ಕೊಪ್ಪಳ: ಕಳೆದ ಕೆಲ ದಿನಗಳ ಹಿಂದೆ ಕೋಡಿ ಮಠದ ಶ್ರೀಗಳು ವಿದ್ಯುತ್ ಶಾಕ್ ( Electric Shock ), ಗುಡುಗು-ಸಿಡಿಲಿನಿಂದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ಇದೀಗ ನಿಜವಾಗುತ್ತಿದ್ಯಾ ಎನ್ನುವಂತೆ ರಾಜ್ಯದಲ್ಲಿ ವಿದ್ಯುತ್ ಶಾಕ್, ಸಿಡಿಲಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಿದೆ. ಇಂದು ಕೊಪ್ಪಳದಲ್ಲಿ ವಿದ್ಯುತ್ ಶಾಕ್ ನಿಂದ ತಾಯಿ ಹಾಗೂ ಇಬ್ಬರು ಮಕ್ಕಳು ಧಾರುಣವಾಗಿ ಸಾವನ್ನಪ್ಪಿದ್ದಾರೆ.
Siddaramaiah: ಪ್ರಥಮ ಬಾರಿ ಪತ್ನಿಯೊಂದಿಗೆ ಕಾಣಿಸಿಕೊಂಡ ‘ಮಾಜಿ ಸಿಎಂ ಸಿದ್ಧರಾಮಯ್ಯ’
ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ, ಮೆಯಲ್ಲಿ ಬಟ್ಟೆ ಒಣ ಹಾಕುವ ಸಂದರ್ಭದಲ್ಲಿ, ವಿದ್ಯುತ್ ಶಾಕ್ ನಿಂದಾಗಿ ತಾಯಿ ಶೈಲಮ್ಮ (28), ಮಕ್ಕಳಾದಂತ ಪವನ್ (2) ಹಾಗೂ ಸಾನ್ವಿ (3) ಎಂಬುವರು ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ.
‘2023ರ ಚುನಾವಣೆ’ಯಲ್ಲಿ ‘ಹೆಚ್.ಡಿ ಕುಮಾರಸ್ವಾಮಿ’ಗೆ ನೀಡುವ ಮತವೇ ಉಡುಗೋರೆ: ‘ಮದುವೆ ಆಮತ್ರಣ ಪತ್ರಿಕೆ’ ವೈರಲ್
ಅಂದಹಾಗೇ ತಾಯಿ ಶೈಲಮ್ಮ ಬಟ್ಟೆ ಒಣಗಾಗುವ ವೇಳೆಯಲ್ಲಿ 2 ವರ್ಷದ ಮಗ ಪವನ್ ಅನ್ನು ಎತ್ತಿಕೊಂಡು, ಪಕ್ಕದಲ್ಲೇ ಇದ್ದಂತ ಮತ್ತೊಬ್ಬ ಮೂರು ವರ್ಷದ ಮಗಳು ಸಾನ್ವಿಯನ್ನು ಇಟ್ಟುಕೊಂಡು ಒಣ ಹಾಕುತ್ತಿದ್ದರು. ಈ ವೇಳೆ ಹಸಿ ಬಟ್ಟೆ ವಿದ್ಯುತ್ ವಯರ್ ಗೆ ತಾಗಿ, ಶಾಕ್ ನಿಂದ ಸ್ಥಳದಲ್ಲೇ ಧಾರುಣವಾಗಿ ಸಾವನ್ನಪ್ಪಿದ್ದಾರೆ.