ಮೈಸೂರು: ದಸರಾ ಮಹೋತ್ಸವ ( Mysuru Dasara Mahotsav 2022 ) ಸಂಬಂಧ ಬಿಡುಗಡೆ ಮಾಡಲಾಗುತ್ತಿದ್ದಂತ ಪಾಸ್ ಗೋಲ್ಮಾನ್ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮವನ್ನು ಕೈಗೊಳ್ಳಲಾಗಿದೆ. ಇದೇ ಮೊದಲ ಬಾರಿದೆ ಗೋಲ್ಡ್ ಪಾಸ್ ( Gold Pass ) ಸಹಿತ ಎಲ್ಲಾ ಮಾದರಿಯ ಪಾಸ್ ಗಳನ್ನು ರದ್ದು ಮಾಡಲಾಗಿದೆ ಎಂಬುದಾಗಿ ಸಚಿವ ಎಸ್ ಟಿ ಸೋಮಶೇಖರ್ ( Minister ST Somashekhar ) ಘೋಷಣೆ ಮಾಡಿದ್ದಾರೆ.

BREAKING NEWS: ನೆಲಮಂಗಲ ಬಳಿಯಲ್ಲಿ ಕಾರು ಪಲ್ಟಿ: ಓರ್ವ ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ

ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದಂತ ಅವರು, ಈ ಬಾರಿ ದಸರಾ ಗೋಲ್ಡ್ ಪಾಸ್ ಇಲ್ಲ. ಗಣ್ಯರು, ವಿದೇಶಿಗರಿಗೆ ಹೆಚ್ಚಾಗಿ ಅವಲಂಬಿತವಾದ ಗೋಲ್ಡ್ ಪಾಸ್ ರದ್ದು ಪಡಿಸಲಾಗಿದೆ. ಆದರೆ ಜನರ ಒತ್ತಡ ಕಡಿಮೆ ಮಾಡುವ ಸಲುವಾಗಿ ಗೋಲ್ಡ್ ಪಾಸ್ ರದ್ದು ಮಾಡಲಾಗಿದೆ ಎಂದರು.

BREAKING NEWS: ಉಪ ರಾಷ್ಟ್ರಪತಿ ಚುನಾವಣೆ: ಮತದಾನ ಮುಕ್ತಾಯ, ಶೀಘ್ರದಲ್ಲೇ ಮತ ಎಣಿಕೆ ಆರಂಭ | Vice-Presidential election

ಇನ್ನೂ ವಿವಿಐಪಿ ಪಾಸ್ ಹೊರತುಪಡಿಸಿ ಉಳಿದ ಪಾಸ್‌ಗಳನ್ನು ರದ್ದು ಮಾಡಲು ಚಿಂತನೆ ನಡೆಸಲಾಗಿದೆ. ಪಾಸ್‌ಗಳ ವಿಚಾರವಾಗಿ ಕೆಲವೇ ದಿನಗಳಲ್ಲಿ ಸ್ಪಷ್ಟವಾದ ತೀರ್ಮಾನಕ್ಕೆ ಬರುತ್ತೇವೆ. ಪಾಸ್‌ಗಳಿಂದ ಗೋಲ್ಮಾಲ್ ಉಂಟಾಗುವ ಆರೋಪಗಳಿವೆ. ಅಂತಹ ಘಟನೆಗಳಿಗೆ ಈ ಬಾರಿ ಅವಕಾಶ ಇಲ್ಲ ಎಂದರು.

ಕಾಮನ್‌ವೆಲ್ತ್ ಗೇಮ್ಸ್ 2022 : ಮಹಿಳೆಯರ 10000 ಮೀಟರ್ ರೇಸ್ ವಾಕ್ ಫೈನಲ್ನಲ್ಲಿ ʻಬೆಳ್ಳಿ ಪದಕʼ ಗೆದ್ದ ʼಪ್ರಿಯಾಂಕಾ ಗೋಸ್ವಾಮಿ ʼ | Priyanka Goswami

ಪಾಸಿನ ವಿಸ್ತೃತವಾದ ಚರ್ಚೆ ನಡೆಯುತ್ತಿದೆ. ವಿವಿಐಪಿ, ಕರ್ತವ್ಯ ನಿರತ ಸಿಬ್ಬಂದಿ ಪಾಸ್ ಬಿಟ್ಟು ಎಲ್ಲಾ ಪಾಸ್ ರದ್ದು ಮಾಡಲಾಗಿದೆ ಎಂಬುದಾಗಿ ಹೇಳಿದರು. ಈ ಮೂಲಕ ಈ ಬಾರಿಯ ದಸರಾ ಮಹೋತ್ಸವದಲ್ಲಿ ಗೋಲ್ಡ್ ಪಾಸ್ ಸಹಿತ ಎಲ್ಲಾ ಪಾಸ್ ರದ್ದು ಮಾಡಲಾಗಿದೆ ಎಂಬುದಾಗಿ ಘೋಷಣೆ ಮಾಡಿದರು.

Share.
Exit mobile version