ಮಂಡ್ಯ: ಜಿಲ್ಲೆಯಲ್ಲಿ ದಳಪತಿಗಳಿಗೆ ಬಿಗ್ ಶಾಕ್ ನೀಡಲಾಗಿದೆ. ಇಂದು 200ಕ್ಕೂ ಹೆಚ್ಚು ಜೆಡಿಎಸ್ ಮುಖಂಡರು ( JDS Leader ) ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ( Congress Party ) ಸೇರ್ಪಡೆಗೊಂಡಿದ್ದಾರೆ.
ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಖಾಸಗೀ ಸಭಾ ಭವನದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ರಮೇಶ್ ಬಾಬು ಹಾಗೂ ಬಂಡಿಸಿದ್ದೇಗೌಡ ನೇತೃತ್ವದಲ್ಲಿ ಜೆಡಿಎಸ್ ( JDS Party ) ಮುಖಂಡರಾದಂತ ಸಿ ಸ್ವಾಮಿಗೌಡ, ಡಿ.ಎಂ ರವಿ ಕೈ ಪಕ್ಷ ಸೇರ್ಪಡೆಗೊಂಡರು.
ಇವರಷ್ಟೇ ಅಲ್ಲದೇ ಇವರೊಂದಿಗೆ ಶ್ರೀರಂಗಪಟ್ಟಣದ 200ಕ್ಕೂ ಹೆಚ್ಚು ಮುಖಂಡರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಳ್ಳುವ ಮೂಲಕ, ಮಂಡ್ಯದಲ್ಲೇ ದಳಪತಿಗಳಿಗೆ ಬಿಗ್ ಶಾಕ್ ಅನ್ನು ಜೆಡಿಎಸ್ ಮುಖಂಡರು ನೀಡಿದ್ದಾರೆ.
ನನಗೆ 5 ವರ್ಷ ಸ್ವತಂತ್ರ ಸರ್ಕಾರ ನಡೆಸಲು ಸಹಕಾರ ಕೊಡಿ: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮನವಿ
ಮಂಡ್ಯ: ನನಗೆ 5 ವರ್ಷ ಸ್ವತಂತ್ರವಾಗಿ ಸರ್ಕಾರ ನಡೆಸಲು ಸಹಕಾರ ಕೊಡಿ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( Farmer CM HD Kumaraswamy ) ಜನತೆಯಲ್ಲಿ ಮನವಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಟಿ ನರಸೀಪುರ ತಾಲೂಕಿನ ತಲಕಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜೆಡಿಎಸ್ ಪಕ್ಷದಿಂದ ನಡೆಸುತ್ತಿರುವಂತ ಪಂಚರತ್ನ ಕಾರ್ಯಕ್ರಮವೇ ಜನಪರ ಕಾರ್ಯಕ್ರಮವಾಗಿದೆ. ಶಾಸಕ ಅಶ್ವಿನ್ ಕುಮಾರ್ ನಿಮ್ಮ ಕಷ್ಟ ಸುಖದಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.
5 ವರ್ಷ ಸ್ವತಂತ್ರ ಸರ್ಕಾರ ನಡೆಸಲು ನನಗೆ ಸಹಕಾರ ಕೊಡಿ. ಪಂಚರತ್ನ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುತ್ತೇನೆ. ಜನಪರ ಆಡಳಿತ ನಡೆಸಿ, ತೋರಿಸುವುದಾಗಿ ಮನವಿ ಮಾಡಿದರು.
ವರದಿ: ಗಿರೀಶ್ ರಾಜ್, ಮಂಡ್ಯ
BIGG NEWS : ಐಸಿಸಿ ಬಂಧನ ವಾರಂಟ್ ಬಳಿಕ ರಷ್ಯಾ ಆಕ್ರಮಿತ ಮಾರಿಯುಪೋಲ್, ಕ್ರೈಮಿಯಾಗೆ ‘ಪುಟಿನ್’ ಭೇಟಿ
‘ವಂಡರ್ ಲಾ’ ಪ್ರಿಯರೇ ಗಮನಿಸಿ: ಮಾ.25ರಂದು ‘ಬೆಂಗಳೂರು ಪಾರ್ಕ್’ನಲ್ಲಿ ‘ಡಿಜೆ ನೈಟ್’ ಆಯೋಜನೆ