ಸುಭಾಷಿತ :

Saturday, February 29 , 2020 5:56 PM

FREE KASHIMIR ಪೋಸ್ಟರ್ ವಿವಾದ : ಸ್ವಯಂಪ್ರೇರಿತ FIR ದಾಖಲಿಸಿದ ಪೊಲೀಸರು, ಸಂಜೆಯೊಳಗೆ ವರದಿ ನೀಡುವಂತೆ ರಾಜ್ಯಪಾಲರ ಸೂಚನೆ


Thursday, January 9th, 2020 4:16 pm

ಮೈಸೂರು : ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ FREE KASHIMIR ಎಂಬ ಪೋಸ್ಟರ್‌ ಪ್ರದರ್ಶಿಸಿದ ವಿಚಾರ ಸದ್ಯ ಗೊಂದಲಕ್ಕೆ ಕಾರಣವಾಗಿದೆ. ಪೋಸ್ಟರ್ ಪ್ರದರ್ಶನ ಕುರಿತು ಮೈಸೂರು ವಿವಿ ರಿಜಿಸ್ಟಾರ್ ವಿ.ಶಿವಪ್ಪ ಅವರಿಗೆ ಇಂದು ಸಂಜೆಯೊಳಗೆ ವರದಿ ನೀಡುವಂತೆ ರಾಜ್ಯಪಾಲ ವಜೂಭಾಯ್ ವಾಲಾ ಸೂಚನೆ ನೀಡಿದ್ದಾರೆ.

ಈ ಮಧ್ಯೆ, ನಿನ್ನೆ  ಮೈಸೂರು ವಿವಿ ಕ್ಯಾಂಪಸ್​ನ ಕ್ಲಾಕ್ ಟವರ್​ನಿಂದ ಕುವೆಂಪು ಪ್ರತಿಮೆ ವರೆಗೆ ಮೈಸೂರು ವಿವಿಯ ಸಂಶೋಧನಾ ಸಂಘ, ದಲಿತರ ವಿದ್ಯಾರ್ಥಿ ಒಕ್ಕೂಟ, ಸ್ಟೂಡೆಂಟ್ ಆಫ್ ಇಂಡಿಯಾ ಹಾಗೂ ಬಹುಜನ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳು ನಡೆಸಿದ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಒಬ್ಬರು ಫ್ರೀ ಕಾಶ್ಮೀರಿ ಎಂಬ ನಾಮಫಲಕ ಪ್ರದರ್ಶಿಸಿದ್ದರು. ಈ ವಿಚಾರವಾಗಿ ಜಯಲಕ್ಷ್ಮೀಪುರಂ ಠಾಣೆಯ ಪೊಲೀಸರು ಸ್ವಯಂಪ್ರೇರಿತ ಎಫ್ಐಆರ್ ದಾಖಲಿಸಿದ್ದಾರೆ. ಸೆಕ್ಷನ್ 124 A ಅಡಿ ಪೊಲೀಸರು ಪ್ರತಿಭಟನೆ ಆಯೋಜಕರಾದ ಮರಿದೇವಯ್ಯ ಹಾಗೂ ಇತರರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.

ಇನ್ನೊಂದೆಡೆ ನಿನ್ನೆ ನಡೆದ ಪ್ರತಿಭಟನೆ ಹಿನ್ನೆಲೆಯಲ್ಲಿ ಮೈಸೂರು ವಿವಿ ರಿಜಿಸ್ಟಾರ್ ವಿ.ಶಿವಪ್ಪ ಅವರು ಪ್ರತಿಭಟನಾ ಆಯೋಜಕರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದಾರೆ. ಇದರೊಂದಿಗೆ ಮೈಸೂರು ವಿವಿಯಿಂದ ಪ್ರತ್ಯೇಕ ದೂರು ದಾಖಲಾಗಿದೆ…

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions