ಬೆಂಗಳೂರು: ಮೋದಿ ನೋಟ್ ಬ್ಯಾನ್ ಮಾಡಿದ್ರು. ಕಪ್ಪು ಹಣ ನಿರ್ನಾಮ ಮಾಡ್ತೆವೆ ಅಂದ್ರು. ಭ್ರಷ್ಟಾಚಾರ ಕಡಿಮೆ ಆಗಿದೇಯಾ.? ಕಪ್ಪು ಹಣ ನಿಂತಿಲ್ಲ, ಕೇವಲ ಭಾಷಣ ಮಾತ್ರ ಮಾಡಿದ್ರು. ಕೋಟಾ‌ನೋಟು‌ ಮತ್ತು ಬ್ಲಾಕ್ ಮನಿ ಬಗ್ಗೆ ಮೋದಿ‌ಹೇಳಬೇಕು. ಅದ್ರೆ ಮೋದಿ ಇಲ್ಲಿಯವರೆಗೆ ಮಾತೇ ಆಡಿಲ್ಲ ಎಂಬುದಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ( Ex CM Siddaramaiah ) ಪ್ರಧಾನಿ ಮೋದಿ ( PM Modi ) ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.

ಇಂದು ವಿಧಾನಸೌಧದಲ್ಲಿ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ 8 ವರ್ಷ ಪೂರೈಸಿದ ಹಿನ್ನೆಲೆ, ಕೇಂದ್ರ ಸರ್ಕಾರದ ವಿರುದ್ಧ ವರುಷ ಎಂಟು ಅವಾಂತರ ನೂರೆಂಟು ಎಂಬ ಪುಸ್ತಕ ಬಿಡುಗಡೆಮಾಡಿದ ನಂತ್ರ ಮಾತನಾಡಿದಂತ ಅವರು, ನರೇಂದ್ರ ಮೋದಿ ದೇಶದ ಪ್ರಧಾನಿಯಾಗಿ 8 ವರ್ಷ ಕಳೆಯುತ್ತಿದೆ. ಇಡೀ ದೇಶದಲ್ಲಿ ಪ್ರಧಾನಿ ಮೋದಿ ತಮ್ಮ 8 ವರ್ಷ ಪೂರೈಸಿದ ಹಿನ್ನೆಲೆ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದಾರೆ. ಚುನಾವಣೆಗೂ ಮುನ್ನ ಮೋದಿ ಅವರು ಜನರಿಗೆ ಏನ ಭರವಸೆ ಕೊಟ್ಟಿದ್ರು..? ಜನರಿಗೆ ಕೊಟ್ಟ ಭರವಸೆ ಈಡೇರಿಸಿದೇವೆ ಎಂದು ದೊಡ್ಡ ದೊಡ್ಡ ಜಾಹೀರಾತು ಹಾಕಿದ್ದಾರೆ. ರಾಜ್ಯದಲ್ಲಿ ಕೂಡ ದೊಡ್ಡ ದೊಡ್ಡ ಜಾಹೀರಾತು ಹಾಕಿದ್ದಾರೆ. ಮೋದಿ ಅವ್ರು ಹೇಳಿದ್ದನೇನು ಮಾಡಿದ್ದೇನೆ..? ರೈತರು, ಜನಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದಾರೆ ಎಂದರು.

BREAKING NEWS: ಕೊಡಗು ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ಒಂದು ವಾರದಲ್ಲಿ 6 ಬಾರಿ ಭೂ ಕಂಪನ | Earth Quick

ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ಇಂತಹ ಸಮಯದಲ್ಲಿ ತಮ್ಮ ಸರ್ಕಾರದ 8 ವರ್ಷದ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದಾರೆ. ಇದೊಂದು ಸುಳ್ಳಿನ ಸಂಭ್ರಮಾಚರಣೆ ಅಷ್ಟೇ. ಎಂಟು ವರ್ಷದಲ್ಲಿ ಕೇಂದ್ರ ಸರ್ಕಾರದ ಸಾಧನೆ ಎಷ್ಟು ಅನ್ನೊದರ ಪುಸ್ತಕ ಬಿಡುಗಡೆ ಮಾಡುತಿದ್ದೆವೆ. ಹೈದರಾಬಾದ್ ನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಭೆ ಇದೆ. ಇದೇ ಸಮಯದಲ್ಲಿ ನಾವು ಈ ಪುಸ್ತಕ ಬಿಡುಗಡೆ ಮಾಡುತಿದ್ದೆವೆ ಎಂದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಕೊಡ್ತೇವೆ ಅಂದ್ರು. ಹತ್ತು ಕೋಟಿ ಉದ್ಯೋಗ ಸಣ್ಣ ಕೈಗಾರಿಕೆ ಹುಟ್ಟಿಹಾಕಿದ್ವು. ಮೋದಿ ನೋಟ್ ಬ್ಯಾನ ನಿಂದ ಎರಡು ಕೋಟಿ ಉದ್ಯೋಗಕ್ಕೆ ಬಂದಿವೆ. ಯುವಕರು ಕೆಲಸ ಕೇಳಿದ್ರೆ ಪಕೋಡಾ ಮಾರಿ ಅಂತಾರೆ. ಲಘುವಾಗಿ ಪ್ರಧಾನಿ ಮಾತನಾಡ್ತಾರೆ. ನಿರುದ್ಯೋಗ ಸಾಕಷ್ಟು ಸಮಸ್ಯೆಯಾಗಿದೆ. ಸರ್ಕಾರ ಕೂಡ ಉದ್ಯೋಗ ಕೊಡ್ತಾ ಇಲ್ಲ. ಸರ್ಕಾರದ ಸಂಸ್ಥೆಗಳನ್ನು ಖಾಸಗಿ ಮಾಡುತ್ತಿದ್ದಾರೆ. ಕೆಲವನ್ನು ಮಾರಿ ಬಿಟ್ಟಿದ್ದಾರೆ. ಇದರಿಂದ ಮೀಸಲಾತಿ ಕೂಡ ಹೋಗಿದೆ. ದಲಿತರಿಗೆ, ಯುವಕರಿಗೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ ಎಂಬುದಾಗಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

BIGG NEWS: ವಾಯುಸೇನೆಯಿಂದ ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ ನ್ಯೂಸ್‌; ಸಿವಿಲಿಯನ್‌ ಹುದ್ದೆಗೆ ಅರ್ಜಿ ಆಹ್ವಾನ|IAF Recruitment

500 &1000 ನೋಟ್ ಬ್ಯಾನ್ ಮಾಡಿದ್ರು ಪ್ರಧಾನಿ ಮೋದಿ. ಮಧ್ಯ ರಾತ್ರಿ 12 ಗಂಟೆಗೆ ಬಂದಿ ಭಾಷಣ ಮಾಡಿದ್ದೆ ಮಾಡುದ್ದು. ನೋಟ್ ಬ್ಯಾನ್ ನಿಂದ ಕಪ್ಪು ಹಣ ,ಭಯೋತ್ಪಾನೆ, ಭ್ರಷ್ಟಾಚಾರ ಕಡಿಮೆ ಆಗುತ್ತೆ ಅಂದಿದ್ರು ಪಿಎಂ ಮೋದಿ. ದೇಶದಲ್ಲಿ ಭಯೋತ್ಪಾದನೆ, ಭ್ರಷ್ಟಾಚಾರ, ಕಪ್ಪು ಹಣ ಕಡಿಮೆಯಾಗಿದೇನಾ..? ಇದರ ಬಗ್ಗೆ ಪ್ರಧಾನಿ ಮೋದಿ ಅವರು ಮಾತೇ ಆಡ್ತಿಲ್ಲ ಎಂದರು.

ತೈಲ‌ಬೆಲೆ ಹೆಚ್ಚಾಗಿ ಹಾಕಿ ಅಧಿಕ ಲಾಭ ಮಾಡಿದ್ದಾರೆ. 26 ಲಕ್ಷ ಕೋಟಿ ಹೆಚ್ಚಿನ ಆದಾಯ ಕೇಂದ್ರ ಸರ್ಕಾರಕ್ಕೆ‌ ಬಂದಿದೆ. ಸಿಲಿಂಡರ್ ಸಬ್ಸಿಡಿ ಕೂಡ ನಿಲ್ಲಿಸಿದ್ರು. ತೈಲ ಬೆಲೆ ಏರಿಕೆ ಆದ್ರೆ ಎಲ್ಲ ವಸ್ತುಗಳ ಬೆಲೆ ಏರಕೆ ಆಯ್ತು. ಸಾರಿಗೆ, ಕಚ್ಚಾ ವಸ್ತುಗಳ, ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಮೋದಿ ಜಾಹಿರಾತು ಕೊಟ್ಟಿದ್ದಾರೆ. ಕರ್ನಾಟಕ ಕ್ಕೆ 1 ಲಕ್ಷ 29 ಸಾವಿರದ 766 ಕೋಟಿ ವಿವಿಧ ಯೋಜನೆ ಕಟ್ಟಿದ್ದೇವೆ. ಹೀಗಂತ ಜಾಹಿರಾತು ಕೊಟ್ಟಿದ್ದಾರೆ. ಕರ್ನಾಟಕದಿಂದ ತೆರಿಗೆ 19 ಲಕ್ಷ ಕೋಟಿ ಸಂಗ್ರಹ ಆಗಿದೆ. ಕೇವಲ ಒಂದು ಲಕ್ಷ ಕೋಟಿ ವಾಪಸ್ಸು ‌ಕೊಟ್ಟಿದ್ದಾರೆ. ನಾಲ್ಕು ಲಕ್ಷ ಕೋಟಿ ಮಾತ್ರ ನಮಗೆ ವಾಪಸ್ಸು ಬಂದಿದೆ ಎಂದರು.

ಕಳೆದ ವರ್ಷ ಕರ್ನಾಟಕದಲ್ಲಿ 3 ಲಕ್ಷ ಕೋಟಿ ತೆರಿಗೆ ಸಂಗ್ರಹ ಆಗಿದೆ. 19 ಲಕ್ಷ ಕೋಟಿಯಲ್ಲಿ ನಮಗೆ ಎಂಟು ಲಕ್ಷ ಕೋಟಿ ಬರಬೇಕು. ಕೇವಲ ಅರ್ಧ ಹಣ ಮಾತ್ರ‌ಕೊಟ್ಟಿದ್ದಾರೆ. ನಮ್ಮ ಹಣ ನಮಗೆ ಕೊಟ್ಟಿದ್ದಾರೆ. ಇದಕ್ಕೆ ದೊಡ್ಡ ಜಾಹಿರಾತು ಕೊಟ್ಟಿದ್ದಾರೆ. ನಮ್ಮ ಹಣ ನಮಗೆ ಕೊಟ್ಟು ಜಾಹಿರಾತು ನೀಡಿದ್ದಾರೆ. 14 ರಿಂದ 15 ಪೈನಾನ್ಸ ಕಮಿಷನ್‌ ನಲ್ಲಿ ಹಣದಲ್ಲಿ‌ ನಮ್ಮ ಪಾಲು ಕಡಿಮೆ ಆಗಿದೆ. ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಆಗಿದೆ ಎಂದು ಹೇಳಿದರು.

5495 ಕೋಟಿ ವಿಶೇಷ ಅನುಧಾನ ಕೊಡ್ತೆವೆ ಅಂದ್ರು. ಆದ್ರೆ ನಿರ್ಮಲಾ ಸೀತಾರಾನ್ ಹಣ ಕೊಡಿಸಲ್ಲಿ. ನಿರ್ಮಲಾ ರಾಜ್ಯಕ್ಕೆ ಅನ್ಯಾಯ ‌ಮಾಡಿದ್ದಾರೆ. 25 ಸಂಸದರು ಇದ್ರೂ ಸಂಸತ್ತಿನಲ್ಲಿ ಮಾತನಾಡಲಿಲ್ಲ. ಪ್ರಧಾನಿ ಮುಂದೆ ಅನ್ಯಾಯ ಹೇಳಲಿಲ್ಲ. ಬಿಜೆಪಿ ಸಂಸದರು ಮತ್ತು ಸಚಿವರ ವಿರುದ್ಧ ಸಿದ್ದರಾಮಯ್ಯ ಗರಂ ಆದ್ರು.

ಮೋದಿ ಕಾಲದಲ್ಲಿ ಸಾಲ ಸುನಾಮಿಯಂತೆ ಬೆಳದಿದೆ. ಸ್ವತಂತ್ರ ಬಂದಾಗಿನಿಂದ ಇದ್ದ ಒಟ್ಟು ಸಾಲವನ್ನು ಎಂಟು ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿಸಿದ್ದಾರೆ. 102 ಲಕ್ಷ ಕೋಟಿ‌ ಮೋದಿ ಸಾಲ ಮಾಡಿದ್ದಾರೆ. ಒಬ್ಬರ ಮೇಲೆ ಸಾಲ 1 ಲಕ್ಷ 70 ಸಾವಿರ ಆಗುತ್ತದೆ. ಎಲ್ಲರ ಮೇಲೆ ಮೋದಿ ಸಾಲ ಹೇರಿದ್ದಾರೆ. ಕರ್ನಾಟಕದಲ್ಲಿ ಸ್ವತಂತ್ರದಿಂದ 42 ಸಾವಿರ ಕೋಟಿ ಇತ್ತು. ಈ ವರ್ಷ ಐದು ಲಕ್ಷ ಕೋಟಿ ಆಗಿದೆ. ನಾಲ್ಕು ವರ್ಷದಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕುವ ರೀತಿ ಮಾಡಿದ್ದಾರೆ. ಇದು ಮೋದಿ‌ ಕೆಟ್ಟ ಆರ್ಥಿಕ ನೀತಿಯಿಂದ ಆಗಿದೆ. ಆರ್ಥಿಕ ನಿರ್ವಹಣೆಯಲ್ಲಿ ಮೋದಿ ವಿಫಲ ಅಂತ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದರು.

Share.
Exit mobile version