ಜಾತಿ ಜನಗಣತಿ ವರದಿ ಜಾರಿಗೆ ನಮ್ಮ ಸರ್ಕಾರ ಬದ್ಧ – ಸಚಿವ ಈಶ್ವರಪ್ಪ – Kannada News Now


State

ಜಾತಿ ಜನಗಣತಿ ವರದಿ ಜಾರಿಗೆ ನಮ್ಮ ಸರ್ಕಾರ ಬದ್ಧ – ಸಚಿವ ಈಶ್ವರಪ್ಪ

ಬೆಂಗಳೂರು : ಜಾತಿ ಜನಗಣತಿ ವರದಿ ಜಾರಿಗೆ ಕೆಲವರು ಅಡ್ಡ ಬರಬಹುದು. ಆದ್ರೇ ನಮ್ಮ ಸರ್ಕಾರ ವರದಿ ಜಾರಿಗೆ ಬದ್ಧಾಗಿದೆ. ಯಾವುದೇ ಅಡ್ಡಿಗಳನ್ನು ನಮ್ಮ ಸರ್ಕಾರ ಪರಿಗಣಿಸಲ್ಲ. ಪಕ್ಷ ಬೇಧ ಮರೆತು ವರದಿ ಜಾರಿಗೆ ಶ್ರಮಿಸೋಣ ಎಂಬುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತಾದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಜಾತಿ ಜನಗಣತಿ ವರದಿ ಜಾರಿಗೆ ಬರಬೇಕಿತ್ತು. ಆದ್ರೆ ಸಿದ್ದರಾಮಯ್ಯ ಅವಧಿಯಲ್ಲಿ ಜಾರಿಗೆ ಬರಲಿಲ್ಲ. ಅದರ ಬಗ್ಗೆ ನಾನೇನೂ ಮಾತಾಡಲ್ಲ ಎಂದರು.

ಮುಂದುವರೆದು ಸಮ್ಮಿಶ್ರ ಸರ್ಕಾರದಲ್ಲೂ ಜಾತಿ ಜನಗಣತಿ ವರದಿ ಜಾರಿಗೆ ಬರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗ ಶೆಟ್ಟಿ ಅವರು ವರದಿ ಜಾರಿಗೆ ಅವಕಾಶ ಕೊಡಲಿಲ್ಲ. ಈಗ ನಮ್ಮ‌ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಜಾತಿ ಜನಗಣತಿ ವರದಿ ಸ್ವೀಕರಿಸದಿದ್ರೆ ಬೀದಿಳಿದು ಹೋರಾಟ ಮಾಡ್ತೇನೆ ಅಂತಾ ಈಗ ಸಿದ್ದರಾಮಯ್ಯ ಅವರು ಹೇಳ್ತಿದ್ದಾರೆ. ಆದ್ರೆ ನಮ್ಮ‌ಸರ್ಕಾರ ಈ ವಿಚಾರದಲ್ಲಿ  ಹೋರಾಟಕ್ಕೆ ಅವಕಾಶ ಕೊಡಲ್ಲ. ವರದಿ ಜಾರಿಗೆ ನಾವೆಲ್ಲ ಒತ್ತಾಯ ಹಾಕೋಣ. ಸಚಿವ ರಾಮುಲು ಅವರು ಪರಿಷತ್ ನಲ್ಲಿ ವರದಿ ಒಪ್ಪಿಕೊಳ್ಳುವ ಭರವಸೆ ಕೊಟ್ಟಿದ್ದಾರೆ. ವರದಿ ಜಾರಿಗೆ ನಮ್ಮ ಸರ್ಕಾರ ಎಲ್ಲ ಪ್ರಯತ್ನ ಮಾಡಲಿದೆ. ಜಾತಿ ಜನಗಣತಿ ವರದಿ ಜಾರಿಗೆ ಕೆಲವರು ಅಡ್ಡ ಬರಬಹುದು. ಆದ್ರೆ ನಮ್ಮ ಸರ್ಕಾರ ವರದಿ ಜಾರಿಗೆ ಬದ್ಧ ಎಂದು ತಿಳಿಸಿದರು.
error: Content is protected !!