ಮೈಸೂರು: ರಾಜ್ಯ ಸರ್ಕಾರದಿಂದ ಶಾಲಾ-ಕಾಲೇಜುಗಳಲ್ಲಿ ( School and College ) ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶಿಸಲಾಗಿದೆ. ಹಿಜಾಬ್ ಧರಿಸಿ ( Hijab Row ) ಬಂದ್ರೂ, ಕೇಸರಿ ಶಾಲು, ಹಸಿರು ಶಾಲು, ನೀಲಿ ಶಾಲು ಧರಿಸಿ ಬಂದ್ರೂ ತರಗತಿ ಇಲ್ಲ. ನಿಮ್ಮ ಮಸೀದಿಯಲ್ಲಿ ನಿಮಗೆ ಪ್ರವೇಶವಿಲ್ಲ. ಅಲ್ಲಿ ನಿಮ್ಮ ಹಕ್ಕಿಗಾಗಿ ಧ್ವನಿ ಎತ್ತಿ. ಅದನ್ನು ಬಿಟ್ಟು ಶಿಕ್ಷಣ ವ್ಯವಸ್ಥೆಯಲ್ಲಿ ಹೋರಾಟ ಮಾಡಬೇಡಿ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ( Minister B C Nagesh ) ತಿಳಿಸಿದ್ದಾರೆ.
ದಯವಿಟ್ಟು ವಿದ್ಯಾರ್ಥಿಗಳು ಶಾಂತಿ ಕದಡುವ ಕೆಲಸ ಮಾಡಬೇಡಿ – ಸಿಎಂ ಬಸವರಾಜ ಬೊಮ್ಮಾಯಿ ಮನವಿ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಕುಂದಾಪುರದಲ್ಲಿ ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಲಾಗಿದೆ ಎನ್ನುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಿದ್ಯಾರ್ಥಿನಿಯರನ್ನು ರಸ್ತೆಯಲ್ಲಿ ನಿಲ್ಲಿಸೋದಕ್ಕೆ ಇದು ಪಾಕಿಸ್ತಾನವಲ್ಲ. ಅವರು ನಮ್ಮ ಮಕ್ಕಳೇ, ಹೀಗಾಗಿ ಅವರನ್ನು ಕೊಠಡಿಯಲ್ಲಿ ಪ್ರತ್ಯೇಕವಾಗಿ ಕೂರಿಸಲಾಗಿದೆ ಎಂದು ತಿಳಿಸಿದರು.
ಮುಗ್ಧ ಹೆಣ್ಣಮಕ್ಕಳನ್ನು ಕೆಲ ರಾಜಕಾರಣಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳೋದಕ್ಕೆ ಹೀಗೆಲ್ಲಾ ಮಾಡ್ತಾ ಇದ್ದಾರೆ. ಇದು ಧರ್ಮ ಶಿಕ್ಷಣವಲ್ಲ. ಹಿಜಾಬ್ ಧರಿಸುವ ವಿದ್ಯಾರ್ಥಿನಿಯರು ಅರ್ಥ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಾಲಾ ಆವರಣದ ಗೇಟ್ ವರೆಗೂ ಹಿಜಾಬ್ ಧರಿಸಿ ಬನ್ನಿ, ನಾವೇನು ಬೇಡ ಎನ್ನುವುದಿಲ್ಲ. ಅದಕ್ಕೆ ನಮ್ಮ ತಕರಾರೂ ಇಲ್ಲ. ಅದ್ರೇ ನಿಮಗೆ ಪಾಠ ಬೇಕಾದ್ರೇ.. ತರಗತಿಯಲ್ಲಿ ಕುಳಿತು ಪಾಠ ಕೇಳೋದಕ್ಕೆ ಸಮವಸ್ತ್ರ ಧರಿಸಿಯೇ ಬರಬೇಕು. ನಿಮ್ಮ ಮಸೀದಿ ಒಳಗೆ ನಿಮಗೆ ಪ್ರವೇಶ ಇಲ್ಲ. ಆ ಬಗ್ಗೆ ಹೋರಾಟ ಮಾಡಿ. ನಿಮ್ಮ ಹಕ್ಕಿಗಾಗಿ ಧ್ವನಿ ಎತ್ತಿ. ಶಿಕ್ಷಣ ವ್ಯವಸ್ಥೆಯ ಒಳಗೆ ಹೋರಾಟ ಬೇಡ ಎಂದು ತಿಳಿಸಿದರು.
Lata Mangeshkar : ಲತಾ ಮಂಗೇಶ್ಕರ್ ಗೆ ಅಂತಿಮ ನಮನ :ಕೈ ಎತ್ತಿ ದುವಾ ಪಠಿಸಿದ ಶಾರುಖ್ ಫೋಟೋ ವೈರಲ್