ಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್‌ ಪಡೆದಿರುವ ಆರೋಪಸಿದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸೇರಿದಂತೆ ಹಲವರ ಮೇಲೆ ಸಚಿವ ಮುನಿರತ್ನ 50 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

BIG NEWS: ಮೋಸ್ಟ್‌ ವಾಂಟೆಡ್‌ ಶಂಕಿತ ಉಗ್ರ ಯಾಸಿರ್‌ ಬೇಟೆ ಕ್ಷಣ ರೋಚಕ!; ಗಾಢನಿದ್ರೆಯಲ್ಲಿದ್ದಾಗಲೇ ಮನೆಗೆ ನುಗ್ಗಿದ NIA| NIA RAID

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ನಗರದ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ಕೆಂಪಣ್ಣ ಸೇರಿದಂತೆ ಇತರರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ಮುಂದಿನ ಆದೇಶದವರೆಗೂ ಅರ್ಜಿದಾರರ ವಿರುದ್ಧ ಯಾವುದೇ ರೀತಿಯ ಮಾನ ಹಾನಿಕರ ಹೇಳಿಕೆ ನೀಡದಂತೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.ಚಿತ್ರ ಕೆಂಪಣ್ಣ ಮತ್ತಿತರರು ಆರೋಪ ಮಾಡಿದ್ದರಿಂದ ಆ ಸಿನಿಮಾ ನಿರ್ಮಾಣ ಅನುಮಾನವಾಗಿದೆ.

BIG NEWS: ಮೋಸ್ಟ್‌ ವಾಂಟೆಡ್‌ ಶಂಕಿತ ಉಗ್ರ ಯಾಸಿರ್‌ ಬೇಟೆ ಕ್ಷಣ ರೋಚಕ!; ಗಾಢನಿದ್ರೆಯಲ್ಲಿದ್ದಾಗಲೇ ಮನೆಗೆ ನುಗ್ಗಿದ NIA| NIA RAID

 

ಸಂಘದ ಆರೋಪದಿಂದ ಇತರೆ ರಾಜ್ಯಗಳಲ್ಲಿ ಸಿನಿಮಾ ಹಂಚಿಕೆಗೆ ಹಿಂಜರಿಯುತ್ತಿದ್ದಾರೆ. ಐತಿಹಾಸಿಕ ಸಿನಿಮಾ ನಿರ್ಮಾಣಕ್ಕೆ ಪೆಟ್ಟು ಬಿದ್ದಿದೆ. ಇದರಿಂದ ಸುಮಾರು 100 ಕೋಟಿ ರೂ. ನಷ್ಟವಾಗಿದೆ. ಅಲ್ಲದೆ, ಕಳೆದ ನಾಲ್ಕು ದಶಕಗಳಿಂದ ಗಳಿಸಿರುವ ಘನತೆಗೆ ಧಕ್ಕೆಯಾಗಿದೆ. ಆದ್ದರಿಂದ 50 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.

Share.
Exit mobile version