ಸುಭಾಷಿತ :

Saturday, February 29 , 2020 4:43 PM

ಮೈಸೂರು ವಿವಿ ‘ಫ್ರೀ ಕಾಶ್ಮೀರ ಪ್ಲೆ ಕಾರ್ಡ್’ ವಿವಾದ : ‘ಸಿಂಡಿಕೇಟ್’ ಸಭೆಯಲ್ಲಿ ಪ್ರತಿಭಟಿಸಿದವರನ್ನು ‘ಹಾಸ್ಟೆಲ್’ನಿಂದ ಅಮಾನತ್ತಿಗೆ ನಿರ್ಣಯ


Friday, January 17th, 2020 5:44 pm

ಮೈಸೂರು : ಕಳೆದ ಇತ್ತೀಚೆಗೆ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ನಡೆಸಲಾದ ಪ್ರತಿಭಟನೆಯ ವೇಳೆ, ಫ್ರೀ ಕಾಶ್ಮೀರ ಬೋರ್ಡ್ ಹಿಡಿದು ನಡೆಸಿದ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ಫ್ರೀ ಕಾಶ್ಮೀರ್ ಬೋರ್ಡ್ ಹಿಡಿದಿದ್ದ ನಳಿನಿ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಇದಾದ ಬಳಿಕ ಇದೀಗ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ವಿವಿ ಹಾಸ್ಟೆಲ್ ನಿಂದ ಅಮಾನತ್ತು ಮಾಡುವ ಬಗ್ಗೆ ಇಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಾಗಿದೆ.

ಇಂದು ಮೈಸೂರು ವಿಶ್ವ ವಿದ್ಯಾಲಯದ ಕಾರ್ಯಸೌಧ ಕ್ರಾಫರ್ಡ್ ಭವನದಲ್ಲಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ನೇತೃತ್ವದಲ್ಲಿ ಸಿಂಡಿಕೇಟ್ ಸಭೆ ನಡೆಯಿತು. ಇಂತಹ ಸಭೆಯಲ್ಲಿ ಪೌರತ್ವ ತಿದ್ದುಪಡಿಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ಬಗ್ಗೆ ವ್ಯಾಪಕ ಚರ್ಚೆ ನಡೆಸಲಾಯಿತು.

ಇದಲ್ಲದೇ ಫ್ರೀ ಕಾಶ್ಮೀರ ಪ್ಲೇ ಕಾರ್ಡ್ ಪ್ರಕರಣದಿಂದಾಗಿ ವಿವಿ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಈ ಮೂಲಕ ವಿವಿಗೆ ವಿದ್ಯಾರ್ಥಿಗಳು ಕಳಂಕ ತಂದಿದ್ದಾರೆ. ಹೀಗಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಮಾನಸ ಗಂಗ್ರೋತ್ರಿ ಹಾಸ್ಟೆಲ್ ನಿಂದ ಅಮಾನತ್ತು ಮಾಡುವಂತೆ ಒತ್ತಾಯಿಸಲಾಯಿತು.

ಈ ಹಿನ್ನಲೆಯಲ್ಲಿ ಸಿಂಡಿಕೇಟ್ ಸದಸ್ಯರ ಒಕ್ಕೊರಲಿನ ಒತ್ತಾಯ, ಅಭಿಪ್ರಾಯದಿಂದಾಗಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವರು, ಆಯೋಜಿಸಿದ್ದ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಅಮಾನತ್ತು ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದವರಿಗೆ ಇದೀಗ ವಿವಿ ಹಾಸ್ಟೆಲ್ ನಿಂದ ಅಮಾನತ್ತಿನ ಶಿಕ್ಷೆ ವಿಧಿಸಲಾಗುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions