ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಅರುಣಾಚಲ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಈ ಗುಂಡಿನ ಚಕಮಕಿಯಲ್ಲಿ ಉಭಯ ದೇಶಗಳ ಸೈನಿಕರು ಗಾಯಗೊಂಡಿದ್ದಾರೆ.

ತವಾಂಗ್ ಬಳಿ ಡಿಸೆಂಬರ್ 9ರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಾರತೀಯ ಸೇನೆಯಿಂದ ಅಧಿಕೃತ ಹೇಳಿಕೆಯನ್ನ ನಿರೀಕ್ಷಿಸಲಾಗುತ್ತಿದೆ. ಅಕ್ಟೋಬರ್ 2021ರಲ್ಲಿ, ಅರುಣಾಚಲ ಪ್ರದೇಶದ ಯಾಂಗ್ಸೆಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ವಿವಾದವಿತ್ತು. 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ.

ಜೂನ್ 15, 2020ರ ಘಟನೆಯ ನಂತ್ರ ಇದೇ ಮೊದಲನೆಯದು. ನಂತ್ರ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗಿನ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು ಮತ್ತು ಅನೇಕರು ಗಾಯಗೊಂಡರು. ಈ ಚಕಮಕಿಯಲ್ಲಿ ಚೀನಾದ ಹಲವು ಸೈನಿಕರು ಕೂಡ ಸಾವನ್ನಪ್ಪಿದ್ದಾರೆ.

 

ಅರುಣಾಚಲ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಮುಖಾಮುಖಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವಾಗ ಭಾರತ ಮತ್ತು ಚೀನಾ ಸೈನಿಕರು ಆಗಾಗ್ಗೆ ಮುಖಾಮುಖಿಯಾಗುತ್ತಾರೆ. ಅಕ್ಟೋಬರ್ 2021ರಲ್ಲಿ, ಕೆಲವು ಚೀನೀ ಸೈನಿಕರನ್ನು ಯಾಂಗ್ಸೆಯಲ್ಲಿ ಕೆಲವು ಗಂಟೆಗಳ ಕಾಲ ಭಾರತೀಯ ಸೈನಿಕರು ಬಂಧಿಸಿದಾಗ ಇದೇ ರೀತಿಯ ಘಟನೆ ನಡೆಯಿತು.

‘ರೈಲ್ವೆ ಪ್ರಯಾಣಿಕ’ರಿಗೆ ಗುಡ್ ನ್ಯೂಸ್: ಈಗ ‘ಮೊಬೈಲ್ ಆ್ಯಪ್’ನಲ್ಲಿ ‘ಕಾಯ್ದಿರಿಸದ ಟಿಕೆಟ್ ಬುಕ್ಕಿಂಗ್’ಗೆ ಅವಕಾಶ

‘ಸಾಂಗ್ಲಿಯಾನ ಸಿನಿಮಾ ಸೈಲ್’ನಲ್ಲಿ ಮಾರುವೇಶದಲ್ಲಿ ಫೀಲ್ಡಿಗೆ ಇಳಿದ ತಹಶೀಲ್ದಾರ್: ಆಂಬುಲೆನ್ಸ್ ಕೃತಕ ಸಮಸ್ಯೆ ಬಯಲಿಗೆ

Good News: ಡಿ.14 ರಂದು 114 ‘ನಮ್ಮ ಕ್ಲಿನಿಕ್‌’ ಸಿಎಂ ಬೊಮ್ಮಾಯಿ ಲೋಕಾರ್ಪಣೆ: ಇಲ್ಲಿ ಸಿಗಲಿದೆ ಸಂಪೂರ್ಣ ಉಚಿತ ಆರೋಗ್ಯ ಸೇವೆ

Share.
Exit mobile version