಳಿಗೆ ಗಂಟು ರೋಗ ನಿಯಂತ್ರಣಕ್ಕೆ ಪ್ರಯತ್ನಿಸಿವೆ. ಎಲ್ಲ ದನಗಳಿಗೆ ಚುಚ್ಚುಮದ್ದು ನೀಡಲು ನೆರವಾಗಿ ಎಂದು ಮನವಿ ಮಾಡಿದರು.

ಗಾಣದೆಣ್ಣೆ, ಹಿಂಡಿ ಮೂಲಕ ಮೌಲ್ಯವರ್ಧನೆ ಸಾಧ್ಯವಿದೆ. ಇಂಥ ಹಿಂಡಿಯಿಂದ ಹೆಚ್ಚು ಹಾಲು ಸಿಗುತ್ತದೆ. ಹಿಂದಿನ ಕೃಷಿ ಪರಂಪರೆಯತ್ತ ನಾವು ನಡೆಯಬೇಕಿದೆ. ಪಾಳೇಕರ್ ಅವರ ಮಾದರಿಯನ್ನು ನಾವು ಅನುಸರಿಸಬೇಕು ಎಂದು ತಿಳಿಸಿದರು. ಅನುಭವಿಗಳಿಂದ ವಿವರ ತಿಳಿದು ಅದನ್ನು ಅನುಷ್ಠಾನಕ್ಕೆ ತರುವಂತೆ ಕಿವಿಮಾತು ಹೇಳಿದರು.

ರೈತ ಮೋರ್ಚಾ ರಾಜ್ಯ ಪ್ರಧಾನÀ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಅವರು ಮಾತನಾಡಿ, ಕೇಂದ್ರ- ರಾಜ್ಯಗಳ ಬಿಜೆಪಿ ಸರಕಾರಗಳ ಜನಪರ ಮತ್ತು ರೈತಪರ ಕಾರ್ಯಗಳನ್ನು ಮೋರ್ಚಾವು ಜನರಿಗೆ ತಲುಪಿಸಲಿದೆ ಎಂದು ತಿಳಿಸಿದರು. ರೈತ ಮೋರ್ಚಾ ರಾಜ್ಯ ಪ್ರಧಾನÀ ಕಾರ್ಯದರ್ಶಿ ಎಸ್. ಗುರುಲಿಂಗನಗೌಡ, ಕಾರ್ಯದರ್ಶಿ ಡಾ.ನವೀನ್ ಅವರು ಉಪಸ್ಥಿತರಿದ್ದರು.

Share.
Exit mobile version