ಔಷಧೀಯ ಗುಣವುಳ್ಳ ಪುದೀನಾದಿಂದ ಚರ್ಮದ ಅರೋಗ್ಯ ಕಾಪಾಡಿ.. – Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada languageBeauty Tips India Lifestyle

ಔಷಧೀಯ ಗುಣವುಳ್ಳ ಪುದೀನಾದಿಂದ ಚರ್ಮದ ಅರೋಗ್ಯ ಕಾಪಾಡಿ..

ಗಾಢವಾದ ಸುವಾಸನೆ ಮತ್ತು ರುಚಿಯಿಂದ ಪುದಿನಾ ಭಾರತ ಮಾತ್ರವಲ್ಲ ಏಷ್ಯಾ ಖಂಡದ ಎಲ್ಲಾ ಆಹಾರಗಳ ಪ್ರಮುಖ ಅಂಗವಾಗಿ ಮಾರ್ಪಟ್ಟಿದೆ. ಇದು ಒಂದು ರೀತಿ ಗಿಡಮೂಲಿಕೆ ಔಷಧವಾಗಿದ್ದು, ಚರ್ಮದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬಹುತೇಕ ಮಾಯೆಶ್ಚರೈಸರ್, ಕ್ಲೀನ್ಸರ್, ಕಂಡೀಶನರ್, ಶಾಂಪೂ, ಲಿಪ್ ಬಾಮ್‌ಗಳಲ್ಲಿ ಪುದಿನಾ ಇದ್ದೇ ಇರುತ್ತದೆ. ಬಹುತೇಕ ಮೊಡವೆಗಳಿಗೆ ಅತ್ಯುತ್ತಮ ನಿವಾರಕ ಔಷಧವಾಗಿ ಕೆಲಸ ಮಾಡುತ್ತದೆ.

ಮೃದು ತ್ವಚೆ
ಉರಿಶಮನದ ಗುಣಕ್ಕೆ ಪುದಿನಾ ಹೆಸರುವಾಸಿಯಾಗಿದೆ. ಕೀಟ ಕಡಿತವಾದ ಜಾಗ ಅಥವಾ ಅಲರ್ಜಿಯಾದ ದೇಹದ ಭಾಗಕ್ಕೆ ಒಂದಿಷ್ಟು ಪುದಿನಾ ಸೊಪ್ಪವನ್ನು ಜಜ್ಜಿ ರಸವನ್ನು ಹಚ್ಚಿ. ಇದರ ಜ್ಯೂಸ್ ಒಣ ಮತ್ತು ಒಡಕು ಚರ್ಮಕ್ಕೆ ರಾಮಬಾಣ.

ಕ್ಲೀನ್ಸಿಂಗ್ ಸ್ಕ್ರಬ್
ಪುದಿನಾ ಸೊಪ್ಪನ್ನು ಶುಚಿಕಾರಕವಾಗಿಯೂ ಬಳಸಬಹುದು. ಕೆಲವು ಚಮಚ ಓಟ್ಸ್ ಮತ್ತು ಮಿಂಟ್ ಜ್ಯೂಸ್‌ನ್ನು ಮಿಶ್ರಣ ಮಾಡಿ ಚರ್ಮಕ್ಕೆ ಹಚ್ಚಿ. ಇದು ಸತ್ತ ಚರ್ಮಕೋಶಗಳನ್ನು ನಿವಾರಿಸಿ, ನೀರಿನ ಅಂಶ ಚರ್ಮಕ್ಕೆ ಸಿಗುವಂತೆ ಮಾಡುತ್ತದೆ. ತೆಳುವಾದ ಮೊಡವೆ ಕಲೆಗಳನ್ನು ಕೂಡ ಇದರಿಂದ ನಿವಾರಿಸಿಕೊಳ್ಳಬಹುದು.

ಪಾದಗಳಿಗೆ ಮೃದುತ್ವ
ಒಂದು ಪಾತ್ರೆಯಲ್ಲಿ ನೀರು ಹಾಕಿ ಒಂದಿಷ್ಟು ಪುದಿನಾ ಎಲೆಯನ್ನು ಅದಕ್ಕೆ ಹಾಕಿ ಬೇಯಿಸಿ. ಬಳಿಕ ಆ ನೀರನ್ನು ಬಕೆಟ್‌ನಲ್ಲಿ ಹಾಕಿ ಸಾಕಷ್ಟು ತಣ್ಣೀರು ಸೇರಿಸಿ ಅದರಲ್ಲಿ ಪಾದಗಳನ್ನಿಡಿ. ಇದರಿಂದ ಪಾದಗಳ ಒಡಕು ಗುಣವಾಗುವುದರ ಜೊತೆಗೆ ಕಾಲಿನ ವಾಸನೆಯ ನಿವಾರಣೆ ಮಾಡಿ ಪಾದವನ್ನು ಮೃದುವಾಗಿ ಮಾಡುತ್ತದೆ. ಜೊತೆಗೆ ಬೇಯಿಸಿದ ಪುದಿನಾ ಎಲೆಯ ಸುವಾಸನೆ ಮನಸ್ಸನ್ನು ಶಾಂತಗೊಳಿಸುತ್ತದೆ.

ಮೊಡವೆ ನಿವಾರಣೆ
ಪನ್ನೀರಿನೊಂದಿಗೆ ಪುದಿನಾ ಎಲೆಯನ್ನು ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ ಸುಮಾರು 20 ನಿಮಿಷ ಹಾಗೆ ಬಿಡಿ. ಇದರಲ್ಲಿ ಸಾಲಿಸಿಲಿಕ್ ಆಮ್ಲ ಇದ್ದು, ಇದು ಮೊಡವೆ ನಿವಾರಣೆಗೆ ನೆರವು ನೀಡುತ್ತದೆ.
ಹಿತ್ತಲ ಮದ್ದು ಆಗಿರುವ ಪುದಿನಾ ಅಡುಗೆಗೆ ರುಚಿ ನೀಡಿದರೆ, ಅದನ್ನು ಬೇರೆ ರೀತಿಯಲ್ಲಿ ಬಳಸುವುದರಿಂದ ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.error: ಕದಿಯೋದು ಬಿಟ್ಟು ಸ್ವಂತವಾಗಿ ಬರೆಯೋದು ಕಲಿಯಿರಿ