ನವದೆಹಲಿ: ದೇಶದ ಜನತೆಗಾಗಿ ಯಾವುದೇ ಉತ್ತಮ ಯೋಜನೆ, ನಿರ್ಧಾರಗಳನ್ನು ಪ್ರಧಾನಿಯಾಗಿ ಮೋದಿ ಕೈಗೊಳ್ಳಲಿಲ್ಲ. ಕೃಷಿ ಕಾನೂನು ಜಾರಿ ಮಾಡಿ, ರೈತರಿಗೆ ಅನ್ಯಾಯ ಮಾಡಿದ್ದಾರೆ. ಈಗ ಬೆಂಬಲ ಬೆಲೆ ಕಾನೂನು ಜಾರಿ ಮಾಡುತ್ತಿಲ್ಲ. ನಮ್ಮ ಮುಂದಿನ ನಡೆ ಈ ಮೋದಿಯನ್ನು ಮುಂಬರುವಂತ ಲೋಕಸಭಾ ಚುನಾವಣೆಯಲ್ಲಿ ಸೋಲಿಸುವುದೇ ಆಗಿದೆ ಎಂಬುದಾಗಿ ಸಾಮಾಜಿಕ ಹೋರಾಟಗಾರ ಎಸ್ಆರ್ ಹಿರೇಮಠ್ ತಿಳಿಸಿದ್ದಾರೆ.

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ನಿನ್ನೆ ರಾಮಲೀಲಾ ಮೈದಾನದಲ್ಲಿ ರೈತ ಪಂಚಾಯತ್ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ದೇಶದ ವಿವಿಧೆಡೆಗಳಿಂದ ರೈತ ಮುಖಂಡರು, ಸಂಘಟನೆಗಳ ನಾಯಕರು ಭಾಗಿಯಾಗಿದ್ದರು. ಈ ರೈತ ಪಂಚಾಯತ್ ಸಭೆಯಲ್ಲಿ ಮುಂಬರುವ ಚುನಾವಣೆಯಲ್ಲಿ ರೈತ ವಿರೋಧಿ ಪ್ರಧಾನಿ ಸರ್ಕಾರವನ್ನು ಸೋಲಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

2019ರಂತೇ ಈ ಬಾರಿಯೂ ಬಹುಮತದ ಸರ್ಕಾರ ಬರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅದೇ ರೀತಿ ವರ್ತಿಸುತ್ತಿದ್ದಾರೆ. ಆದ್ರೇ ರೈತ ವಿರೋಧಿ ನೀತಿ, ಕಾನೂನು ಮಾಡಿದಂತ ಕೇಂದ್ರದ ಬಿಜೆಪಿ ಸರ್ಕಾರವನ್ನು ಮುಂದಿನ ಚುನಾವಣೆಯಲ್ಲಿ ಸೋಲಿಸೋದಕ್ಕೆ ರೈತ ಮುಖಂಡರು ಸೇರಿ ನಿರ್ಧರಿಸಲಾಗಿದೆ. ಆ ನಿಟ್ಟಿನಲ್ಲಿ ಕ್ರಮವಹಿಸೋದಾಗಿ ತಿಳಿಸಿದರು.

BREAKING : ಭೂಪಾಲ್ ನ ‘ಟೆಂಟ್ ಹೌಸ್’ ಗೋದಾಮಿನಲ್ಲಿ ‘ಸಿಲಿಂಡರ್’ ಸ್ಫೋಟದಿಂದ ಭಾರಿ ಅಗ್ನಿ ಅವಘಡ

ಕೇಂದ್ರದ ‘ಅನುದಾನ’ ತಾರತಮ್ಯದಿಂದ ರಾಜ್ಯಕ್ಕೆ ‘ಆರ್ಥಿಕ ಸವಾಲು’ಗಳು ಎದುರಾಗಿವೆ : ಕೃಷ್ಣ ಭೈರೇಗೌಡ ಆಕ್ರೋಶ

Share.
Exit mobile version