ಮೈಸೂರು: ರಾಜ್ಯದಲ್ಲಿ, ದೇಶದಲ್ಲಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ( School Uniform ) ಧರಿಸಿಯೇ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿರೋದು. ಇದು ಇಂದಿನ ಪದ್ದತಿ ಅಲ್ಲ. ಈ ಹಿಂದಿನಿಂದಲೂ ನಡೆದುಕೊಂಡು ಬರ್ತಾ ಇದೆ. ಈಗ ರಾಜಕೀಯ ಪಿತೂರಿಗೆ ಹಿಜಾಬ್ ವಿವಾದವಾಗಿ ಎದ್ದಿದೆ. ವಿವಾದದ ಹಿಂದೆ ರಾಜಕೀಯ ಪ್ರಚೋದನೆಯ ಪಿತೂರಿ ಇದೆ. ವಿದ್ಯಾರ್ಥಿಗಳು ಹಿಜಾಬ್ ( Hijab Row ), ಕೇಸರಿ ಶಾಲು ಧರಿಸಿ ಬಂದ್ರೆ ತರಗತಿ ಇಲ್ಲ. ಸಮವಸ್ತ್ರ ಧರಿಸಿ ಬರುವಂತೆ ಶಿಕ್ಷಣ ಸಚಿವರು ತಿಳಿಸಿದ್ದಾರೆ.
ದಯವಿಟ್ಟು ವಿದ್ಯಾರ್ಥಿಗಳು ಶಾಂತಿ ಕದಡುವ ಕೆಲಸ ಮಾಡಬೇಡಿ – ಸಿಎಂ ಬಸವರಾಜ ಬೊಮ್ಮಾಯಿ ಮನವಿ
ನಗರದಲ್ಲಿ ಇಂದು ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲಾ ವಾತಾವರಣದಲ್ಲಿ ಸಮವಸ್ತ್ರ ಹಿಂದಿನಿಂದಲೂ ಧರಿಸಿ ಬರಲಾಗುತ್ತಿದೆ. ಇಲ್ಲ ಯಾವುದೇ ಧಾರ್ಮಿಕ ಉಡುಪು ಧರಿಸಿ ಬರೋದನ್ನು ಕಂಡಿಲ್ಲ. ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶಾದ್ಯಂತವೂ ಇದೇ ನಿಯಮವಿದೆ ಎಂದರು.
ಶಿವಮೊಗ್ಗ: ಸದ್ಯಾದ್ರಿ ಕಾಲೇಜಿನಲ್ಲಿ ತಾರಕಕ್ಕೇರಿದ ಹಿಜಾಬ್-ಕೇಸರಿ ಶಾಲು ಸಂಘರ್ಷ
ರಾಜಕೀಯ ಪಿತೂರಿ, ರಾಜಕೀಯ ನಾಯಕರ ಪ್ರಚೋದನೆಯಿಂದಾಗಿ ಈಗ ಹಿಜಾಬ್ ವಿವಾದ ತಾರಕಕ್ಕೇರಿದೆ. ವಿದ್ಯಾರ್ಥಿಗಳು ಪ್ರಚೋದನೆಗೆ ಒಳಗಾಗಬಾರದು. ಈ ಹಿಂದೆ ಬರ್ತಾ ಇದ್ದಂತೆ ಸಮವಸ್ತ್ರ ಧರಿಸಿ ತರಗತಿಗೆ ಹಾಜರಾಗಬೇಕು. ಕೇಸರಿ ಶಾಲು, ಹಿಜಾಬ್ ಧರಿಸಿ ಬಂದ್ರೇ ತರಗತಿಗೆ ಎಂಟ್ರಿ ಇಲ್ಲ ಎಂಬುದಾಗಿ ಪುನಹ ಎಚ್ಚರಿಕೆ ನೀಡಿದರು.
Lata Mangeshkar : ಲತಾ ಮಂಗೇಶ್ಕರ್ ಗೆ ಅಂತಿಮ ನಮನ :ಕೈ ಎತ್ತಿ ದುವಾ ಪಠಿಸಿದ ಶಾರುಖ್ ಫೋಟೋ ವೈರಲ್