ಚಿಕ್ಕಮಗಳೂರು : ನಗರದಲ್ಲಿ ದತ್ತಜಯಂತಿ ಹಿನ್ನೆಲೆ ಜಿಲ್ಲೆಯ  ನಾರಾಯಣಪುರ, ರಾಘವೇಂದ್ರ ಮಠದ ರಸ್ತೆ ಬಸವನಹಳ್ಳಿ ಮುಖ್ಯ ರಸ್ತೆಯ ಮನೆ ಮನೆಗೆ ತೆರಳಿ ಶಾಸಕ ಸಿ.ಟಿ.ರವಿ ಭಿಕ್ಷಾಟನೆ ಮಾಡುತ್ತಿದ್ದಾರೆ.

ಇಂದಿನ ರಾಶಿ ಭವಿಷ್ಯ ನೋಡಿ (7 ಡಿಸೆಂಬರ್ 2022) ಬುಧವಾರ

ಪಡಿ ಸಂಗ್ರಹಕ್ಕೆ ಮನೆಗೆ ಬಂದ ದತ್ತಮಾಲಾಧಾರಿಗಳಿಗೆ ಸಾರ್ವಜನಿಕರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವಿಳ್ಯೆದೆಲೆ ಅಡಿಕೆ -ಬೆಲ್ಲ ನೀಡಿ ಸ್ವಾಗತಿಸಿದರು. ಬುಧವಾರ ಮನೆಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿಗಳು ಗುರುವಾಋ ಇರುಮುಡಿ ರೂಪದಲ್ಲಿ ಅದನ್ನ ದತ್ತಪೀಠಕ್ಕೆ ಕೊಂಡೊಯ್ದು ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ.

ಇಂದಿನ ರಾಶಿ ಭವಿಷ್ಯ ನೋಡಿ (7 ಡಿಸೆಂಬರ್ 2022) ಬುಧವಾರ

20ಕ್ಕೂ ಹೆಚ್ಚು ಮಾಲಾಧಾರಿಗಳ ಜೊತೆಗೆ ಶಾಸಕ ಸಿ.ಟಿ. ರವಿ ಪಡಿ ಸಂಗ್ರಹ ಮಾಡಿದರು. ಬುಧವರಾ ಮಧ್ಯಾಹ್ನ ನಗರದಲ್ಲಿ 30 ಸಾವಿರಕ್ಕೂ ಅಧಿಕ ದತ್ತ ಭಕ್ತರಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ.

ಇಂದಿನ ರಾಶಿ ಭವಿಷ್ಯ ನೋಡಿ (7 ಡಿಸೆಂಬರ್ 2022) ಬುಧವಾರ

ಹಾಗಾಗಿ, ಮುಂಜಾಗೃತ ಕ್ರಮವಾಗಿ ಶೋಭಾಯಾತ್ರೆ ತೆರಳುವ ಮಾರ್ಗದಲ್ಲಿ ಪಾರ್ಕಿಂಗ್ ಕ್ಯಾನ್ಸಲ್ ಮಾಡಿದ್ದು, ಬೆಳಗ್ಗೆಯಿಂದಲೂ ಪೊಲೀಸರು ಕಾವಲಿದ್ದು, ಖಾಕಿ ಪಡೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.

Share.
Exit mobile version