ಬೆಂಗಳೂರು : ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು. ಮೋದಿ ಹಣ ಹಾಕಿದ್ರಾ ಎಂದು ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.
ನಾವು ಘೋಷಿಸಿರುವ 5 ಗ್ಯಾರೆಂಟಿಗಳನ್ನು ಶೀಘ್ರವೇ ಜಾರಿಗೆ ತರುತ್ತೇವೆ’ ಎಂದು ನೂತನ ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ. ಗ್ಯಾರೆಂಟಿ ಯೋಜನೆ ಜಾರಿ ಮಾಡದಿದ್ದರೆ ಜೂನ್ 1 ರಿಂದ ಪ್ರತಿಭಟನೆ ಮಾಡುತ್ತೇವೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ನಮ್ಮ ಸರ್ಕಾರ ಬಂದು ಒಂದು ವಾರ ಆಗಿದೆ. ನಾವು ಎಲ್ಲ ಬೇಡಿಕೆ ಈಡೇರಿಕೆ ಮಾಡ್ತೀವಿ. ಕಳೆದ ಬಿಜೆಪಿ ಸರ್ಕಾರ 600 ಭರವಸೆ ನೀಡಿತ್ತು ಇದರಲ್ಲಿ 60 ಅಷ್ಟೇ ಈಡೇರಿಸಿದೆ. ಪ್ರಧಾನಿ ಪ್ರತಿಯೊಬ್ಬರಿಗೂ 15 ಲಕ್ಷ ನೀಡುವುದಾಗಿ ಹೇಳಿದ್ರು. ಎಲ್ಲರ ಖಾತೆಗೂ ಹಣ ಹಾಕಿದ್ರಾ ಅಂತಾ ರಾಮಲಿಂಗಾರೆಡ್ಡಿ ಪ್ರಶ್ನೆ ಮಾಡಿದ್ದಾರೆ.
ಗ್ಯಾರೆಂಟಿ ಯೋಜನೆ ಜಾರಿ ಮಾಡದಿದ್ದರೆ ಜೂನ್ 1 ರಿಂದ ಪ್ರತಿಭಟನೆ ಮಾಡುತ್ತೇವೆ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಪ್ರತಾಪ್ ಸಿಂಹ ಹೋರಾಟ ಮಾಡುವ ಅವಶ್ಯಕತೆ ಇಲ್ಲ, ನಾವು ಘೋಷಿಸಿರುವ 5 ಗ್ಯಾರೆಂಟಿಗಳನ್ನು ಶೀಘ್ರವೇ ಜಾರಿಗೆ ತರುತ್ತೇವೆ’ ಎಂದು ಸಚಿವ ರಾಮಲಿಂಗಾ ರೆಡ್ಡಿ ಭರವಸೆ ನೀಡಿದ್ದಾರೆ. ಬಿಜೆಪಿ ಕಳೆದ ಚುನಾವಣೆಯಲ್ಲಿ 600 ಹೆಚ್ಚು ಭರವಸೆ ನೀಡಿತ್ತು, ಅದನ್ನು ಈಡೇರಿಸಿದ್ಯಾ..? ಪ್ರಧಾನಿ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಹಾಕುವುದಾಗಿ ಹೇಳಿದ್ದರು.ಮೋದಿ ಹಣ ಹಾಕಿದ್ರಾ ಎಂದು ಪ್ರಶ್ನಿಸಿದ್ದಾರೆ. ಇಂದು ಸಚಿವ ಸಂಪುಟ ವಿಸ್ತರಣೆ ಫೈನಲ್ ಆಗಲಿದೆ. 99 % ಸಚಿವರು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದರು.
ಸಂಪುಟ ವಿಸ್ತರಣೆ ಕಸರತ್ತು : ಸೋನಿಯಾ ಗಾಂಧಿ ಭೇಟಿಯಾದ ಸಿಎಂ ಸಿದ್ದರಾಮಯ್ಯ
ನವದೆಹಲಿ : ರಾಜ್ಯದಲ್ಲಿ ಸಂಪುಟ ವಿಸ್ತರಣೆ ಕಸರತ್ತು ಕೊನೆ ಹಂತ ತಲುಪಿದ್ದು, ಸೋನಿಯಾ ಗಾಂಧಿ ಭೇಟಿಗೆ ಸಿಎಂ ಸಿದ್ದರಾಮಯ್ಯ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಇನ್ನೂ, ನಿನ್ನೆ ರಾತ್ರಿ ದೆಹಲಿಯಿಂದ ವಾಪಸ್ ಆಗಿದ್ದ ಡಿಸಿಎಂ ಡಿಕೆಶಿ ಮತ್ತೆ ದೆಹಲಿಗೆ ವಾಪಸ್ ಆಗಿದ್ದಾರೆ. ನೂತನ ಸಚಿವರ ಆಯ್ಕೆ ಕಸರತ್ತು ಕೊನೆ ಹಂತದಲ್ಲಿದ್ದು, ಇಂದು ರಾತ್ರಿಯೊಳಗೆ ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ.ಸಂಪುಟ ವಿಸ್ತರಣೆ ಬಗ್ಗೆ ಸೋನಿಯಾ ಗಾಂಧಿ ಅವರಿಂದ ಸಿದ್ದರಾಮಯ್ಯ ಮಾರ್ಗದರ್ಶನ ಪಡೆಯಲಿದ್ದಾರೆ.
ಮೇ 27 ರಂದು 24 ಮಂದಿ ನೂತನ ಸಚಿವರ ಪದಗ್ರಹಣ ಕಾರ್ಯಕ್ರಮ ನಡೆಯಲಿದ್ದು, ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶನಿವಾರವೇ ನೂತನ ಸಚಿವರ ಪ್ರಮಾಣವಚನ ನಡೆಯಲಿದ್ದು, ಎಲ್ಲಾ ಖಾತೆ ಭರ್ತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಸಿಎಂ ಆಯ್ಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ನಲ್ಲಿ ಸಚಿವ ಸಂಪುಟ ರಚನೆ ಕಸರತ್ತು ಮುಂದುವರೆದಿದ್ದು, ಮೇ 27 ರಂದು ರಾಜಭವನದಲ್ಲಿ 24 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮೇ 27 ರಂದು ಬೆಳಗ್ಗೆ 11:45 ಕ್ಕೆ 24 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಸರ್ಕಾರದ ಮನವಿ ಮೇರೆಗೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜ್ಯಪಾಲರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಶೀಘ್ರದಲ್ಲೇ ಕಾಂಗ್ರೆಸ್ 24 ಮಂದಿ ನೂತನ ಸಚಿವರ ಪಟ್ಟಿ ಬಿಡುಗಡೆ ಮಾಡಲಿದ್ದು, ದೆಹಲಿಯ ಜಿಆರ್ಜಿ ರಸ್ತೆಯ ಕಾಂಗ್ರೆಸ್ ವಾರ್ ರೂಮ್ನಲ್ಲಿ ನಡೆಯುತ್ತಿದ್ದ ಕರ್ನಾಟಕ ಸಚಿವ ಸಂಪುಟ ರಚನೆ ಬಗ್ಗೆ ಕಾಂಗ್ರೆಸ್ ನಾಯಕರು ನಡೆಸುತ್ತಿದ್ದ ಸಭೆ ಮುಕ್ತಾಯಗೊಂಡಿದೆ. ಸಚಿವರ ಪಟ್ಟಿ ಇನ್ನೂ ಅಂತಿಮವಾಗಿಲ್ಲ. ಆದರೆ ನೂತನ ಸತಿವರ ಪ್ರಮಾಣವಚನ ಸಮಾರಂಭಕ್ಕೆ ದಿನಾಂಕ ಮತ್ತು ಸಮಯ ನಿಗದಿಯಾಗಿದೆ. ಇಂದು 24 ನೂತನ ಸಚಿವರ ಪಟ್ಟಿ ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.
BIG NEWS : ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ : ರಾಜ್ಯದ ಜನತೆಗೆ ಮಾಜಿ ಸಿಎಂ ‘HDK’ ಕರೆ
BIG NEWS : ಯಾರೂ ವಿದ್ಯುತ್ ಬಿಲ್ ಕಟ್ಟಬೇಡಿ : ರಾಜ್ಯದ ಜನತೆಗೆ ಮಾಜಿ ಸಿಎಂ ‘HDK’ ಕರೆ