ಸುಭಾಷಿತ :

Wednesday, January 22 , 2020 12:10 PM

ಅಚ್ಚರಿಯಾದ್ರೂ ಸತ್ಯ : ಮೈಸೂರಿನಲ್ಲಿ ಮಾರಾಟವಾಗುತ್ತಿರುವ ಈ ಸೀರೆಯ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..!


Monday, November 4th, 2019 3:38 pm

ಮೈಸೂರು : ಸೀರೆ ಎಂದರೆ ಅಲ್ಲಿ ಹೆಂಗಳೆಯರು ಕ್ಯೂ ನಿಲ್ಲೋದು ಗ್ಯಾರಂಟಿ. ಅದರಲ್ಲೂ ಭಾರತೀಯ ಯುವತಿಯರಿಗೆ ಸೀರೆ ಅಂದರೆ ಅದೇನೋ ಖುಷಿ. ತಮಗೆ ಒಪ್ಪುವ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಒಂದು ರೀತಿಯ ಸಂಭ್ರಮ. ಮೈಸೂರಿನಲ್ಲಿ ಕೆಎಸ್ಐಸಿ ವಿನೂತನ ರೀತಿಯ ರೇಷ್ಮೆ ಸೀರೆಗಳನ್ನು ಸಿದ್ದಪಡಿಸಿದ್ದು, ಇದ ಬೆಲೆ ಕೇಳಿದ್ರೆ ಶಾಕ್ ಆಗೋದು ಖಚಿತ.  ಈ ಸೀರೆಯ ಬೆಲೆ ಬರೋಬರಿ 3.15 ಲಕ್ಷ ರೂ..! ಅಬ್ಬಾ….ಈ ಸೀರೆಯಲ್ಲೇನು ಅಂತಹ ವಿಶೇಷ ಎಂದು ಹುಬ್ಬೇರಿಸಬೇಡಿ. ಈ ಸೀರೆ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿದೆ.

ಮೈಸೂರಿನ ಕೆ.ಎಸ್.ಐ.ಸಿ ಬಂಪರ್ ಆಫರ್ ಹಾಗೂ ಯಾವುದರಲ್ಲೂ ಕೊರತೆಯಿಲ್ಲವೇನೋ ಎಂಬಂತ ಸೀರೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಮೈಸೂರಿನ ಪ್ರತಿಷ್ಠಿತ ಕೆಎಸ್ಐಸಿ ಮಾರುಕಟ್ಟೆಗೆ ಬಂದಿರುವ ಒಂದು ರೇಷ್ಮೆ  ಸೀರೆಗಳ ಬೆಲೆಯಲ್ಲೇ ಅತೀ ಹೆಚ್ಚು ಮೌಲ್ಯವರ್ಧಿತ ಸೀರೆ ಇದಾಗಿದೆ. ಈ ಸೀರೆಗೆ ಥ್ರೆಡ್ಸ್ ಆಫ್ ಗೋಲ್ಡ್ ಡಿಸೈನರ್ ಎಂದೇ ಕರೆಯಲಾಗುತ್ತಿದೆ.  ಈ  ದುಬಾರಿ ಸೀರೆ ಬೇಕಾದರೆ ಮೊದಲೇ ನೀವು ಬುಕ್ ಮಾಡಬೇಕು. ಬುಕ್ ಮಾಡಿದ ತಿಂಗಳ ಬಳಿಕವೇ ಅದು ನಿಮ್ಮ ಕೈ ಸೇರುತ್ತದೆ.

ಇನ್ನು ಈ ದುಬಾರಿ ಸೀರೆಯ ವಿಶೇಷತೆಗಳೇನು ಅಂದರೆ, ಈ ಸೀರೆಗೆ ಚಿನ್ನ- ಬೆಳ್ಳಿಯ ಲೇಪನ ಮಾಡಲಾಗಿದೆ. ಇದರ ಜರಿಯ ಅಂಚುಗಳು ಹಾಗೂ ಬಳಸುವ ದಾರಗಳು ಬೆಳ್ಳಿಯದಾಗಿದ್ದು, ಅದಕ್ಕೆ ಚಿನ್ನದ ಹೊದಿಕೆಯನ್ನು ಹಾಕಲಾಗಿದೆ. ಒಂದು ಸೀರೆಯ ತೂಕ ಬರೋಬ್ಬರಿ 1 ರಿಂದ 2 ಕೆಜಿ ಇದ್ದು, ಇದರಲ್ಲಿ 900 ಗ್ರಾಂ ಬೆಳ್ಳಿ ಹಾಗೂ ಚಿನ್ನ ಮಿಶ್ರಿತ ದಾರ ಇದೆ. ಅಂದರೆ ಒಂದು ಸೀರೆಗೆ 10- 20 ಗ್ರಾಂ ಬಂಗಾರವನ್ನು ಬಳಸುತ್ತಾರೆ ಎಂಬುದು ವಿಶೇಷ. ಇನ್ನು ಈ ದುಬಾರಿ ಸೀರೆಗಳಿಗೆ ಬ್ಲೌಸ್ ಪೀಸ್ ಗಳು ಇರೋದಿಲ್ಲ. ಬ್ಲೌಸ್ ಪೀಸ್ ಬೇಕಾದರೆ ಹೆಚ್ಚುವರಿಯಾಗಿ  25 ಸಾವಿರ ಪಾವತಿಸಬೇಕಾಗುತ್ತದೆ….

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions