ಬ್ಯಾಡಗಿ, ಕಾಶ್ಮೀರಿ…. ಈ ಖಾರ ಖಾರ ಮೆಣಸಿನ ಕಾಯಿಯ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ – Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language



Food India Lifestyle

ಬ್ಯಾಡಗಿ, ಕಾಶ್ಮೀರಿ…. ಈ ಖಾರ ಖಾರ ಮೆಣಸಿನ ಕಾಯಿಯ ಕುರಿತು ಒಂದಿಷ್ಟು ಇಂಟ್ರೆಸ್ಟಿಂಗ್ ಮಾಹಿತಿ

ಸ್ಪೆಷಲ್ ಡೆಸ್ಕ್ : ಅಡುಗೆ ಅಂದತಕ್ಷಣ ನಾವು ನೋಡೋದು ಅಡುಗೆಗೆ ಹಾಕುವ ಸಾಂಬಾರ ಪದಾರ್ಥಗಳು . ಅದೆಷ್ಟು ವಿಧದ ಸಂಬಾರ ಪದಾರ್ಥಗಳಿವೆ , ಅದೆಷ್ಟು ರುಚಿಯ ಅಡುಗೆಗಳಿವೆ. ಅಡುಗೆಯನ್ನು ಬೇರೆಬೇರೆ ಪ್ರಾಂತ್ಯಗಳಿಗೆ ಹೋಲಿಸಿದರೆ ಅದರದೇಯಾದ ರುಚಿ, ಪರಿಮಳ ಹೊಂದಿದೆ. ಅವಕ್ಕೆ ಕಾರಣವಾದ ಸಾಂಬಾರ ಪದಾರ್ಥ ಗಳು ಇವೆ; ಲವಂಗ,ಚೆಕ್ಕೆ, ಕಾಳು ಮೆಣಸು, ಜಾಯಿ ಕಾಯಿ, ಜೀರಿಗೆ , ಕೊತ್ತಂಬರಿ, ಹಳದಿ, ಮೆಣಸು , ಹೀಗೆ ಹೇಳುತ್ತಾ ಹೋದರೆ ತುಂಬಾನೇ ಇದೆ ಇದರಲ್ಲಿ ಕೆಂಪು ಮೆಣಸಿಗೆ ಬಹಳ ವಿಶೇಷತೆ ಇದೆ . ಇದು ಭಾರತ ದೇಶದಲ್ಲ. ಇದು ಭಾರತ ದೇಶಕ್ಕೆ 15 ನೇ ಶತಮಾನ ದಲ್ಲಿ ಪೋರ್ಚುಗೀಸರು ತೋರಿಸಿಕೊಟ್ಟರು.

ಅನೇಕ ವಿಧದ ಮೆಣಸುಗಳಿವೆ . ಆಯಾ ಪ್ರಾಂತ್ಯದಲ್ಲಿ ಮೆಣಸು ಬೆಳೆಸುತ್ತಾರೆ. ಕೆಂಪು ಮೆಣಸುಗಳಲ್ಲಿ ಅನೇಕ ವಿಧ ಗಳಿವೆ ಅವುಗಳಲ್ಲಿ ಕೆಲವು ಇಲ್ಲಿ ತಿಳಿಸುವೆ.

1. ಕಾಶ್ಮೀರಿ ಮೆಣಸು : ಹೆಸರಿನ ಹಾಗೇ ಕಾಶ್ಮೀರದಲ್ಲಿ ಅಲ್ಲೇ ಹತ್ತಿರದ ಕೆಲವು ಸ್ಥಳ ಗಳಲ್ಲಿ ಬೆಳೆಸುತ್ತಾರೆ. ಇದು ಕಡು ಕೆಂಪು ಬಣ್ಣದಿಂದ ಇದ್ದು ಕಡಿಮೆ ಖಾರ ಹೊಂದಿದೆ .ಆದ ಕಾರಣ ಇದನ್ನು ಹೆಚ್ಚಾಗಿ ಬಾಣಸಿಗರು ಅಡುಗೆ ಮನೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ . ಇದು ಹೆಚ್ಚಾಗಿ ಎಲ್ಲಾ ದಿನಸಿ ಅಂಗಡಿ ಗಳಲ್ಲಿ ದೊರೆಯುತ್ತದೆ. ಉತ್ತರ ಭಾರತದ ಕೆಲವು ಅಡುಗೆ ಗಳಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.

2. ಗುಂಟೂರು ಮೆಣಸು : ಇದು ಇನ್ನೊಂದು ವಿದ್ಧದ ಮೆಣಸು. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ಬಂದಿದೆ. ಈ ಜಿಲ್ಲೆ ಹೇರಳವಾಗಿ ಮೆಣಸು ಮಾರಾಟ ಮಾಡುತ್ತದೆ ಹಾಗಾಗಿ ಗುಂಟೂರನ್ನು ‘ಮೆಣಸಿನ ಅಂಗಳ’ ವೆಂದು ಕರೆಯುತ್ತಾರೆ. ಅತ್ಯಧಿಕ ಖಾರ ದಿಂದ ಕೂಡಿದ್ದು ಇದನ್ನು ಆಂಧ್ರಪ್ರದೇಶದ ಕೆಲವು ಅಡಿಗೆ ಗಳಲ್ಲಿ ಉಪಯೋಗಿಸುತ್ತಾರೆ . ಹಾಗಾಗಿ ಅಲ್ಲಿಯ ಆಹಾರ ಬೇರೆ ಆಹಾರಕ್ಕೆ ಹೋಲಿಸಿದರೆ ಅಧಿಕ ಖಾರ ಹೊಂದಿದೆ.

3.ಜ್ವಾಲಾ ಮೆಣಸು : ಇದು ಬಹಳ ಮಂದಿಗೆ ತಿಳಿಯದ ಹೆಸರು , ಆದರೆ ಇದು ಭಾರತದ ಅನೇಕ ಕಡೆ ಮನೆಗಳಲ್ಲಿ ಉಪಯೋಗಿಸುತ್ತಾರೆ .ಇದು ಹಸಿರು ಅಥವಾ ಕೆಂಪು ಬಣ್ಣ ದಿಂದಲೂ ಇರುತ್ತದೆ . ಇದು ಕೂಡ ಖಾರದಿಂದಿದೆ . ಇದನ್ನು ವಡಾ ಪಾವು , ಸಮೋಸ , ಬಟಾಟೆ ವಡಾ , ಪಲ್ಯ ಹೀಗೆ ಅನೇಕ ಅಡುಗೆಗಳಲ್ಲಿ ಬಳಸುತ್ತಾರೆ .

4. ಬ್ಯಾಡಗಿ ಮೆಣಸು : ಇದು ಕರ್ನಾಟಕದಲ್ಲಿ ಹೆಚ್ಚಾಗಿ ಬೆಳೆಸುತ್ತಾರೆ . ದಕ್ಷಿಣ ಕನ್ನಡ , ಉಡುಪಿ ಯಲ್ಲಿ ಬಹಳವಾಗಿ ಉಪಯೋಗಿಸುತ್ತಾರೆ. ಇದು ಕಡು ಕೆಂಬಣ್ಣದಳ್ಳಿದಲ್ಲಿದ್ದು ಇದು ಬಹಳ ಖಾರವೂ ಇಲ್ಲದ ಕಾರಣ ಕಾಶ್ಮೀರಿ ಮೆಣಸಿನ ಬದಲು ಉಪಯೋಗಿಸುತ್ತಾರೆ.

5.ಬೋರಿಯ ಮೆಣಸು : ಇದು ದುಂಡಗೆ ಚಿಕ್ಕದಾಗಿದ್ದ ಕಾರಣ ಇದನ್ನು ಬೋರಿಯ ಎಂದು ಕರೆಯುತ್ತಾರೆ .ಮಧ್ಯಮ ಖಾರ ಹೊಂದಿದ್ದು ಹೆಚ್ಚಾಗಿ ಒಗ್ಗರಣೆಗೆ ಪಲ್ಯಗಳಲ್ಲಿ ಬಳಸುತ್ತಾರೆ.

6. ಸಂಕೇಶ್ವರಿ ಮೆಣಸು : ಇದು ಮಹಾರಾಷ್ಟ್ರ ಕೋಲ್ಲಾಪುರ ದ ಸಂಕೇಶ್ವರ ಎಂಬ ಸ್ಥಳ ದಿಂದ ಬಂದ ಕಾರಣ ಸಂಕೇಶ್ವರ ಮೆಣಸು ಎಂದು ಕರೆಯುತ್ತಾರೆ . ಇದನ್ನು ಮಹಾರಾಷ್ಟ್ರೀಯ ಅಡುಗೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದು ಬಹಳ ಖಾರ ಇದನ್ನು ಗರಂ ಮಸಾಲಾ ಗಳಲ್ಲಿ ಉಪಯೋಗಿಸುತ್ತಾರೆ .

7. ನಾಗ ಮತ್ತು ಭೂತ್ ಜೋಲಂಕಿಯ ಮೆಣಸು : ಪ್ರಪಂಚದಲ್ಲೇ ಅತ್ಯಂತ ಅಧಿಕ ಖಾರವನ್ನು ಹೊಂದಿದ ಮೆಣಸು. ಇದನ್ನು ಉತ್ತರ ಭಾರತದ ಈಶಾನ್ಯ ಭಾಗ ಗಳಾದ ನಾಗಾಲ್ಯಾಂಡ್ , ಅರುಣಾಚಲ ಪ್ರದೇಶ , ಅಸ್ಸಾಂ , ಮಣಿಪುರ ಗಳಲ್ಲಿ ಬೆಳೆಸುತ್ತಾರೆ. ಬಹಳ ಖಾರ ದಿಂದ ಕೂಡಿರುವ ಕಾರಣ ಭಾರತದ ಮನೆ ಅಡುಗೆಯಲ್ಲಿ ಕಾಣಸಿಗದು . ಇದರ ಉಪ್ಪಿನಕಾಯಿ ಬಳಸುತ್ತಾರೆ . ಅಲ್ಲಿಯ ಜನ ಕಾಡಾನೆ ಗಳನ್ನು ಓಡಿಸಲು ಈ ಮೆಣಸನ್ನು ಉಪಯೋಗಿಸುತ್ತಾರೆ

8.ರಾಮ ನಾಡ್ ಮುಂಡು ಮೆಣಸು : ಇದರ ಮೂಲ ತಮಿಳುನಾಡಿನ ರಾಮನಾಡ್ ಪ್ರದೇಶದ ಮುಂಡು . ಗೋಲಾಕಾರದಲ್ಲಿದ್ದು ಖಾರದಿಂದಿದೆ . ಇದನ್ನು ಸಾಂಬಾರ್ , ಚಟ್ನಿ ಇನ್ನಿತರ ಅಡುಗೆ ಗಳಲ್ಲಿ ಬಳಸುತ್ತಾರೆ . ಹೀಗೆ ಭಾರತದಲ್ಲಿ ಇನ್ನು ಅನೇಕ ರೀತಿಯ ಮೆಣಸುಗಳಿವೆ . ಕೆಲವು ಮೆಣಸುಗಳನ್ನು ದೂರದ ಹಳ್ಳಿ ಗಳಲ್ಲಿ ಬೆಳೆಸುತ್ತಾರೆ . ಹೆಚ್ಚು ಪ್ರಚಲಿತದಲ್ಲಿ ಇರುವ ಮೆಣಸುಗಳ ಪರಿಚಯ ಇಲ್ಲಿ ತಿಳಿಸಿದೆ. .







error: ಕದಿಯೋದು ಬಿಟ್ಟು ಸ್ವಂತವಾಗಿ ಬರೆಯೋದು ಕಲಿಯಿರಿ