ಮಹಾರಾಷ್ಟ್ರ: ಮುಂಬೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿರುವ ಸಾಧ್ಯತೆಯಿರುವುದರಿಂದ ಮಹಾರಾಷ್ಟ್ರದಾದ್ಯಂತ ಪ್ರವಾಹ ಪೀಡಿತ ಸ್ಥಳಗಳಿಂದ 3,500 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಸಿಎಂ ಏಕನಾಥ್ ಶಿಂಧೆ ಹೇಳಿದ್ದಾರೆ.

ಸೋಮವಾರದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಮುಂಬೈ ಸೇರಿದಂತೆ ನಗರ ಪ್ರದೇಶಗಳಲ್ಲಿ ನೀರು ನುಗ್ಗಿದೆ. ಅಷ್ಟೇ ಅಲ್ಲದೇ, ಕೆಲವು ನದಿಗಳ ಮಟ್ಟ ವೇಗವಾಗಿ ಏರುತ್ತಿದೆ. ಮುಂಬೈನ ಪಾವಾಯಿ ಕೆರೆ ಕೂಡ ಮಂಗಳವಾರ ಸಂಜೆಯಿಂದ ತುಂಬಿ ಹರಿಯಲಾರಂಭಿಸಿದೆ.

ಹೀಗಾಗಿ, ಭಾರತೀಯ ಹವಾಮಾನ ಇಲಾಖೆಯು ರಾಯಗಢ, ರತ್ನಾಗಿರಿ ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮತ್ತು ಅತ್ಯಂತ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದ್ದು, ರೆಡ್‌ ಮತ್ತು ಆರೆಂಜ್‌ ಎಚ್ಚರಿಕೆ ನೀಡಿದೆ. ಹೆಚ್ಚು ಅಪಾಯವಿರುವ ಸ್ಥಳಗಳಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಥವಾ ಎನ್‌ಡಿಆರ್‌ಎಫ್‌ನ ತಂಡಗಳನ್ನು ಸೇವೆಗೆ ನಿಯೋಜಿಸಿದೆ.

Breaking news:‌ ಅಂಡಮಾನ್ & ನಿಕೋಬಾರ್ ದ್ವೀಪಗಳಲ್ಲಿ ಮತ್ತೆ ಕಂಪಿಸಿದ ಭೂಮಿ: 4.6 ತೀವ್ರತೆ ದಾಖಲು

BIGG NEWS : ಉಪನ್ಯಾಸಕ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ : ಶೀಘ್ರವೇ 3,500 ಅತಿಥಿ ಉಪನ್ಯಾಸಕರ ನೇಮಕ

Share.
Exit mobile version