ಸ್ಯಾನ್ ಫ್ರಾನ್ಸಿಸ್ಕೋ: ಹೆಚ್ಚು ಹೆಚ್ಚು ಸಂಸ್ಥೆಗಳು ಪ್ರತಿದಿನ ಉದ್ಯೋಗಿಗಳನ್ನು ವಜಾಗೊಳಿಸುವುದರಿಂದ ವಜಾಗೊಳಿಸುವ ಸಮಸ್ಯೆಗಳು ಬೆಳೆಯುತ್ತಲೇ ಇವೆ. ಉದ್ಯೋಗಿಗಳಿಗೆ ಇದೀಗ ಮತ್ತೊಂದು ದೊಡ್ಡ ಹೊಡೆತ ಎದುರಾಗಿದೆ. ಅತಿದೊಡ್ಡ ಟೆಕ್ ಸಂಸ್ಥೆಗಳಲ್ಲಿ ಒಂದಾದ ಮೈಕ್ರೋಸಾಫ್ಟ್(Microsoft) ತನ್ನ ಶೇಕಡಾ 5 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಲು ಸಿದ್ಧವಾಗಿದೆ ಎಂದು ಸ್ಕೈ ನ್ಯೂಸ್ ಅನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಈ ಉದ್ಯೋಗ ಕಡಿತವು ಇಂದಿನಿಂದಲೇ ಪ್ರಾರಂಭವಾಗಬಹುದು ಎನ್ನಲಾಗಿದೆ. ಎಂಜಿನಿಯರಿಂಗ್ ವಿಭಾಗಗಳಲ್ಲಿ ಸಾವಿರಾರು ಉದ್ಯೋಗ ಕಡಿತಗಳನ್ನು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಂಸ್ಥೆಯು ಸುಮಾರು 1000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಮೈಕ್ರೋಸಾಫ್ಟ್ ಆರ್ಥಿಕತೆ ಸಮಸ್ಯೆಯನ್ನು ಎದುರಿಸುತ್ತಿರುವ ಇತ್ತೀಚಿನ ದೊಡ್ಡ ಕಂಪನಿಯಾಗಿದೆ. ಇದರಲ್ಲಿ 220,000 ಕ್ಕಿಂತ ಹೆಚ್ಚು ಉದ್ಯೋಗಿಗಳಿದ್ದಾರೆ.
WATCH VIDEO: ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿ ಹುಡುಗಿಯರಿಬ್ಬರ ಅಸಭ್ಯ ವರ್ತನೆ… ವಿಡಿಯೋ ವೈರಲ್
WATCH VIDEO: ನಡು ರಸ್ತೆಯಲ್ಲೇ ಸ್ಕೂಟಿಯಲ್ಲಿ ಹುಡುಗಿಯರಿಬ್ಬರ ಅಸಭ್ಯ ವರ್ತನೆ… ವಿಡಿಯೋ ವೈರಲ್