ಬೆಂಗಳೂರು: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ( Minister Dr K Sudhakar ) ನೇತೃತ್ವದಲ್ಲಿ ಆರೋಗ್ಯ ಇಲಾಖೆಯ ( Health Department ) ಗುತ್ತಿಗೆ, ಹೊರಗುತ್ತಿಗೆ ನೌಕರರ ಸಂಘದೊಂದಿಗೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಶ್ರೀನಿವಾಸಾಚಾರಿ ನೇತೃತ್ವದ ಸಮಿತಿಯ ನೀಡಿರುವಂತ ಕೆಲ ಶಿಫಾರಸ್ಸುಗಳನ್ನು ಜಾರಿಗೊಳಿಸೋದಕ್ಕಾಗಿ ಸಚಿವರು ಒಪ್ಪಿಗೆ ಸೂಚಿಸಿರೋದಾಗಿ ತಿಳಿದು ಬಂದಿದೆ. ಈ ಮೂಲಕ ಸದ್ಯದಲ್ಲಿಯೇ ಆರೋಗ್ಯ ಇಲಾಖೆಯ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಸಿಹಿಸುದ್ದಿ ದೊರೆಯಲಿದೆ.
ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದೊಯ್ಯುತ್ತಿದ್ದ ‘ಟೆಂಪೋ ಟ್ರಾವೆಲ್’ ಪಲ್ಟಿ: 30ಕ್ಕೂ ಹೆಚ್ಚು ಮಕ್ಕಳಿಗೆ ಗಾಯ
ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಲು ದಿನಾಂಕ 14.0 2.2022 ರಿಂದ ದಿನಾಂಕ 24.02.2022 ರವರಿಗೆ ಕಪ್ಪು ಪಟ್ಟಿ ಮುಷ್ಕರ (ಒಟ್ಟು 11 ದಿನಗಳ) ಮಾಡಿದ್ದು. ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ (KSHCOEA) ಸಂಘದ ಪದಾಧಿಕಾರಿಗಳೊಂದಿಗೆ ಇಂದು ದಿ. 24.02.2022 ಕರೆದ ಸಚಿವರೊಂದಿಗಿನ ಸಭೆಯಲ್ಲಿ ಮಾನ್ಯ ಆರೋಗ್ಯ ಸಚಿವರು “ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ” ಗ್ರೀನ್ ಸಿಗ್ನಲ್ ನೀಡಿದರು, ಈ ಕೆಳಗೆ ನಮೂದಿಸಿದ ಪ್ರಮುಖ ಬೇಡಿಕೆಗಳ ವಿಷಯವಾಗಿ ನಡೆದ ಸುಧೀರ್ಘ ಚರ್ಚೆಯು ಯಶಸ್ವಿಯಾಗಿದೆ. ಆದರೆ ಬೇಡಿಕೆಗಳು ಈಡೇರಿದ ಬಗ್ಗೆ ಆದೇಶದ ರೂಪದಲ್ಲಿ ಅಥವಾ ಪೂರಕ ದಾಖಲಾತಿಯಾಗಿ ಕೈ ಸೇರುವವರೆಗೆ ೧೫ ದಿನಗಳ ವರೆಗೆ ತಾತ್ಕಾಲಿಕವಾಗಿ ಸಾಂಕೇತಿಕ ಕಪ್ಪು ಪಟ್ಟಿ ಧರಣಿಗೆ ವಿರಾಮ ನೀಡಲಾಗಿದೆ ಒಂದು ವೇಳೆ ಅನುಷ್ಠಾನದಲ್ಲಿ ವಿಳಂಬವಾದಲ್ಲಿ ಅನಿವಾರ್ಯವಾಗಿ ನೌಕರರ ಹಿತಕಾಪಾಡಲು ಧರಣಿ ಮುಷ್ಕರ ಮಾಡಲು ಸಂಘವು ಹಿಂಜರಿಯುವುದಿಲ್ಲ ಎಂದು ಸಂಘದ ಅಧ್ಯಕ್ಷರಾದ ವಿಶ್ವಾರಾಧ್ಯ ಯಮೋಜಿ ತಿಳಿಸಿದ್ದಾರೆ.
ಮಾನ್ಯ ಅಭಿಯಾನ ನಿರ್ದೇಶಕರು ಸಭೆಗೆ ಎಲ್ಲರಿಗೆ ಸ್ವಾಗತಿಸಿದರು ಹಾಗೂ ಕೆಳಗಿನ ಅಂಶಗಳ ಮೇಲೆ ಬೆಳಕು ಚೆಲ್ಲಿ ಮುಕ್ತವಾಗಿ ಚರ್ಚೆಯು ಮಾನ್ಯ ಆರೋಗ್ಯ ಸಚಿವರು ರವರ ಅದ್ಯಕ್ಷತೆಯಲ್ಲಿ ನಡೆಯಿತು, ಮಾನ್ಯ ಶಾಸಕರು ಹಾಘೂ ಸಂಘದ ಗೌರವಾದ್ಯಕ್ಷರಾದ ಶ್ರೀ ಆಯನೂರ ಮಂಜುನಾಥರವರು ಸವಿವರವಾಗಿ ಈ ಕೆಳಗಿನ ಬಿಂದುಗಳ ಮೇಲೆ ನೌಕರರ ಪರವಾಗಿ ವಾದ ಮಂಡನೆ ನಡೆಸಿದರು.
1. ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಚಾರಿ ನೇತೃತ್ವದಲ್ಲಿ ರಚಿಸಿದ ಸಮಿತಿಯ ವರದಿಯನ್ನು ಯಥಾವತ್ತಾಗಿ ಜಾರಿಗಾಗಿ ಸರ್ಕಾರ ಬಧ್ದವಾಗಿದ್ದು ಮಾನ್ಯ ಮುಖ್ಯಮಂತ್ರಿರವರ ಗಮನಕ್ಕೆ ತಂದು ಆದೇಶ ಹೊರಡಿಸುವುದಾಗಿ ತಿಳಿಸಿದರು.
2. ಸೇವಾ ಭದ್ರತೆ ಅಥವಾ ಖಾಯಂಯಾತಿ ಬಗ್ಗೆ ಚರ್ಚಿಸಲಾಗಿ 60 ವರ್ಷದವರೆಗೆ ಅಸ್ಸಾಂ ಮಾದರಿ ಸೇವಾ ಭದ್ರತೆ ನೀಡಲು ಪರಿಗಣಿಸಲು ತಿಳಿಸುತ್ತಾ ಕಠಿಣ ರೈಡರ್ ಗಳನ್ನು (ನೀತಿ) ರೂಪಿಸಿ ಯಾವೂದೆ ನೌಕರರ ಸೇವೆಯನ್ನು ವಿನಾ ಕಾರಣ ಅನುರ್ಜಿತ ಗೋಳಿಸದೆ ಕರ್ನಾಟಕದ ಒಂದು ಮಾದರಿಯನ್ನು ರೂಪಿಸಿ ಸೇವೆ ಭಧ್ರತೆಗೆ ಕ್ರಮವಹಿಸುವುದಾಗಿ ತಿಳಿಸಿದರು
3. ಬೀದರ್ ಮಾದರಿ ಹೊರಗುತ್ತಿಗೆ ನೌಕರರಿಗಾಗಿ ಸಂಘ ಸ್ಥಾಪಿಸುವ ಬಗ್ಗೆ ಚರ್ಚಿಸಲಾಗಿ ಮಾದರಿ “ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅಥವಾ ರಾಜ್ಯ ಮಟ್ಟದಲ್ಲಿ ” ಒಂದು ಸಂಘ ಅಥವಾ ಸಂಸ್ಥೆ ಮಾಡಿ ಅದರ ಮೂಲಕ ನೇಮಕಾತಿ ಮತ್ತು ವೇತನ ಪಾವತಿ ಮಾಡುವ ಬಗ್ಗೆ ಆದೇಶ ನೀಡಲು ಸಂಘವು ವಿನಂತಿಸಲಾಗಿ ಎಜೆಂನ್ಸಿ ಮುಖೇನ ನೇಮಕವಾದ ಹೊರಗುತ್ತಿಗೆ ನೌಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕೆಲವು ದೂರುಗಳ ಬಗ್ಗೆ ಅರಿವಿದ್ದು ಈ ವಿಷಯವಾಗಿ ಪರಿಶೀಲಿಸಿ ಹೊರಗುತ್ತಿಗೆ ನೌಕರರಿಗೆ ನ್ಯಾಯ ವದಗಿಸಲು ಶ್ರಮವಹಿಸಲಾಗುವುದು.
4. ವೈದ್ಯಕೀಯ ಚಿಕಿತ್ಸಾ ಮರು ಪಾವತಿಗಾಗಿ ಚರ್ಚೆ ನಡೆಸಲಾಗಿ ಮೊದಲಿಗೆ ಆಯುಷ್ಮಾನ್ ಭಾರತ್ (AB-ARK) ಯೋಜನೆ ಮಂಜೂರು ಮಾಡುವುದಾಗಿ ಒಪ್ಪಿ ನಂತರದ ದಿನಗಳಲ್ಲಿ ಸಂಘದ ಸಹಮತಿಯೊಂದಿಗೆ ಖಾಯಂ ನೌಕರರಿಗೆ ನೀಡಿದಂತೆ ಕರ್ನಾಟಕ ಸರಕಾರದ ಜ್ಯೋತಿ ಸಂಜೀವಿನಿ ಯೋಜನೆಗೆ ಕ್ರಮವಹಿಸಲು ತಿಳಿಸಿದ್ದಾರೆ
5. ವಿಮೆ ಸೌಲಭ್ಯ ಕರ್ತವ್ಯ ನಿರತ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ವಿಮೆ ಸೌಲಭ್ಯ ನೀಡುವ ಬಗ್ಗೆ ಒಪ್ಪಿಕೊಳ್ಳಲಾಗಿದೆ
6. ಕೃಪಾಂಕ ಮತ್ತು ವಯೋಮಿತಿ – ಎಲ್ಲಾ ನೌಕರರಿಗೂ ಯಾವುದೇ ಇಲಾಖೆಯ ಸರ್ಕಾರಿ ಹುದ್ದೆ ನೇಮಕಾತಿಯಲ್ಲಿ “ವಿಶೇಷ ಸೇವಾ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ” ಸೌಲಭ್ಯಗಳನ್ನು ಆರೋಗ್ಯ ಇಲಾಖೆಯಲ್ಲಿ/ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ “ಎಲ್ಲ ತಾಂತ್ರಿಕ” ಸಿಬ್ಬಂದಿಗಳಿಗೂ ನೀಡಲು ಒಪ್ಪಿಗೆ ನೀಡಲಾಗಿದೆ.
BIGG BREAKING NEWS: ‘BBMP ಕಚೇರಿ’ಗಳ ಮೇಲೆ ‘ಎಸಿಬಿ ದಾಳಿ’ | ACB Raid
7. ವಿಶೇಷ ಸೇವಾ ಭತ್ಯೆ- ಎಲ್ಲಾ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ತುರ್ತು ಘಟಕಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ, ತಾಯಿ ಮತ್ತು ಮಕ್ಕಳ ಆರೋಗ್ಯ ಸೇವೆಯಲ್ಲಿ ಇರುವವರು, ಗ್ರಾಮೀಣ ಸೇವೆ ಸಲ್ಲಿಸುತ್ತಿರುವವರಿಗೆ, ಟಿ.ಬಿ., ಎಚ್.ಐ.ವಿ ಇತ್ಯಾದಿ ಮಾರಕ ರೋಗಗಳ ನಿಯಂತ್ರಣ ಸೇವೆಯಲ್ಲಿರುವವರು, ಆಂಬುಲೆನ್ಸ್ ವಾಹನ ಚಾಲಕರಿಗೆ, ಗ್ರೂಪ್ ಡಿ ಹಾಗೂ ಇತರೆ ನೌಕರರಿಗೆ ವಿಶೇಷ ಸೇವಾ ಭತ್ಯೆ ನೀಡಲು ಸರ್ಕಾರ ಒಪ್ಪಿದೆ
8. ವರ್ಗಾವಣೆ-ಚರ್ಚೆಯ ಸಂರ್ಧರ್ಭದಲ್ಲಿ ಈಗಾಗಲೇ ಹಲವಾರು ವರ್ಷದಿಂದ ಒಂದೇ ಕಡೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕನಿಷ್ಠ ಪಕ್ಷ “ವಿಶೇಷ ಪ್ರಕರಣ” ವೆಂದು ಜೀವಮಾನದಲ್ಲಿ ಕನಿಷ್ಟ ಒಂದು ಬಾರಿಯಾದರೂ ವರ್ಗಾವಣೆ ಅವಶ್ಯವಿರುವ ನೌಕರರಿಗೆ “ಜಿಲ್ಲೆಯಿಂದ ಜಿಲ್ಲೆಗೆ” ಅಥವಾ “ಜಿಲ್ಲೆಯ ಒಳಗಡೆ” ಖಾಲಿ ಹುದ್ದೆ ಇರುವ ಸ್ಥಳದಲ್ಲಿ ವರ್ಗಾವಣೆ ಹಾಗೂ ಪರಸ್ಪರ ವರ್ಗಾವಣೆಗೆ ಅವಕಾಶ ಮಾಡಿ ಆದೇಶ ನೀಡಲು ಮನವಿ ಮಾಡಲಾಗಿ ಮಾನವೀಯ ನೆಲೆಗಟ್ಟಿನಲ್ಲಿ ಪರಿಗಣಿಸಿ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
9. ರಜೆ ಸೌಲಭ್ಯಗಳು – ಕೇವಲ 10 ಸಾಂಧರ್ಭಿಕ ರಜೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ರಜೆಗಳು ಮಾತ್ರ ಇದ್ದು ಇದನ್ನು ಪುನರ್ ಪರಿಶೀಲಿಸಿ ಸಾಂಧರ್ಭಿಕ ರಜೆಗಳನ್ನು ಹೆಚ್ಚಿಸಲು ಮನವಿ ಮಾಡಲಾಗಿ ಅದಕ್ಕೆ ಸಕಾರಾತ್ಮಕವಾಗಿ ಹೆಚ್ಚಿಸುವುದಾಗಿ ಸಭೆಗೆ ತಿಳಿಸಿದರು ಹಾಗೂ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ(ವೀಕಲಿ ಆಫ್) ನೀಡುವ ಬಗ್ಗೆ ಮತ್ತು ರಜಾದಿನಗಳಂದು ಕರ್ತವ್ಯ ನಿರ್ವಹಿಸಿದ ದಿನಗಳಿಗೆ ಪರ್ಯಾಯ ರಜೆ ನೀಡುವ ಬಗ್ಗೆ ಚರ್ಚಿಸಿ ಆದೇಶಿಸುವುದಾಗಿ ಸಭೆಗೆ ತಿಳಿಸಿದರು ಮತ್ತು ಶಿಶು ಪಾಲನಾ ರಜೆಗಾಗಿ ಪ್ರಸ್ತಾಪಿಸಲಾಗಿ ಪರಿಶೀಲಿಸಿ ಸೂಕ್ತ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದರು.
10. ನೌಕರ ಕುಂದು-ಕೊರತೆಗಳ ಸಭೆ- ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ನೇತೃತ್ವದಲ್ಲಿ DHS ಸಭೆಯಲ್ಲಿ ಕಡ್ಡಾಯವಾಗಿ ಗುತ್ತಿಗೆ. ಹೊರಗುತ್ತಿಗೆ ನೌಕರರ ಕುಂದುಕೊರತೆ ಬಗ್ಗೆ ನಮ್ಮ ಸಂಘದ ಜಿಲ್ಲಾ ಪದಾಧಿಕಾರಿಗಳೊಂದಿಗೆ ಸಭೆಗಳನ್ನು ಮಾಡಿ ಕ್ರಮವಹಿಸುವುದು ಹಾಗೂ ನಮ್ಮ ರಾಜ್ಯಮಟ್ಟದ ರಾಜ್ಯ ಗುತ್ತಿಗೆ ಮತ್ತು ಹೊರಗುತ್ತಿಗೆ ಸಂಘದ ಪದಾಧಿಕಾರಿಗಳೊಂದಿಗೆ ಕುಂದುಕೊರತೆಗಳ ಸಭೆ ಮಾಡಲು ಒಪ್ಪಿಗೆ ಸೂಚಿಸಿದರು.
11. ಬಾಂಡ್ ಪದ್ಧತಿ ಹಾಗೂ ಒಂದು ದಿನ ವಿರಾಮ ರದ್ದು ಪಡಿಸುವ ಬಗ್ಗೆ- ಒಂದು ದಿನ (1 day) ವಿರಾಮ ನೀಡುವ ಹಾಗೂ ಪ್ರತಿ ವರ್ಷ ಬಾಂಡ್ ಪದ್ಧತಿಯನ್ನು ಕೈಬಿಡಲು ಛತ್ತೀಸಘಡ ಹಾಗೂ ಹರಿಯಾಣದಲ್ಲಿ ರದ್ದು ಪಡಿಸಿದ ಹಾಗೆ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ನಿರ್ಧರಿಸಿದ್ದಾರೆ.
12. HRIS ತಂತ್ರಾಂಶ ಅನುಷ್ಟಾನ ಮಾಡುವುದು- ಮಾನವ ಸಂಪನ್ಮೂಲ ನಿರ್ವಹಣೆಗಾಗಿ HRIS ತಂತ್ರಾಂಶವನ್ನು ಎರಡು-ಮೂರು ತಿಂಗಳೊಳಗೆ ಅನುಷ್ಟಾನ ಮಾಡುವುದಾಗಿ ಸಭೆಗೆ ತಿಳಿಸಿದರು
13. ಇಡಿಗಂಟು/ ಗ್ರಾಚ್ಯುಟಿ ಸೌಲಭ್ಯ ನೀಡುವ ಬಗ್ಗೆ (ಹಣರೂಪದ ಕೊಡುಗೆ)- ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಕರ್ನಾಟಕ ರಾಜ್ಯದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡುವಂತೆ ಮತ್ತು ಅಸ್ಸಾಂ ರಾಜ್ಯದಲ್ಲಿ ನೀಡಿರುವಂತೆ ಪರಿಶೀಲಿಸಿ ಕ್ರಮವಹಿಸಲಾಗುವುದು ಎಂದು ಸಭೆಗೆ ಮಾಹಿತಿ ಹಂಚಿಕೊಂಡರು.
14. ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ವಿಸ್ತರಣೆ ಮಾಡುವುದು- ಈ ಮೇಲೆ ಉಲ್ಲೇಖಿಸಿದ ಎಲ್ಲಾ ಬೇಡಿಕೆ ಹಾಗೂ ಸೇವಾ ಸೌಲಭ್ಯಗಳನ್ನು ಆರೋಗ್ಯ ಇಲಾಖೆಯ (ಇತರೆ ಯೋಜನೆಯ ಹಾಗೂ ಕಾರ್ಯಕ್ರಮಗಳಲ್ಲಿ, ಖಾಲಿ ಇರುವ ಎದುರು ಹುದ್ದೆಯ್ಲಲಿ ಕಾರ್ಯ ನಿರ್ವಹಿಸುತ್ತಿರುವ) ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ (ಅಡಿಯಲ್ಲಿ ಬರುವ ವೈದ್ಯಕೀಯ ಶಿಕ್ಷಣ ಕಾಲೇಜ್ ಗಳು ಮತ್ತು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ) ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೂ ವಿಸ್ತರಣೆ ಮಾಡುವಂತೆ ಸಂಘವು ಮನವಿ ಮಾಡಲಾಗಿ ಅದಕ್ಕೆ ಸಕಾರಾತ್ಮಕವಾಗಿ ಸಭೆಯಲ್ಲಿ ಅಧಿಕಾರಿಗಳು ಸ್ಪಂಧಿಸಿದರು.
ಈ ಹಿಂದಿನ ಸಾಲಿನಲ್ಲಿ ನಡೆದ ಸಂಘಟನೆಯ ಮುಷ್ಕರದ 14 ದಿನಗಳ ಕಡಿತವಾದ ವೇತನ ಪಾವತಿಗಾಗಿ ಮಾಜಿ ಆರೋಗ್ಯ ಸಚಿವರ ಆದೇಶ ಪಾಲನೆಗೆ ಮನವಿ ಮಾಡಲಾಗಿ ಅಧಿಕಾರಿಗಳಿಂದ ಪುನರ್ ಪರಿಶೀಲನೆ ಮಾಡುವುದಾಗಿ ಸಭೆಗೆ ಮಾಹಿತಿ ನೀಡಿದರು ಮತ್ತು ಕೋವಿಡ್ ಕಾರಣ ಮೃತ ಪಟ್ಟ ನೌಕರರ ಕುಟುಂಬಕ್ಕೆ ಪರಿಹಾರದ ವಿಷಯವಾಗಿ ಸಂಘದ ಮನವಿಯಂತೆ ಉಳಿದ ಗುತ್ತಿಗೆ ನೌಕರರ ಮೃತ ಕುಟುಂಬಗಳಿಗೆ ಪರಿಹಾರ ಒದಗಿಸಲು ಕ್ರಮವಹಿಸಲಾಗುವುದು ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಈ ಮೇಲ್ಕಾಣಿಸಿದ ಎಲ್ಲಾ ಚರ್ಚೆಗಳು ನೌಕರರ ಪೂರಕ ಹಾಗೂ ಸಕಾರಾತ್ಮಕವಾಗಿ ಈ ಸಭೆ ನಡೆಯಲು ಕಾರಣಿಕರ್ತರಾದ ಮಾನ್ಯ ಡಾ.ಸುಧಾಕರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮತ್ತು ಸಂಘದ ಗೌರವಾದ್ಯಕ್ಷರಿಗೆ ಸಂಘಟನೆಯು ಅಭಿನಂದನೆ ಸಲ್ಲಿಸುತ್ತದೆ ಹಾಗೂ ತಡಮಾಡದೆ ಚರ್ಚಿತ ಎಲ್ಲಾ ವಿಷಯಗಳನ್ನು ಆದೇಶ ಮಾಡುವ ಮೂಲಕ ನೌಕರ ಹಿತ ಕಾಪಾಡಲು ಆಗ್ರಹಿಸುತ್ತದೆ ಒಂದು ವೇಳೆ ವಿಳಂಬ ಧೋರಣೆ ಅನುಸರಿಸಿದ್ದಲ್ಲಿ 15 ದಿನಗಳ ನಂತರ ಧರಣಿ ಮುಷ್ಕರ ಮಾಡಲು ನಿರ್ಧರಿಸಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತಸ್ವಾಮಿಯವರು ತಿಳಿಸಿರುತ್ತಾರೆ.