ಬೆಂಗಳೂರು: ಇಂದಿನಿಂದ ಸೆಪ್ಟೆಂಬರ್ 28ರವರೆಗೆ ಬೆಂಗಳೂರಿಗೆ ವಿವಿಧ ಗಣ್ಯರ ಭೇಟಿಯ ಹಿನ್ನಲೆಯಲ್ಲಿ, ಸುಗಮ ಸಂಚಾರದ ವ್ಯವಸ್ಥೆಗಾಗಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.

BIGG NEWS : ಮೀಸಲಾತಿ ವಿಚಾರ : ಬಿಜೆಪಿಯಿಂದ ಬೆಂಗಳೂರಿನಲ್ಲಿ ಅ.8 ರಂದು ಸರ್ವಪಕ್ಷಗಳ ಸಭೆ |ST Reservation

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಬೆಂಗಳೂರು ಸಂಚಾರ ಪೊಲೀಸರು ( Bengaluru Traffic Police ), ದಿನಾಂಕ 26-09-2022 ರಿಂದ 28-09-2022ರವೆರೆಗೆ ಗಣ್ಯ ವ್ಯಕ್ತಿಗಳು ಬೆಂಗಳೂರು ನಗರಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸುಗಮ ಸಂಚಾರ ಮತ್ತು ಸುರಕ್ಷತೆಯ ಹಿತದೃಷ್ಠಿಯಿಂದ ಕಬ್ಬನ್ ಪಾರ್ಕ್ ಮತ್ತು ಅಶೋಕ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕೆಳಕಂಡ ಏಕಮುಖ ಸಂಚಾರ ರಸ್ತೆಗಳನ್ನು ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಗಳನ್ನಾಗಿ ಮಾರ್ಪಡಿಸಲಾಗಿದೆ ಎಂದಿದ್ದಾರೆ.

BREAKING NEWS : ಕಾಲ್ತುಳಿತ ಪ್ರಕರಣ ; ನಟ ‘ಶಾರುಖ್ ಖಾನ್’ಗೆ ಬಿಗ್ ರಿಲೀಫ್ ; ಹೈಕೋರ್ಟ್ ತೀರ್ಪು ಎತ್ತಿಹಿಡಿದ ‘ಸುಪ್ರೀಂ’ |Relief For Shah Rukh Khan

ಹೀಗಿದೆ ಇಂದಿನಿಂದ ಸೆ.28ರವರೆಗೆ ಸಂಚಾರ ಮಾರ್ಗ ಬದಲಾವಣೆ

  • ಕಬ್ಬನ್ ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಭವನ ರಸ್ತೆಯನ್ನು ರಾಜಭವನ ಮುಖ್ಯದ್ವಾರದಿಂದ ಪೊಲೀಸ್ ತಿಮ್ಮಯ್ಯ ವೃತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ದಿನಾಂಕ 25-09-2022 ರಿಂದ ದಿನಾಂಕ 27-09-2022ರವರೆಗೆ 3 ದಿನಗಳು ಮಾಡಲಾಗಿದೆ.
  • ಗಣ್ಯ ವ್ಯಕ್ತಿಗಳು ಕಾನ್ವಯ್ ಸಂಚರಿಸುವ ಸಮಯದಲ್ಲಿ ಮಾತ್ರ ಅನುವು ಮಾಡಿಕೊಡಲಾಗಿದೆ. ವಿಧಾನಸೌಧದ ನಿರ್ಗಮನ ದ್ವಾರದ ಗೇಟ್ ನಂ.4ರಲ್ಲಿ ಹಾಲಿ ಪ್ರವೇಶ ನಿಷೇಧವಿದ್ದು, ದಿನಾಂಕ 25-09-2022ರಿಂದ ದಿನಾಂಕ 27-09-2022ರವರೆಗೆ 3 ದಿನಗಳವರೆಗೆ ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಮುಕ್ತ ಪ್ರವೇಶಕ್ಕೆ ಅನುವು ಮಾಡಲಾಗಿದೆ ಎಂದಿದ್ದಾರೆ.
  • ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಿಚ್ಮಂಡ್ ರಸ್ತೆಯಲ್ಲಿ ರಿಚ್ಮಂಡ್ ವೃತ್ತದಿಂದ ಬಾಲ್ಡ್ ವಿನ್ ಬಾಲಕಿಯರ ಶಾಲೆಯ ವೃತ್ತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಿ, ದಿನಾಂಕ 25-09-2022 ರಿಂದ ದಿನಾಂಕ 27-09-2022ರವರೆಗೆ 3 ದಿನಗಳ ಕಾಲ ಗೌರವಾನ್ವಿತ ಗಣ್ಯವ್ಯಕ್ತಿಗಳ ಕಾನ್ವಾಯ್ ಸಂಚರಿಸುವ ಸಮಯದಲ್ಲಿ ಮಾತ್ರ ಅನುವು ಮಾಡಿಕೊಡಲಾಗಿದೆ.

ವಾಹನ ಸವಾರರು ಈ ಪರ್ಯಾಯ ಮಾರ್ಗದಲ್ಲಿ ಸಂಚರಿಸಿ

  • ದಿನಾಂಕ 26-09-2022ರ ಇಂದು ಸಂಜೆ 5.30 ಗಂಟೆಯಿಂದ 6 ಗಂಟೆಯವರೆಗೆ ಹಳೇ ವಿಮಾನ ನಿಲ್ದಾಣ ರಸ್ತೆ – ಎಂ.ಜಿ ರಸ್ತೆ, ಡಿಕನ್ಸನ್ ರಸ್ತೆ, ಕೆ ಆರ್ ರಸ್ತೆ ಮತ್ತು ಕಬ್ಬನ್ ರಸ್ತೆ, ರಾಜಭವನ ರಸ್ತೆ ಮಾರ್ಗವಾಗಿ ಸಂಚರಿಸುವುದು.
  • ದಿನಾಂಕ 27-09-2022ರ ನಾಳೆ ಬೆಳಿಗ್ಗೆ 9.30 ಗಂಟೆಯಿಂದ 11.30 ಗಂಟೆಯವರೆಗೆ ರಾಜಭವನ ರಸ್ತೆ, ಇನ್ ಫೆಂಟ್ರಿ ರಸ್ತೆ, ಕೆ ಆರ್ ರಸ್ತೆ ಮತ್ತು ಕಬ್ಬನ್ ರಸ್ತೆ, ಡಿಕನ್ಸನ್ ರಸ್ತೆ, ಎಂ.ಜಿ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆ, ಸುಂದರನ್ ದಾಸ್ ರಸ್ತೆ ಮಾರ್ಗವಾಗಿ ತೆರಳುವುದು
  • ನಾಳೆ ಮಧ್ಯಾಹ್ನ 3.40 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ರಾಜಭವನ ರಸ್ತೆ, ಇನ್ ಫೆಂಟ್ರಿ ರಸ್ತೆ, ಕ್ವೀನ್ಸ್ ರಸ್ತೆ, ಕಸ್ತೂರಿ ಬಾ ರಸ್ತೆ, ರಿಚ್ಮಂಡ್ ರಸ್ತೆ, ಲ್ಯಾಂಗ್ ಫೋರ್ಡ್ ರಸ್ತೆ, ಅಂಬೇಡ್ಕರ್ ರಸ್ತೆ ಮಾರ್ಗವಾಗಿ ತೆರಳುವುದು
  • ದಿನಾಂಕ 28-09-2022ರಂದು ಬೆಳಿಗ್ಗೆ 9 ಗಂಟೆಯಿಂದ 9.30ರವರೆಗೆ ರಾಜಭವನ ರಸ್ತೆ, ಇನ್ ಫೆಂಟ್ರಿ ರಸ್ತೆ, ಕೆ ಆರ್ ರಸ್ತೆ ಮತ್ತು ಕಬ್ಬನ್ ರಸ್ತೆ, ಡಿಕನ್ಸನ್ ರಸ್ತೆ, ಎಂ.ಜಿ ರಸ್ತೆ, ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿ ತೆರಳುವಂತೆ ತಿಳಿಸಿದೆ.
Share.
Exit mobile version