ಮೈಸೂರು: ನಗರದಲ್ಲಿ ತಾಳಿ ಕಟ್ಟುವಾಗಲೇ ದಿಢೀರ್ ಕುಸಿದು ಬಿದ್ದು ವಧು ಹೈಡ್ರಾಮ ಕ್ರಿಯೇಟ್ ಮಾಡಿದ್ದಾಳೆ. ಅಸ್ವಸ್ಥಗೊಂಡಿದ್ದಾಳೆ ಎಂದು ಆಸ್ಪತ್ರೆಗೆ ಕರೆದೊಯ್ಯೋದಕ್ಕೆ ಹೋದ್ರೇ.. ಆಕೆ ಏನ್ ಹೇಳಿದ್ಲು ಅಂತ ಮುಂದೆ ಓದಿ..
ಮೈಸೂರಿನ ವಿದ್ಯಾಭಾರತಿ ಕಲ್ಯಾಣ ಮಂಟಪದಲ್ಲಿ ನಗರದ ಸುಣ್ಣದಕೇರಿ ನಿವಾಸಿಯಾಗಿರುವ ವಧು ಸಿಂಚನ ಮತ್ತು ಹೆಚ್ ಡಿ ಕೋಟೆಯ ವರನ ಜೊತೆಗೆ ಮದುವೆ ನಡೆಯುತ್ತಿತ್ತು. ಇನ್ನೇನು ವರ ತಾಳಿ ಕಟ್ಟಬೇಕು ಎನ್ನುವಾಗಲೇ ವಧು ಸಿಂಚನ ಕುಸಿದು ಬಿದ್ದಿದ್ದಾಳೆ.
ಓ.. ಏನೋ ಆಯ್ತು.. ನಡಿರಿ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂತ ಕುಟುಂಬಸ್ಥರು ಕರೆದೊಯ್ಯೋದಕ್ಕೆ ಎತ್ತಿಕೊಂಡ್ರೇ.. ವಧುವಿನ ಕುಸಿದು ಬಿದ್ದು ಹೈಡ್ರಾಮ ಸೃಷ್ಠಿಸಿದ್ದರ ಹಿಂದಿನ ಕಾರಣ ಬಿಚ್ಚಿಟ್ಟಿದ್ದಾಳೆ. ನನಗೆ ಈ ಮದುವೆ ಇಷ್ಟವಿಲ್ಲ. ನನ್ನ ಲವರ್ ಜೊತೆಗೆ ಮದುವೆ ಆಗ್ತೀನಿ ಅಂತ ಅಲವತ್ತುಕೊಂಡಿದ್ದಾಳೆ.
ಯುವತಿಯ ಪ್ರೇಮ ಪುರಾಣ ಕೇಳಿ ಶಾಕ್ ಆದಂತ ವರನ ಪೋಷಕರು, ಗಲಾಟೆ ಶುರು ಮಾಡಿದ್ದಾರೆ. ಬಳಿಕ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರ ಮಧ್ಯಪ್ರವೇಶದೊಂದಿಗೆ ವರನ ಪೋಷಕರಿಗೆ ವಧುವಿನ ಪೋಷಕರು ಬಂಗಾರ, ಬೆಳಿಗ್ಗೆ ಸೇರಿದಂತೆ ಇತರೆ ಮದುವೆ ಖರ್ಚನ್ನು ಕೊಡೋದಾಗಿ ಒಪ್ಪಿಕೊಂಡಿದ್ದಾರೆ. ಮದುವೆ ಕ್ಯಾನ್ಸಲ್ ಮಾಡಿಕೊಂಡು, ವಧು-ವರನ ಪೋಷಕರು ಪರಸ್ಪರ ಯಾವುದೇ ದೂರು ನೀಡದೇ, ರಾಜಿ ಸಂಧಾನದ ಮೂಲಕ ಮನೆಗೆ ವಾಪಾಸ್ ಆಗಿದ್ದಾರೆ.
ನೀವು ಲ್ಯಾಪ್ ಟಾಪ್, ಮೊಬೈಲ್ ರಿಪೇರಿಗೆ ಕೊಡ್ತಾ ಇದ್ದೀರಾ.? ಅದಕ್ಕೂ ಮುನ್ನಾ ಈ ಸುದ್ದಿ ಓದಿ.!