ಮೈಸೂರು ವಿ.ವಿ. 100ನೇ ವರ್ಷದ ಘಟಿಕೋತ್ಸವ: ನಾಳೆ ಪ್ರಧಾನಿ ಮೋದಿ ಭಾಷಣ – Kannada News Now


State

ಮೈಸೂರು ವಿ.ವಿ. 100ನೇ ವರ್ಷದ ಘಟಿಕೋತ್ಸವ: ನಾಳೆ ಪ್ರಧಾನಿ ಮೋದಿ ಭಾಷಣ

ಮೈಸೂರು: ಶಿಕ್ಷಣ ಕ್ಷೆತ್ರದಲ್ಲಿ ತನ್ನದೆ ಛಾಪು ಮೂಡಿಸಿರುವ ಮೈಸೂರು ವಿಶ್ವ ವಿದ್ಯಾಲಯಕ್ಕೆ ಇದೀಗ 100 ವರ್ಷ ಸಂಧಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ವಿಶ್ವವಿದ್ಯಾಲಯದ ಶತಮಾನೋತ್ಸವ ಘಟಿಕೋತ್ಸವ ಉದ್ದೇಶಿಸಿ ಸೋಮವಾರ ಭಾಷಣ ಮಾಡಲಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುವ ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಗಳ ಕುಲಾಧಿತಿಗಳು ಹಾಗೂ ರಾಜ್ಯಪಾಲ ವಜೂಭಾಯಿ ವಾಲ, ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಮೈಸೂರು ವಿಶ್ವವಿದ್ಯಾಲಯವು 1916ರ ಜುಲೈ 27 ರಂದು ಸ್ಥಾಪನೆಯಾಗಿದ್ದು, ಕರ್ನಾಟಕ, ದಕ್ಷಿಣ ಭಾರತದ ಪ್ರಥಮ ಹಾಗೂ ದೇಶದ 6ನೇ ವಿಶ್ವವಿದ್ಯಾಲಯವಾಗಿದೆ.
error: Content is protected !!