ದಾವಣಗೆರೆ: ರಾಜ್ಯದಲ್ಲಿ ಸಚಿವ ಸ್ಥಾನಕ್ಕಾಗಿ ಸಂಪುಟ ವಿಸ್ತರಣೆ ( Cabinet Expansion ) ಗರಿಗೆದರಿದೆ. ಇದರ ಬೆನ್ನಲ್ಲೇ ಸಚಿವಸ್ಥಾನದ ಆಕಾಂಕ್ಷಿಗಳು ತೆರೆ ಮರೆಯಲ್ಲಿ ಕೆಲವರು ಕಸರತ್ತು ನಡೆಸ್ತಾ ಇದ್ದರೇ, ಮತ್ತೆ ಕೆಲವರು ನೇರವಾಗೇ ಸಿಡಿದೆದ್ದಿದ್ದಾರೆ. ನನಗೇನು ಸಚಿವನಾಗೋ ಅರ್ಹತೆ ಇಲ್ಲವಾ.? ಎಂಬುದಾಗಿ ಸಚಿವಸ್ಥಾನಕ್ಕಾಗಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ( MLA MP Renukacharya ) ಸಿಡಿದೆದ್ದಿದ್ದಾರೆ.
‘ಮಗನ ಸಾವಿನ ಸುದ್ದಿ’ ಕೇಳಿ ತಾಯಿಯೂ ನಿಧನ: ಸಾವಿನಲ್ಲೂ ಒಂದಾದ ‘ತಾಯಿ-ಮಗ’
ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಹೊನ್ನಾಳ್ಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಬಿಜೆಪಿ ಸರ್ಕಾರ ಅಸ್ಥತ್ವಕ್ಕೆ ಬರೋದಕ್ಕೆ ನಾನು ಮತ್ತು ಬಸವನಗೌಡ ಪಾಟೀಲ್ ಯತ್ನಾಳ್ ಪ್ರಯತ್ನಿಸಿದ್ದೇವೆ. ಮೈತ್ರಿ ಸರ್ಕಾರದ ಪತನದ ಹಿಂದೆ ನಮ್ಮ ಪ್ರಯತ್ನ ಕೂಡ ಇದೆ ಎಂದಿದ್ದಾರೆ.
ಶಾಸಕರಾಗಿ ನಾವು ಸಚಿವರಿಗೆ ಪೋನ್ ಮಾಡಿದ್ರೇ ಪೋನ್ ಪಿಕ್ ಮಾಡೋದಿಲ್ಲ. ಯಾವುದಾದರೂ ಕೆಲಸ ಮಾಡಿಕೊಡಿ ಅಂತ ಲೆಟರ್ ಕೊಟ್ಟರೇ ಕ್ಯಾರೆ ಎನ್ನದಂತ ಪರಿಸ್ಥಿತಿ ಇದೆ. ಹೀಗೆ ನಡೆದುಕೊಳ್ಳುವಂತ ಸಚಿವರ ಅವಶ್ಯಕತೆ ಏನಿದೆ. ಇವರೆಲ್ಲಾ ಸಂಪುಟದಲ್ಲಿ ಇರಬೇಕಾ ಅಂತ ಕಿಡಿಕಾರಿದರು.
ವ್ಯಕ್ತಿ ಶವವನ್ನು ಸುತ್ತುವರಿದ 124 ಹಾವುಗಳು… ಆತನ ಸಾವಿಗೆ ಪುರಾವೆಗಳು ಸಿಗದೇ ಪೊಲೀಸರೇ ಕಂಗಾಲು!
ಶಾಸಕನಾಗಿ ಸಚಿವನಾಗೋದಕ್ಕೆ ನನಗೆ ಅರ್ಹತೆ ಇಲ್ಲವಾ.? ಖಾಲಿ ಇರುವಂತ ಸಚಿವ ಸ್ಥಾನವನ್ನು ಭರ್ತಿ ಮಾಡೋದಾದರೇ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ ಎಂದು ಬಹಿರಂಗವಾಗಿಯೇ ಸಚಿವಸ್ಥಾನಕ್ಕಾಗಿ ಬೇಡಿಕೆಯನ್ನು ಇಟ್ಟಿದ್ದಾರೆ.