ಆಸ್ಟ್ರೇಲಿಯಾ : ಇತ್ತೀಚಿನ ದಿನಗಳಲ್ಲಿ ದೇಶ-ವಿದೇಶಗಳಲ್ಲಿ ಶಾಖದ ಅಲೆ ಹೆಚ್ಚಾಗುತ್ತಿದೆ. ಬಿಸಿಲಿನ ಬೇಗೆಯಿಂದಾಗಿ ಆಗ್ನೇಯ ಆಸ್ಟ್ರೇಲಿಯಾದ ತೀರದಲ್ಲಿ ಹಲವು ಮಿಲಿಯನ್ ಮೀನುಗಳು ಸತ್ತು ಹೋಗಿವೆ.
ಪ್ರವಾಹದಿಂದಾಗಿ ಅಲ್ಲಿನ ಪರಿಸ್ಥಿತಿಗಳು ಹದಗೆಟ್ಟಿದ್ದು, ಶಾಖದ ಅಲೆಗಳಿಂದಾಗಿ ತೀವ್ರ ಪರಿಣಾಮ ಬೀರಿದೆ. ಪ್ರವಾಹಗಳು ಕಡಿಮೆಯಾಗುತ್ತಿದ್ದಂತೆ ಆಮ್ಲಜನಕದ ಮಟ್ಟ ಕಡಿಮೆಯಾಗಿರುವುದರಿಂದ ಸಾವು ಸಂಭವಿಸಿರಬಹುದು. ಬೆಚ್ಚನೆಯ ವಾತಾವರಣದಿಂದಾಗಿ ಮೀನುಗಳಿಗೆ ಹೆಚ್ಚಿನ ಆಮ್ಲಜನಕದ ಅಗತ್ಯವಿರುವ ಪರಿಸ್ಥಿತಿ ಹದಗೆಟ್ಟಿದೆ ಎಂದು ಇಲಾಖೆ ತಿಳಿಸಿದೆ.
ಸತ್ತ ಮೀನುಗಳಿಂದ ಭಯಾನಕ ವಾಸನೆ ಬರುತ್ತಿದೆ ಎಂದು ಮೆನಿಂಡಿಯ ಹೊರವಲಯದ ನಿವಾಸಿಗಳು ದೂರಿದ್ದು,. ಇದನ್ನು ಸ್ವಚ್ಛಗೊಳಿಸಲು ಪ್ರಾರಂಭಿಸಿದ್ದೇವೆ ಎಂದು ಸ್ಥಳೀಯರಾದ ಜಾನ್ ಡೆನಿಂಗ್ ಹೇಳಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಡಾರ್ಲಿಂಗ್-ಬಾಕಾ ನದಿಯಲ್ಲಿ ಮೀನುಗಳು ಸಾವಿನ ಸುದ್ದಿಗಳು ವರದಿಯಾಗುತ್ತಲೆ ಇವೆ. ಫೆಬ್ರವರಿ ಅಂತ್ಯದಲ್ಲಿ ಹತ್ತಾರು ಸಾವಿರ ಮೀನುಗಳು ಸತ್ತಿದ್ದವು. 2018 ರ ಕೊನೆಯಲ್ಲಿ ಮತ್ತು 2019 ರ ಆರಂಭದಲ್ಲಿ ತೀವ್ರವಾದ ಬರ ಪರಿಸ್ಥಿತಿಗಳಲ್ಲಿ ಮೆನಿಂಡಿ ನದಿಯಲ್ಲಿ ಲಕ್ಷಾಂತರ ಮೀನುಗಳು ಸಾವನ್ನಪ್ಪಿದ್ದವು.
ತಿಗಳ ಸಮಾಜವನ್ನು ಮೇಲೆತ್ತಬೇಕೆಂದು ನಿಗಮ ಸ್ಥಾಪನೆಯಾಗಿದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
PM Modi Karnataka Visit: ಮಾ.25ರಂದು ಕರ್ನಾಟಕದಲ್ಲಿ ಮತ್ತೆ ಪ್ರಧಾನಿ ಮೋದಿ ಹವಾ: ವಿವಿಧ ಯೋಜನೆಗಳ ಲೋಕಾರ್ಪಣೆ
OMG : ನಮ್ಮದೇ ದೇಶದ ಈ ‘ಪ್ರದೇಶ’ದಲ್ಲಿರೋ ಮಹಿಳೆಯರು ಒಟ್ಟಿಗೆ ‘ಐದೈದು ಪುರುಷ’ರನ್ನ ಮದುವೆ ಆಗ್ತಾರಂತೆ.!