ಶಿವಮೊಗ್ಗ: ಮಾಜಿ ಎಂಎಲ್ ಸಿ, ಬಿಜೆಪಿ ಮುಖಂಡ ಭಾನು ಪ್ರಕಾಶ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೇಳೆಯಲ್ಲಿ ಹೃದಯಾಘಾತ ಉಂಟಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ದಾಖಲಿಸೋ ಮುನ್ನ ಮಾಜಿ ಎಂಎಲ್ಸಿ ಭಾನುಪ್ರಕಾಶ್ ನಿಧನರಾದರು. ಅವರ ನಿಧನಕ್ಕೆ ಸುದ್ದಿ ಸಹ್ಯಾದ್ರಿ ಸಂಪಾದಕ ರಾಘವೇಂದ್ರ ತಾಳಗುಪ್ಪ ಸಂತಾಪ ಸೂಚಿಸಿದ್ದಾರೆ.

ಮತ್ತೊಂದೆ ಈ ಬಗ್ಗೆ ಮಾತನಾಡಿದಂತ ಚಾರ್ವಕ ಸಂಪಾದಕ ರಾಘವೇಂದ್ರ ಅವರು ಇವರು ಶಿವಮೊಗ್ಗ ಜಿಲ್ಲೆಯಲ್ಲಿ ಧರ್ಮ ಧರ್ಮದ ನಡುವೆ ಕೋಮು ದ್ವೇಷವನ್ನು ಬಿತ್ಯಿದವರು. ಹಲವು ಕೋಮು ಗಲಭೆಗೆ ಕಾರಣಾದವರು. ಇದರಿಂದ ಅಮಾಯಕ್ಲರನ್ನು ಜೈಲಿಗೆ ಹೋಗುವಂತೆ ಮಾಡಿದವರು ಅಂತ ಹೇಳಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಮೀಪದ ಮತ್ತೂರು ಗ್ರಾಮದಲ್ಲಿ ಸಂಸದ ಗ್ರಾಮ ಮಾಡಿಕೊಂಡವರು. ಕರ್ನಾಟಕದಲ್ಲಿ ಹುಟ್ಟಿ, ಕನ್ನಡವನ್ನೇ ಒಪ್ದವರು ಆಗಿದ್ದರು. ದುಡಿಯುವ ಜನರಿಗೆ ಅರ್ಥವಾಗದ ಸಂಸ್ಕೃತವನ್ನು ತಮ್ಮ ಗ್ರಾಮಕ್ಕೆ ಇಟ್ಟುಕೊಂಡವರು ಅಂತ ತಿಳಿಸಿದ್ದಾರೆ.

ಇವರು ಇಂದು ನಿಧನರಾಗಿದ್ದಾರೆ‌. ಅವರ ನಿಧನದ ವಿಷಯ ಗೊತ್ತಾದ ತಕ್ಷಣ ಅವರೇ ನಂಬಿದ ದೇವರೇ ಕೊಟ್ಟಿದ್ದು. ಅವರಿಗೆ ಅವರೇ ನಂಬಿದ ದೇವರು ಪುನರ್ಜನ್ಮ ಕೊಟ್ಟರೇ ಜಾತ್ಯಾತೀತ ವ್ಯಕ್ತಿ ಆಗಿ ಬದುಕಲಿ ಅಂತ ಅಶಿಸಿದರು.

Share.
Exit mobile version