ಬೆಂಗಳೂರು: ಅಧಿಕಾರವಿದ್ದಾಗ ಪಂಚತಾರಾ ಹೋಟೆಲ್ ನಲ್ಲಿ ಕಾಲಹರಣ ಮಾಡಿ ಈಗ ಚುನಾವಣೆ ಹೊಸ್ತಿಲಲ್ಲಿ ಪಂಚರತ್ನ ಎಂಬ ಗಾಳಿ ಗೋಪುರ ಕಟ್ಟಿ ಜನರನ್ನ ಮರಳು ಮಾಡಲು ಹೊರಟಿರುವ ಪಕ್ಷ ನನ್ನ ಕಾರ್ಯವೈಖರಿ ಬಗ್ಗೆ ಲಘುವಾಗಿ ಮಾತನಾಡುತ್ತಿರುವುದು ವಿಪರ್ಯಾಸ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಸಚಿವ ಸುಧಾಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರವಿದ್ದಾಗ ಪಂಚತಾರಾ ಹೋಟೆಲ್ ನಲ್ಲಿ ಕಾಲಹರಣ ಮಾಡಿ ಈಗ ಚುನಾವಣೆ ಹೊಸ್ತಿಲಲ್ಲಿ ಪಂಚರತ್ನ ಎಂಬ ಗಾಳಿ ಗೋಪುರ ಕಟ್ಟಿ ಜನರನ್ನ ಮರಳು ಮಾಡಲು ಹೊರಟಿರುವ ಪಕ್ಷ ನನ್ನ ಕಾರ್ಯವೈಖರಿ ಬಗ್ಗೆ ಲಘುವಾಗಿ ಮಾತನಾಡುತ್ತಿರುವುದು ವಿಪರ್ಯಾಸ.
— Dr Sudhakar K (@mla_sudhakar) February 7, 2023
ಈ ಕುರಿತಂತೆ ಸರಣಿ ಟ್ವಿಟ್ ಮಾಡಿರುವಂತ ಅವರು, ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿರುವ ಕಂಪನಿ ಬಗ್ಗೆ ಪರ್ಫಾರ್ಮೆನ್ಸ್ ಆಡಿಟ್ ಕಮಿಟಿ ಆಕ್ಷೇಪ ಎತ್ತಿರುವುದರಿಂದ ಅವರ ಬಿಲ್ ಪಾವತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು, ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.
ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಿರುವ ಕಂಪನಿ ಬಗ್ಗೆ ಪರ್ಫಾರ್ಮೆನ್ಸ್ ಆಡಿಟ್ ಕಮಿಟಿ ಆಕ್ಷೇಪ ಎತ್ತಿರುವುದರಿಂದ ಅವರ ಬಿಲ್ ಪಾವತಿಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದ್ದು, ಸೇವೆಗಳಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.
2/9 pic.twitter.com/kEUdQzS7l6
— Dr Sudhakar K (@mla_sudhakar) February 7, 2023
ಪ್ರತಿದಿನ ಸಾವಿರಾರು ಜನ ಚಿಕಿತ್ಸೆ ಅರಿಸಿ ಬರುವ ವಿಕ್ಟೋರಿಯಾ ಆಸ್ಪತ್ರೆ ಬಡವರ ಪಾಲಿಗೆ ಸಂಜೀವಿನಿಯಾಗಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂನ್ಯತೆಗಳೇ ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಅಲ್ಲಿರುವ ಕುಂದುಕೊರತೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪ್ರತಿದಿನ ಸಾವಿರಾರು ಜನ ಚಿಕಿತ್ಸೆ ಅರಿಸಿ ಬರುವ ವಿಕ್ಟೋರಿಯಾ ಆಸ್ಪತ್ರೆ ಬಡವರ ಪಾಲಿಗೆ ಸಂಜೀವಿನಿಯಾಗಿದೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನ್ಯೂನ್ಯತೆಗಳೇ ಇಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಅಲ್ಲಿರುವ ಕುಂದುಕೊರತೆಗಳನ್ನು ಪರಿಹರಿಸಲು ನಮ್ಮ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ.
3/9
— Dr Sudhakar K (@mla_sudhakar) February 7, 2023
ಹೊರರೋಗಿಗಳಿಗೆ ಅನುಕೂಲವಾಗುವಂತೆ ಎಲ್ಲ ವಿಭಾಗಳನ್ನು ಒಂದೇ ಸೂರಿನಡಿ ತರಲು 7 ಅಂತಸ್ತಿನ ಒಪಿಡಿ ಕಟ್ಟಡ ನಿರ್ಮಿಸಲಾಗಿದೆ. ರೋಗಿಗಳ ಸಂಬಂಧಿಗಳಿಗೆ ತಂಗಲು ವಿಶ್ರಾಂತಿ ಧಾಮ, ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಪ್ರತ್ಯೇಕ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಹೊರರೋಗಿಗಳಿಗೆ ಅನುಕೂಲವಾಗುವಂತೆ ಎಲ್ಲ ವಿಭಾಗಳನ್ನು ಒಂದೇ ಸೂರಿನಡಿ ತರಲು 7 ಅಂತಸ್ತಿನ ಒಪಿಡಿ ಕಟ್ಟಡ ನಿರ್ಮಿಸಲಾಗಿದೆ.
ರೋಗಿಗಳ ಸಂಬಂಧಿಗಳಿಗೆ ತಂಗಲು ವಿಶ್ರಾಂತಿ ಧಾಮ, ಸಾರ್ವಜನಿಕರಿಗೆ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಪ್ರತ್ಯೇಕ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
4/9
— Dr Sudhakar K (@mla_sudhakar) February 7, 2023
MPB, C ಬ್ಲಾಕ್ ಕಟ್ಟಡಗಳ ಎಲ್ಲ ವಾರ್ಡ್ ಗಳಲ್ಲಿ ಫೌಲರ್/ ಸೆಮಿ ಫೌಲರ್ ಬೆಡ್ ವ್ಯವಸ್ಥೆ ಮಾಡಲಾಗಿದ್ದು, 45 ಐಸಿಯು ಬೆಡ್ ಸ್ಥಾಪಿಸಲಾಗಿದೆ. ಆಪರೇಶನ್ ಥೀಯೇಟರ್ ಗಳನ್ನ ಸಹ ನವೀಕರಿಸಲಾಗಿದ್ದು ವೈದ್ಯರಿಗೆ ಪ್ರತ್ಯೇಕ ಕೊಠಡಿ, ಆರ್ಥ್ರೋಸ್ಕೋಪಿ, Hyperbaric Oxygen Therapy ಸೇರಿದಂತೆ ಅನೇಕ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
MPB, C ಬ್ಲಾಕ್ ಕಟ್ಟಡಗಳ ಎಲ್ಲ ವಾರ್ಡ್ ಗಳಲ್ಲಿ ಫೌಲರ್/ ಸೆಮಿ ಫೌಲರ್ ಬೆಡ್ ವ್ಯವಸ್ಥೆ ಮಾಡಲಾಗಿದ್ದು, 45 ಐಸಿಯು ಬೆಡ್ ಸ್ಥಾಪಿಸಲಾಗಿದೆ.
ಆಪರೇಶನ್ ಥೀಯೇಟರ್ ಗಳನ್ನ ಸಹ ನವೀಕರಿಸಲಾಗಿದ್ದು ವೈದ್ಯರಿಗೆ ಪ್ರತ್ಯೇಕ ಕೊಠಡಿ, ಆರ್ಥ್ರೋಸ್ಕೋಪಿ, Hyperbaric Oxygen Therapy ಸೇರಿದಂತೆ ಅನೇಕ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ.
5/9
— Dr Sudhakar K (@mla_sudhakar) February 7, 2023
100 ಆಸನ ವ್ಯವಸ್ಥೆಯುಳ್ಳ ಆಡಿಟೋರಿಯಂ, ಉತ್ತಮ ರಸ್ತೆ ಹಾಗೂ ಡ್ರೈನೇಜ್ ವ್ಯವಸ್ಥೆ, ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಕರ್ತವ್ಯ ಕೊಠಡಿ, ರೋಗಿಗಳನ್ನು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸಾಗಿಸಲು ಎಲೆಕ್ಟ್ರಿಕ್ ವಾಹನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.
100 ಆಸನ ವ್ಯವಸ್ಥೆಯುಳ್ಳ ಆಡಿಟೋರಿಯಂ, ಉತ್ತಮ ರಸ್ತೆ ಹಾಗೂ ಡ್ರೈನೇಜ್ ವ್ಯವಸ್ಥೆ, ವೈದ್ಯರು, ಸಿಬ್ಬಂದಿ, ವಿದ್ಯಾರ್ಥಿಗಳಿಗೆ ಕರ್ತವ್ಯ ಕೊಠಡಿ, ರೋಗಿಗಳನ್ನು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸಾಗಿಸಲು ಎಲೆಕ್ಟ್ರಿಕ್ ವಾಹನ ಸೌಲಭ್ಯ ಕಲ್ಪಿಸಲಾಗಿದೆ.
6/9
— Dr Sudhakar K (@mla_sudhakar) February 7, 2023
ಕೊರೋನಾ ಬಿಕ್ಕಟ್ಟಿನಲ್ಲಿ designated ಆಸ್ಪತ್ರೆಯಾಗಿ 10,000ಕ್ಕೂ ಹೆಚ್ಚು ಸೊಂಕಿತರಿಗೆ ಚಿಕಿತ್ಸೆ ನೀಡಿರುವ ವಿಕ್ಟೋರಿಯಾ ಆಸ್ಪತ್ರೆ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿದೆ. ಎರಡು ವರ್ಷಗಳು ಸತತವಾಗಿ ವಿಕ್ಟೋರಿಯಾ ಆಸ್ಪತ್ರೆ ‘ಕಾಯಕಲ್ಪ ‘ ಪ್ರಶಸ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದ್ದಾರೆ.
ಕೊರೋನಾ ಬಿಕ್ಕಟ್ಟಿನಲ್ಲಿ designated ಆಸ್ಪತ್ರೆಯಾಗಿ 10,000ಕ್ಕೂ ಹೆಚ್ಚು ಸೊಂಕಿತರಿಗೆ ಚಿಕಿತ್ಸೆ ನೀಡಿರುವ ವಿಕ್ಟೋರಿಯಾ ಆಸ್ಪತ್ರೆ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿದೆ.
ಎರಡು ವರ್ಷಗಳು ಸತತವಾಗಿ ವಿಕ್ಟೋರಿಯಾ ಆಸ್ಪತ್ರೆ 'ಕಾಯಕಲ್ಪ ' ಪ್ರಶಸ್ತಿಗೆ ಪಾತ್ರವಾಗಿದೆ.
7/9
— Dr Sudhakar K (@mla_sudhakar) February 7, 2023
1000 ಬೆಡ್ ಗಳ ವಾರ್ಡ್, ಸಂಜೀವಿನಿ ಟೆಲಿ ಚಿಕಿತ್ಸಾ ಕೇಂದ್ರ, ಮಾಡ್ಯುಲಾರ್ ಓಟಿ, ಮಾಡ್ಯುಲಾರ್ ನರ್ಸಿಂಗ್ ಸ್ಟೇಶನ್, ರೋಗಿಗಳ ದಾಖಲೆ ಸೇರಿದಂತೆ ಸಂಪೂರ್ಣ ಡಿಜಿಟಲೀಕರಣ ಹೀಗೆ ಅನೇಕ ಯೋಜನೆಗಳು ಭವಿಷ್ಯದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಇನ್ನಷ್ಟು ಉತ್ತಮಗೊಳಿಸಲಿದೆ ಎಂದಿದ್ದಾರೆ.
1000 ಬೆಡ್ ಗಳ ವಾರ್ಡ್, ಸಂಜೀವಿನಿ ಟೆಲಿ ಚಿಕಿತ್ಸಾ ಕೇಂದ್ರ, ಮಾಡ್ಯುಲಾರ್ ಓಟಿ, ಮಾಡ್ಯುಲಾರ್ ನರ್ಸಿಂಗ್ ಸ್ಟೇಶನ್, ರೋಗಿಗಳ ದಾಖಲೆ ಸೇರಿದಂತೆ ಸಂಪೂರ್ಣ ಡಿಜಿಟಲೀಕರಣ ಹೀಗೆ ಅನೇಕ ಯೋಜನೆಗಳು ಭವಿಷ್ಯದಲ್ಲಿ ವಿಕ್ಟೋರಿಯಾ ಆಸ್ಪತ್ರೆಯನ್ನು ಇನ್ನಷ್ಟು ಉತ್ತಮಗೊಳಿಸಲಿದೆ.
8/9
— Dr Sudhakar K (@mla_sudhakar) February 7, 2023
ವ್ಯವಸ್ಥೆಯಲ್ಲಿರುವ ಸಣ್ಣಪುಟ್ಟ ಲೋಪದೋಷಗಳನ್ನೇ ದೊಡ್ಡದಾಗಿ ಬಿಂಬಿಸಿ, ದಿನನಿತ್ಯ ನೂರಾರು ಬಡ ಜನರ ಜೀವ ಉಳಿಸುವ, ಸಾವಿರಾರು ಜನರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ನಕಾರಾತ್ಮಕವಾಗಿ ಚಿತ್ರಿಸುವ ಮೂಲಕ ಆಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ಸಿಬ್ಬಂದಿಗಳ ಮನೋಬಲ ಕುಗ್ಗಿಸುವ ಪಾಪದ ಕೆಲಸ ಮಾಡಬೇಡಿ ಎಂದು ಕಿಡಿಕಾರಿದ್ದಾರೆ.
ವ್ಯವಸ್ಥೆಯಲ್ಲಿರುವ ಸಣ್ಣಪುಟ್ಟ ಲೋಪದೋಷಗಳನ್ನೇ ದೊಡ್ಡದಾಗಿ ಬಿಂಬಿಸಿ, ದಿನನಿತ್ಯ ನೂರಾರು ಬಡ ಜನರ ಜೀವ ಉಳಿಸುವ, ಸಾವಿರಾರು ಜನರಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ನಕಾರಾತ್ಮಕವಾಗಿ ಚಿತ್ರಿಸುವ ಮೂಲಕ ಆಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರು, ಸಿಬ್ಬಂದಿಗಳ ಮನೋಬಲ ಕುಗ್ಗಿಸುವ ಪಾಪದ ಕೆಲಸ ಮಾಡಬೇಡಿ.
9/9
— Dr Sudhakar K (@mla_sudhakar) February 7, 2023