ಮಾನವನ ವೀರ್ಯ, ಅಂಡಾಣುಗಳಲ್ಲಿ ‘ಮೈಕ್ರೋಪ್ಲಾಸ್ಟಿಕ್’ಗಳು ಪತ್ತೆ

ನವದೆಹಲಿ : ಮೊದಲ ಬಾರಿಗೆ ವಿಜ್ಞಾನಿಗಳು ಮಾನವ ವೀರ್ಯ ಮತ್ತು ಅಂಡಾಣು ದ್ರವದಲ್ಲಿ ಮೈಕ್ರೋಪ್ಲಾಸ್ಟಿಕ್‌’ಗಳನ್ನ ಕಂಡುಹಿಡಿದಿದ್ದಾರೆ. ಪ್ಯಾರಿಸ್‌ನಲ್ಲಿ ನಡೆದ ಯುರೋಪಿಯನ್ ಸೊಸೈಟಿ ಆಫ್ ಹ್ಯೂಮನ್ ರಿಪ್ರೊಡಕ್ಷನ್ ಅಂಡ್ ಎಂಬ್ರಿಯಾಲಜಿ (ESHRE) ಯ 41 ನೇ ವಾರ್ಷಿಕ ಸಭೆಯಲ್ಲಿ ಈ ಆವಿಷ್ಕಾರವನ್ನು ಘೋಷಿಸಲಾಯಿತು. ಸಂಶೋಧಕರು 69% ಮಹಿಳೆಯರ ಫೋಲಿಕ್ಯುಲಾರ್ ದ್ರವದಲ್ಲಿ (ಇದು ಅಂಡಾಶಯದಲ್ಲಿ ಮೊಟ್ಟೆಯನ್ನ ಸುತ್ತುವರೆದಿದೆ) ಮತ್ತು ಅಧ್ಯಯನದಲ್ಲಿ ಭಾಗವಹಿಸಿದ 55% ಪುರುಷರ ವೀರ್ಯ ದ್ರವದಲ್ಲಿ ಮೈಕ್ರೋಪ್ಲಾಸ್ಟಿಕ್‌’ಗಳನ್ನ ಕಂಡುಕೊಂಡಿದ್ದಾರೆ. ಈ ದ್ರವಗಳು ನೈಸರ್ಗಿಕ ಗರ್ಭಧಾರಣೆ ಮತ್ತು ಇನ್-ವಿಟ್ರೊ ಫಲೀಕರಣ … Continue reading ಮಾನವನ ವೀರ್ಯ, ಅಂಡಾಣುಗಳಲ್ಲಿ ‘ಮೈಕ್ರೋಪ್ಲಾಸ್ಟಿಕ್’ಗಳು ಪತ್ತೆ