ಚಾಮರಾಜನಗರ: ಮಂತ್ರಾಕ್ಷತೆ ಅಯೋಧ್ಯೆಯಿಂದ ಬಂದಿಲ್ಲ. ಈ ನನ್ಮಕ್ಕಳೇ ಇಲ್ಲೇ ಅಕ್ಕಿಗೆ ಅರಿಶಿಣ ಹಚ್ಚಿ ಹಂಚಿದ್ದಾರೆ ಎಂಬುದಾಗಿ ಸಚಿವ ಕೆ.ವೆಂಕಟೇಶ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಚಾಮರಾಜನಗರದ ಹನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಬಿಜೆಪಿಯವರು ಅನ್ನಭಾಗ್ಯದ ಅಕ್ಕಿಗೆ ಅರಿಶಿಣ ಮಿಕ್ಸ್ ಮಾಡಿ, ಅಯೋಧ್ಯೆಯಿಂದ ಮಂತ್ರಾಕ್ಷತೆ ಬಂದಿದ್ದು ಅಂತ ಸುಳ್ಳು ಹೇಳಿದ್ದಾರೆ. ಈ ನನ್ಮಕ್ಕಳೇ ರಾಮಮಂದಿರದಿಂದ ಮಂತ್ರಾಕ್ಷತೆ ಬಂದಿರೋದು ಅಂತ ಮನೆ ಮನೆಗೆ ಹೋಗಿ ಹಂಚಿದ್ದಾರೆ ಎಂಬುದಾಗಿ ವಾಗ್ಧಾಳಿ ನಡೆಸಿದರು.

ಬಿಜೆಪಿಯವರು ಮಾತು ಎತ್ತಿದ್ರೇ ಸಾಕು ರಾಮ ಮಂದಿರ ಅಂತ ಹೇಳ್ತಾರೆ. ಯಾಕೆ ಅಯೋಧ್ಯೆಯಲ್ಲಿ ಮಾತ್ರವೇ ರಾಮಮಂದಿರ ಇರೋದು? ಎಲ್ಲಾ ಊರಿನಲ್ಲಿ ರಾಮಮಂದಿರ ಇದ್ದಾರೆ. ನಮ್ಮ ಊರಿನಲ್ಲೂ ಇದೆ ಎಂದರು.

ಬಿಜೆಪಿಯವರು ಭಾವನಾತ್ಮಕ ವಿಚಾರ ಇಟ್ಕೊಂಡು ರಾಜಕೀಯ ಮಾಡ್ತಿದ್ದಾರೆ. 400 ಸ್ಥಾನ ಗೆಲ್ಲುವ ಹಿಂದಿನ ಅಜೆಂಡಾ ಸಂವಿಧಾನ ಬದಲಾವಣೆಯಾಗಿದೆ ಎಂಬುದಾಗಿ ಸಚಿವ ಕೆ.ವೆಂಕಟೇಶ್ ಕಿಡಿಕಾರಿದರು.

ಭಾರತದ ಹೊಸ ಫೈಟರ್ ಜೆಟ್ ‘ತೇಜಸ್ MK-1A’ ಮೊದಲ ಹಾರಾಟ ಯಶಸ್ವಿ : ಹಿಂದಿನ ವಿಮಾನಕ್ಕಿಂತ ಹೆಚ್ಚು ಸುಧಾರಿತ, ಮಾರಕ

ಕರ್ನಾಟಕವು ಅತ್ಯಂತ ದುರ್ದೈವದ ಪರಿಸ್ಥಿತಿಯಲ್ಲಿದೆ- ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್

Share.
Exit mobile version