ಸುಭಾಷಿತ :

Wednesday, January 22 , 2020 12:12 PM

ನಿಮ್ಮ ‘ಮೊಬೈಲ್ ಪದೇ ಪದೇ ಹ್ಯಾಂಗ್’ ಆಗ್ತಾ ಇದ್ಯಾ.? ಹೀಗೆ ಮಾಡಿದ್ರೇ ‘ಖಂಡಿತಾ ಸರಿ’ಯಾಗುತ್ತದೆ.!


Tuesday, August 6th, 2019 3:47 pm


ಸ್ಪಷಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಮೊಬೈಲ್ ಕೆಲ ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೇ ಕೆಲಸ ಮಾಡಿ, ಆನಂತ್ರ ಪದೇ ಪದೇ ಹ್ಯಾಂಗ್ ಆಗುವಂತ ಸಮಸ್ಯೆಯನ್ನು ತಂದು ಬಿಡುತ್ತದೆ. ಈ ಮೂಲಕ ಅಯ್ಯೋ ನನ್ನ ಪೋನ್ ಒಂದು ಆಪ್ ಓಪನ್ ಮಾಡಿದರೇ, ಒಂದು ಹತ್ತು, ಹದಿನೈದು ಸೆಕೆಂಡ್ ನಂತ್ರ ತೆರೆದುಕೊಳ್ಳುವಂತಾಗುತ್ತದೆ ಎಂದು ಗೋಳಾಡುತ್ತೇವೆ. ಇಂತಹ ನಿಮ್ಮ ಮೊಬೈಲ್ ಪದೇ ಪದೇ ಹ್ಯಾಂಗ್ ಆಗ್ತಾ ಇದ್ದರೇ ಪರಿಹಾರಕ್ಕೆ ಈ ಕೆಳಗಿನ ವಿಧಾನವನ್ನು ಅನುಸರಿಸಿದರೇ, ಖಂಡಿತವಾಗಿ ಮೊಬೈಲ್ ಹ್ಯಾಂಗ್ ಆಗೋದು ಕಡಿಮೆ ಆಗುತ್ತದೆ.

ವಿಧಾನ.1
ಮೊಬೈಲ್ ಹ್ಯಾಂಗ್ ಆಗೋಕೆ ಮುಖ್ಯ ಕಾರಣ, ನಿಮ್ಮ ಮೊಬೈಲ್ ನಲ್ಲಿ ಅನಗತ್ಯವಾಗಿ ಸ್ಟೋರ್ ಆಗುತ್ತಾ ಹೋಗುವ ಮೆಮೊರಿ. ಇದರ ಜೊತೆಗೆ ನೀವು ಇನ್ ಸ್ಟಾಲ್ ಮಾಡಿಕೊಳ್ಳುತ್ತಾ ಹೋಗುವ ಆಪ್ ಗಳು ಕೂಡ ಕಾರಣವಾಗುತ್ತವೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ, ಮೊದಲನೆಯ ವಿಧಾನವಾಗಿ, ನಿಮ್ಮ ಮೊಬೈಲ್ ನಲ್ಲಿ ಮೊದಲು ಸೆಟ್ಟಿಂಗ್ಸ್ ಓಪನ್ ಮಾಡಿ. ನೀವು ಸೆಟ್ಟಿಂಗ್ ನಲ್ಲಿ ಹಾಗೇ ನೋಡುತ್ತಾ ಹೋದಹಾಗೇ ಸ್ಟೋರೇಜ್ ಎನ್ನುವ ಮತ್ತೊಂದು ಸೆಟ್ಟಿಂಗ್ ಕಾಣುತ್ತದೆ.

ಇಂತಹ ಸ್ಟೋರೇಜ್ ಓಪನ್ ಮಾಡಿದರೇ ನಿಮಗೆ Cached data ಎನ್ನುವ ಮತ್ತೊಂದು ಸೆಟ್ಟಿಂಗ್ ನಿಮಗೆ ಕಂಡು ಬರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದರೇ, ನಿಮ್ಮ ಎಲ್ಲಾ ಆಪ್ ಗಳ Cached data ಕ್ಲಿಯರ್ ಮಾಡ್ಲಾ ಎಂದು ಕೇಳುತ್ತದೆ. ಆಗ ಒಕೆ ಕೊಟ್ಟು ಬಿಡಿ. ನಿಮ್ಮ ತಾತ್ಕಾಲಿಕ ಮೆಮೊರಿ ಡಾಡಾ ಕ್ಲಿಯರ್ ಆಗುವ ಮೂಲಕ ನಿಮ್ಮ ಮೊಬೈಲ್ ನಲ್ಲಿ ಒಂದಷ್ಟು ಮೆಮೊರಿ ಪುಲ್ ಆಗಿದ್ದು ಖಾಲಿ ಆಗುತ್ತದೆ. ಈ ಮೂಲಕ ನಿಮ್ಮ ಮೊಬೈಲ್ ಹ್ಯಾಂಗಿಂಗ್ ತೊಂದರೆ ಕೊಂಚ ನಿವಾರಣೆ ಆಗುತ್ತದೆ.

ವಿಧಾನ 2
ಇನ್ನೂ ನೀವು ತಾತ್ಕಾಲಿಕ ಮೆಮೊರಿ ಖಾಲಿ ಮಾಡಿದ ನಂತ್ರ, ನೀವು ವಾಟ್ಸ್ ಆಪ್ ನಿಂದ ಭರ್ತಿಯಾದ ಮೆಮೊರಿ ಖಾಲಿ ಮಾಡುವ ಮೂಲಕ, ಮತ್ತಷ್ಟು ಹ್ಯಾಂಗಿಂಗ್ ಸಮಸ್ಯೆ ಬಗೆ ಹರಿಸಿಕೊಳ್ಳಬಹುದು. ಇದಕ್ಕಾಗಿ ನೀವು ನಿಮ್ಮ ಮೊಬೈಲ್ ನ ಫೈಲ್ ಮ್ಯಾನೇಜರ್ ಗೆ ಅಥವಾ ಫೈಲ್ ಎಕ್ಸ್ ಪ್ಲೋರರ್ ಓಪನ್ ಮಾಡಿ. ಫೈಲ್ ಮ್ಯಾನೇಜರ್ ನ ಕೊನೆಗೆ ಸ್ಕ್ರೋಲ್ ಮಾಡಿಕೊಂಡು ಬನ್ನಿ. ನಿಮಗೆ ಕೊನೆಯಲ್ಲಿ ವಾಟ್ಸ್ ಆಪ್ ಎನ್ನುವಂತ ಪೋಲ್ಡರ್ ಒಂದು ಕಾಣ ಸಿಗುತ್ತದೆ. ಆ ಪೋಲ್ಡರ್ ಓಪನ್ ಮಾಡಿ.

ನೀವು ಹೀಗೆ ವಾಟ್ಸ್ ಆಪ್ ಎನ್ನುವ ಪೋಲ್ಡರ್ ಓಪನ್ ಮಾಡಿದ ತಕ್ಷಣ ಮೊದಲು ಸಿಗುವುದೇ ಬ್ಯಾಕ್ ಅಪ್ ಎನ್ನುವಂತ ಪೋಲ್ಡರ್. ಆ ಪೋಲ್ಡರ್ ನಲ್ಲಿ ನಿಮ್ಮ ದೈನಂದಿನ ಎಲ್ಲಾ ಮೆಸೇಜ್, ವೀಡಿಯೋ, ಡಾಕ್ಯುಮೆಂಟ್ ಹಾಗೂ ಚಾಟ್ ಎಲ್ಲಾ ಬ್ಯಾಕಪ್ ಆಗಿ, ಒಂದು ಫೈಲ್ ಕ್ರಿಯೇಟ್ ಆಗಿರುತ್ತದೆ. ಇಂತಹ ಫೈಲ್ ಗಳನ್ನು ಒಟ್ಟಾಗಿ ಸೆಲೆಕ್ಟ್ ಮಾಡಿ, ಡಿಲಿಟ್ ಮಾಡಿಬಿಡಿ. ಆಗ ನಿಮ್ಮ ಮೊಬೈಲ್ ಪುಲ್ ಆದ ಮೆಮೊರಿ ಮತ್ತಷ್ಟ ಖಾಲಿ, ಹ್ಯಾಂಗ್ ಆಗೋದು ಕಡಿಮೆ ಆಗುತ್ತದೆ.

ವಿಧಾನ 3
ಹೀಗೆ ನಿಮ್ಮ ಮತ್ತಷ್ಟು ಪೋನ್ ಮೆಮೊರಿ ಖಾಲಿ ಆದ ನಂತ್ರ, ಇನ್ನೂ ಮತ್ತಷ್ಟು ಮೆಮೊರಿ ಪ್ರೀ ಮಾಡಲು, ಮತ್ತೆ ಬ್ಯಾಕಪ್ ಪೋಲ್ಡರ್ ನಲ್ಲಿ ಎಲ್ಲಾ ಡಿಲಿಟ್ ಆದ ನಂತ್ರ, ವಾಟ್ಸ್ ಆಪ್, ಪೋಲ್ಡರ್ ಗೆ ಹೊರಗೆ ಬನ್ನಿ. ತದನಂತ್ರ ನಿಮಗೆ ಬ್ಯಾಕಪ್ ಪೋಲ್ಡರ್ ಕೆಳಗೆ ಮತ್ತೊಂದು ಪೋಲ್ಡರ್ ಕಾಣ ಸಿಗುತ್ತದೆ. ಅದೇ ಡಾಟಬೇಸಸ್ ಎನ್ನುವಂತ ಪೋಲ್ಡರ್.
ನಿಮಗೆ ಕಾಣುವ ಡಾಟಬೇಸಸ್ ಪೋಲ್ಡರ್ ಓಪನ್ ಮಾಡಿ. ಅದರಲ್ಲಿಯೂ ನಿಮ್ಮ ಎಲ್ಲಾ ಡಾಟ ಪ್ರತಿನಿತ್ಯ ಎಕ್ಸ್ ಪೋರ್ಟ್ ಆಗಿರುವಂತ ಡಾಕುಮೆಂಟ್ ಗಳು ಕಾಣಿಸುತ್ತವೆ. ಅವುಗಳನ್ನೆಲ್ಲಾ ಒಮ್ಮಲೆ ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿ ಬಿಡಿ. ಆಗ ನಿಮ್ಮ ಮೊಬೈಲ್ ನ ಮೆಮೊರಿ ಮತ್ತಷ್ಟು ಖಾಲಿಯಾಗಿ ಉಳಿಯುತ್ತದೆ. ಈ ಮೂಲಕ ಹ್ಯಾಂಗಿಂಗ್ ಪ್ರಾಬ್ಲಂ ಕಡಿಮೆ ಆಗುತ್ತದೆ.

ವಿಧಾನ 4
ಈ ಎಲ್ಲಾ ವಿಧಾನದ ಮೂಲಕ ಒಂದಷ್ಟು ನಿಮ್ಮ ಮೊಬೈಲ್ ಮೆಮೊರಿ ಖಾಲಿ ಉಳಿದು, ಮತ್ತಷ್ಟು ಪ್ರೀ ಮಾಡಬೇಕು ಅಂದ್ರೇ, ಮತ್ತೆ ವಾಟ್ಸ್ ಆಫ್ ಪೋಲ್ಡರ್ ಗೆ ಹೊರ ಬನ್ನಿ. ನಿಮಗೆ ಬ್ಯಾಕಪ್, ಡಾಟಬೇಸಿಸ್ ಆನಂತ್ರ ಮೀಡಿಯಾ ಎನ್ನುವಂತ ಪೋಲ್ಡರ್ ಕಾಣ ಸಿಗುತ್ತದೆ. ಆ ಪೋಲ್ಡರ್ ಓಪನ್ ಮಾಡಿದರೇ, ನಿಮ್ಮ ಎಲ್ಲಾ ವೀಡಿಯೋ, ಪೋಟೋ, ವಾಲ್ ಪೇಪರ್ ಸೇರಿದಂತೆ ಒಂದೊಂದೇ ಪ್ರತ್ಯೇಕ ಪೋಲ್ಡರ್ ಗಳು ಇರುತ್ತವೆ.

ಇಂತಹ ಪೋಲ್ಡರ್ ನಲ್ಲಿ ಅನಗತ್ಯವಾಗಿ ಸೇವ್ ಆದಂತ ಪೋಟೋ, ವೀಡಿಯೋಗಳಿರುತ್ತವೆ. ಅವುಗಳನ್ನು ಆಯ್ಕೆ ಮಾಡಿಕೊಂಡು ಡಿಲಿಟ್ ಮಾಡುತ್ತಾ ಹೋಗಿ. ಆಗ ತಾನಾಗಿಯೇ ನಿಮ್ಮ ಮೊಬೈಲ್ ನ ಮೆಮೊರಿ ಮತ್ತಷ್ಟು ಖಾಲಿ ಉಳಿಯುತ್ತದೆ. ಇದಲ್ಲದೇ ಇದೇ ಪೋಲ್ಡರ್ ನಲ್ಲಿ ಅನಗತ್ಯವಾಗಿ ಸ್ಟೋರ್ ಆಗಿರುವಂತ ವಾಟ್ಸ್ ಅಪ್ ವಾಯ್ಸ್ ನೋಟ್ಸ್ ಎನ್ನುವಂತ ಪೋಲ್ಡರ್ ಇರುತ್ತದೆ ಅದನ್ನು ಓಪನ್ ಮಾಡಿ, ಅಲ್ಲಿರುವ ಎಲ್ಲಾ ವಾಯ್ಸ್ ನೋಟ್ಸ್ ಡಿಲಿಟ್ ಮಾಡಿದರೇ, ನಿಮ್ಮ ಮೊಬೈನಲ್ಲಿ ಮತ್ತಷ್ಟು ಮೆಮೊರಿ ಖಾಲಿಯಾಗಿ ಉಳಿಯುತ್ತದೆ. ಈ ಮೂಲಕ ಮೊಬೈಲ್ ಹ್ಯಾಂಗ್ ಆಗುವುದು ತಪ್ಪುತ್ತದೆ.

ವಿಧಾನ 5
ಇವು ನಿಮ್ಮ ಮೊಬೈಲ್ ನ ಮೆಮೊರಿ ಪುಲ್ ಆಗಿದ್ದನ್ನು ಖಾಲಿ ಮಾಡುವ ಜೊತೆಗೆ, ನಿಮ್ಮ ಮೊಬೈಲ್ ಫಾಸ್ಟ್ ಆಗಿ ಕೆಲಸ ಮಾಡಲು ಒಂದಷ್ಟು ಸ್ಥಳಾವಕಾಶವನ್ನು ಮೊಬೈಲ್ ಗೆ ಒದಗಿಸಿಕೊಡಲು ಅವಕಾಶ ಆಗುತ್ತದೆ. ಇದಲ್ಲದೇ ನೀವು ಇನ್ ಸ್ಟಾಲ್ ಮಾಡಿಕೊಳ್ಳುವ ಆಪ್ ಕೂಡ, ನಿಮ್ಮ ಮೊಬೈಲ್ ಹ್ಯಾಂಗ್ ಆಗಲು ಕಾರಣವಾಗುತ್ತದೆ. ಅಲ್ಲದೇ ಆಪ್ ಗಳು ಪದೇ ಪದೇ ಹೊಸ ಹೊಸ ಪ್ರೀಚರ್ ಗೆ ಅಪ್ ಡೇಟ್ ಆಗುವ ಮೂಲಕ ನಿಮ್ಮ ಮೊಬೈಲ್ ನ ಮೆಮೊರಿಯನ್ನು ಆವರಿಸಿ ಬಿಡುತ್ತವೆ.

ಈ ಹಿನ್ನಲೆಯಲ್ಲಿ ಮೊದಲು ಗೂಗಲ್ ಪ್ಲೇ ಸ್ಟೋರ್ ಓಪನ್ ಮಾಡಿ. ಆನಂತ್ರ ಅಲ್ಲಿ ಕಾಣ ಸಿಗುವ ಸೆಟ್ಟಿಂಗ್ ನಲ್ಲಿ ಆಟೋ ಅಪ್ ಡೇಟ್ ಕೊಟ್ಟಿದ್ದರೇ ತೆಗೆದು ಬಿಡಿ. ನಿಮ್ಮ ಮೊಬೈಲ್ ನಲ್ಲಿ ಬಳಸುವ ಆಪ್ ಗೆ ತೀರಾ ಅಗತ್ಯವಿದ್ದರೇ ಓಪ್ ಮಾಡಿದಾಗ ಅಪ್ ಡೇಟ್ ಕೇಳುತ್ತದೆ. ಆಗ ಕೊಟ್ಟರೇ ನಿಮ್ಮ ಮೊಬೈಲ್ ನಲ್ಲಿ ಮೆಮೊರಿ ತುಂಬಿಕೊಂಡು ಹ್ಯಾಂಗ್ ಆಗುವುದೂ ತಪ್ಪುತ್ತದೆ.

ಹೀಗೆ ಈ ಎಲ್ಲಾ ಸರಳ ವಿಧಾನವನ್ನು ಬಳಸಿ, ನಿಮ್ಮ ಮೊಬೈಲ್ ನಲ್ಲಿ ತುಂಬಿರುವಂತ ಡಾಟಾ ಸ್ಟೋರೇಜ್ ಅನ್ನು ಡಿಲಿಟ್ ಮಾಡುವ ಮೂಲಕ, ಪೋನ್ ಪದೇ ಪದೇ ಹ್ಯಾಂಗ್ ಆಗುವುದನ್ನು ತಪ್ಪಿಸಬಹುದು. ಈ ಮೂಲಕ ನಿಮ್ಮ ಸ್ಮಾರ್ಟ್ ಪೋನ್ ಹ್ಯಾಂಗ್ ಆಗದೇ ಫಾಸ್ಟ್ ಆಗಿ ಕೆಲಸ ಮಾಡುವಂತೆ ಮಾಡಬಹುದಾಗಿದೆ.

ಬರಹ – ವಸಂತ ಬಿ ಈಶ್ವರಗೆರೆ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions