ಸುಭಾಷಿತ :

Monday, March 30 , 2020 12:23 AM

‘ಮೌನಂ’ ಅಪ್ಪ-ಮಗನ ಪ್ರೀತಿಗೆ ಫುಲ್ ಮಾರ್ಕ್ಸ್..! 4 / 5


Friday, February 21st, 2020 8:00 pm


ನಿರ್ದೇಶನ: ರಾಜ್ ಪಂಡಿತ್
ನಿರ್ಮಾಣ: ನಿಹಾರಿಕ ಬ್ಯಾನರ್
ತಾರಾಗಣ: ಅವಿನಾಶ್, ಮಯೂರಿ, ಬಾಲಾಜಿ ಶರ್ಮಾ, ಗುಣವಂತ ಮಂಜು, ರಿತೇಶ್, ಬಲರಾಂ, ರಿತೇಶ್, ನಯನಾ ಸೇರಿದಂತೆ ಅನೇಕರು ತಾರಾಬಳಗದಲ್ಲಿದ್ದಾರೆ

ಸಿನಿಮಾಡೆಸ್ಕ್‌: ರಾಜ್ ಪಂಡಿತ್ ನಿರ್ದೇಶನದ ‘ಮೌನಂ’ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರೀಕರಣ ಕಂಪ್ಲೀಟ್ ಆದಾಗಿನಿಂದ ಅವುನಾಶ್ ಸಿನಿಕೆರಿಯರ್ ನಲ್ಲಿ ಅದ್ಭುತವಾದ ಸಿನಿಮಾ ಎಂದೇ ಬಿಂಬಿತವಾಗಿತ್ತು. ಸಿನಿಮಾ ನೋಡಿದ ಮೇಲೆ ಅದು ಸತ್ಯವಾಗಿದೆ. ಅವಿನಾಶ್ ಆರು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದು, ಒಂದೊಂದು ಗೆಟಪ್ ನಲ್ಲೂ ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ತಾಯಿಯಿಲ್ಲದ ಮಗುವನ್ನು ತಂದೆಯೇ ಎಲ್ಲವೂ ಆಗಿ ಬೆಳೆಸುತ್ತಾನೆ. ಮತ್ತೊಂದು ಮದುವೆಯಾಗದೇ ಮಗನ ಸರ್ವಸ್ವವೆಂದು. ಮಗ ದೊಡ್ಡವನಾಗುವವರೆಗೂ ತಂದೆಗೆ ಮಗನೇ ಎಲ್ಲಾ ಮಗನಿಗೆ ತಂದೆಯೇ ಎಲ್ಲಾ ಆಗಿರುತ್ತಾರೆ. ಮಗ ದೊಡ್ಡವನಾದ ಮೇಲೆ ತಂದೆ ಬಿಟ್ಟು ಪ್ರೇಯಸಿಯ ಪ್ರೀತಿಯೆಡೆಗೆ ವಾಲುತ್ತಾನೆ. ಬಯಸಿದ ಮಗನ ಪ್ರೀತಿ ದೂರವಾಗುತ್ತಿದ್ದಾಗ, ಅಮೂಲ್ಯ ಸಮಯ ಹಾಳು ಮಾಡಿಕೊಂಡರನಲ್ಲಾ ಎಂದು, ಬದಲಾಗುವುದಕ್ಕೆ ಹೊರಡುತ್ತಾನೆ. ಆ ದಾರಿಯಲ್ಲಿ ಮಗನ ಪ್ರೇಯಸಿ ಮೇಲೆಯೇ ತಂದೆಗೂ ಪ್ರೀತಿ ಹುಟ್ಟುತ್ತೆ. ತಂದೆ-ಮಗ ಇಬ್ಬರು ಇಬ್ಬಳನ್ನೇ ಪ್ರೀತಿಸೋದು ಹೇಗೆ, ಯಾರಿಗೆ ಸಿಕ್ತಾಳೆ ಅನ್ನೋದು ಸಿನಿಮಾದ ಕಥೆ.

ನಾಯಕನಾಗಿ ಬಾಲಾಜಿ ಶರ್ಮಾ ಸೈ ಎನಿಸಿಕೊಂಡಿದ್ದಾರೆ. ನಾಯಕಿ ಪಾತ್ರದಲ್ಲಿ ಮಯೂರಿ ಬೋಲ್ಡ್ ಆಗಿ ಸಖತ್ತಾಗಿ ಆ್ಯಕ್ಟ್ ಮಾಡಿದ್ದಾರೆ. ಹಿರಿಯ ನಟ ಅವಿನಾಶ್ ತಮ್ಮ ಅದ್ಭುತ ನಟನೆಯನ್ನ ತೋರಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ರಿತೇಶ್ ಅಭಿನಯ ಕೂಡ ಅದ್ಭುತವಾಗಿದ್ದು, ನಗಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಆಕಾಶ್ ಸಾಹಿತ್ಯ ಬರೆದಿರುವ ಹಾಡುಗಳು ಮನದಲ್ಲೇ ಹಾಗೇ ತೇಲಿಸುತ್ತವೆ. ಇಡೀ ಕುಟುಂಬ ಸಮೇತ ಕುಳಿತು ನೋಡಬಹುದಾದಂತ ಸಿನಿಮಾ ಇದಾಗಿದೆ. ಒಳ್ಳೆಯ ಮನರಂಜನೆಯನ್ನ ಒಳಗೊಂಡಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions